Home » Tulsi Plant: ಇವುಗಳನ್ನು ತುಳಸಿ ಗಿಡಕ್ಕೆ ಅರ್ಪಿಸಿ ಅದೃಷ್ಟವನ್ನು ನಿಮ್ಮದಾಗಿಸಿ!

Tulsi Plant: ಇವುಗಳನ್ನು ತುಳಸಿ ಗಿಡಕ್ಕೆ ಅರ್ಪಿಸಿ ಅದೃಷ್ಟವನ್ನು ನಿಮ್ಮದಾಗಿಸಿ!

0 comments

Tulsi Plant: ಪೂಜನೀಯ ಸಸ್ಯ ಆಗಿರುವ ತುಳಸಿ ಗಿಡವನ್ನ ಪೂಜಿಸುವುದರಿಂದ ಅನೇಕ ಲಾಭಗಳು ಪಡೆಯಬಹುದಾಗಿದೆ. ಹೌದು, ಸನಾತನ ಧರ್ಮದ ಪ್ರಕಾರ ತುಳಸಿ ಗಿಡವು (Tulasi Plant) ಮನೆಯ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿ ಅದೃಷ್ಟ ಬೆಳಗುತ್ತದೆ. ಅದರಲ್ಲೂ ಮುಖ್ಯವಾಗಿ ತುಳಸಿ ಗಿಡಕ್ಕೆ ಕೆಲ ವಸ್ತುಗಳನ್ನ ಅರ್ಪಣೆ ಮಾಡಿದರೆ, ಸಂಪತ್ತು ಹಾಗೂ ಅದೃಷ್ಟ ಬರ ಮಾಡಿಕೊಳ್ಳಬಹುದಾಗಿದೆ. ಅವುಗಳು ಯಾವುದೆಂದು ಇಲ್ಲಿ ತಿಳಿಸಲಾಗಿದೆ.

Parliament: ಮೋದಿ ಪ್ರಮಾಣವಚನ ಸ್ವೀಕರಿಸುವಾಗ ರಾಹುಲ್ ಗಾಂಧಿ ಮಾಡಿದ್ದೇನು? ಕೈಯಲ್ಲಿ ತೋರಿಸಿದ್ದೇನು?

2ಹೊತ್ತು ತುಪ್ಪದ ದೀಪ: ಜ್ಯೋತಿಷ್ಯದ ಪ್ರಕಾರ ಬೆಳಗ್ಗೆ ಹಾಗೂ ಸಂಜೆ ಸೂರ್ಯಸ್ತದ ಸಮಯದಲ್ಲಿ ತುಪ್ಪದ ದೀಪ ಹಚ್ಚಿದರೆ ಇದರಿಂದ ಲಕ್ಷ್ಮಿ ದೇವಿಯ ಕೃಪೆ ಸಹ ಸಿಗುತ್ತದೆ ಎನ್ನುವ ನಂಬಿಕೆ ಇದೆ. ನಿಮಗೆ ಯಾವುದಾದರೂ ಹಣಕಾಸಿನ ಸಮಸ್ಯೆ ಇದ್ದರೆ ತಪ್ಪದೇ ತುಪ್ಪದ ದೀಪವನ್ನ ಹಚ್ಚಬೇಕು.

ಹಸುವಿನ ಶುದ್ಧ ಹಾಲು:

ಗುರುವಾರ ಹಾಗೂ ಶುಕ್ರವಾರದಂದು ಶುದ್ಧ ಹಸುವಿನ ಹಾಲನ್ನ ಅರ್ಪಿಸಬೇಕು ಎನ್ನಲಾಗುತ್ತದೆ. ಇದರಿಂದ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಗುತ್ತದೆ.

ಅರಿಶಿನ -ನೀರು:

ತಾಮ್ರದ ಪಾತ್ರೆಯಲ್ಲಿ ನೀರಿನ ಜೊತೆಗೆ ಸ್ವಲ್ಪ ಅರಿಶಿನವನ್ನ ಹಾಕಿ ಅದನ್ನ ತುಳಸಿ ಗಿಡಕ್ಕೆ ಅರ್ಪಣೆ ಮಾಡಿದರೆ ಅದ್ಭುತ ಫಲಗಳು ಸಿಗುತ್ತದೆ. ಇದರಿಂದ ನಿಮ್ಮ ಮನೆಯಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಇದ್ದರೆ ಅದಕ್ಕೆ ಪರಿಹಾರ ಸಹ ಸಿಗುತ್ತದೆ.

ಕಬ್ಬಿನ ರಸ ಅರ್ಪಣೆ:

ತುಳಸಿ ಗಿಡಕ್ಕೆ ಕಬ್ಬಿನ ರಸವನ್ನ ಅರ್ಪಿಸಿದರೆ ಬಹಳ ಒಳ್ಳೆಯದು ಎನ್ನಲಾಗುತ್ತದೆ. ಈ ವಸ್ತುವನ್ನ ಅರ್ಪಿಸಿದರೆ ಎಲ್ಲಾ ತೊಂದರೆಗಳು ಸಹ ಪರಿಹಾರವಾಗುತ್ತದೆ.

Kabab Colour Ban: ಗೋಬಿ ಬೆನ್ನಲ್ಲೇ ರಾಜ್ಯದಲ್ಲಿ ಕೆಂಪು ಕೆಂಪು ಕಬಾಬ್ ಕೂಡ ಬ್ಯಾನ್ !!

 

You may also like

Leave a Comment