Uttar pradesh: ಪತ್ನಿಯ ಸಾವಿನಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದ ಪತಿಯೊಬ್ಬ ತನ್ನ ಖಾಸಗಿ ಅಂಗವನ್ನೇ ಕತ್ತರಿಸಿಕೊಂಡಿರುವಂತಹ ಶಾಕಿಂಗ್ ಘಟನೆ ಉತ್ತರ ಪ್ರದೇಶದ (Uttar pradesh) ಬುದೌನ್ ಬಿನೌರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
25 ವರ್ಷದ ವ್ಯಕ್ತಿ ಯನ್ನ ಪತ್ನಿಯ ಸಾವಿನ ಬಳಿಕ ಭಾವನಾತ್ಮಕವಾಗಿ ತೊಂದರೆಗೆ ಒಳಗಾಗಿದ್ದ. ಆತ ತನ್ನ ದಿವಂಗತ ಪತ್ನಿಯ ನೆನಪಿನಲ್ಲಿಯೇ ಜೀವನ ಕಳೆಯುತ್ತಿದ್ದ. ಹಲವಾರು ದಿನಗಳಿಂದ ತೀವ್ರ ಆಘಾತ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭ ತನ್ನ ಖಾಸಗಿ ಅಂಗವನ್ನೇ ಕತ್ತರಿಸಿಕೊಂಡಿದ್ದಾನೆ. ವರದಿಗಳ ಪ್ರಕಾರ ಘಟನೆ ನಡೆದಾಗ ಆತನ ಕುಟುಂಬಸ್ಥರು ಗೋಧಿ ಕೊಯ್ಲು ಮಾಡಲು ಹೊರಗಡೆ ಹೋಗಿದ್ದರು.
ನಂತರ ಕುಟುಂಬಸ್ಥರು ಮನೆಗೆ ಆಗಮಿಸಿದಾಗ ವಿಚಾರ ಬೆಳಕಿಗೆ ಬಂದಿದೆ. ರಕ್ತಸಿಕ್ತ ಸ್ಥಿತಿಯಲ್ಲಿ ಹಾಗೂ ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ತಕ್ಷಣ ಜಿಲ್ಲಾ ಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದರೂ ಗಾಯದ ತೀವ್ರತೆಯಿಂದಾಗಿ ಹಾಗೂ ಅತಿಯಾದ ರಕ್ತಸ್ರಾವದಿಂದಾಗಿ ಬರೇಲಿಯ ಖಾಸಗಿ ವೈದ್ಯಕೀಯ ಕಾಲೇಜಿಗೆ ಶಿಫಾರಸು ಮಾಡಿದ್ದಾರೆ.
