Home » Government employees : ಹೊಸ ವರ್ಷಕ್ಕೆ ಸರ್ಕಾರಿ ನೌಕರರ ವೇತನದಲ್ಲಿ ಮತ್ತೆ ಭರ್ಜರಿ ಏರಿಕೆ

Government employees : ಹೊಸ ವರ್ಷಕ್ಕೆ ಸರ್ಕಾರಿ ನೌಕರರ ವೇತನದಲ್ಲಿ ಮತ್ತೆ ಭರ್ಜರಿ ಏರಿಕೆ

1 comment
Government employees

Government employees : ರಾಜ್ಯ ಹಾಗೂ ಕೇಂದ್ರ ಸರಕಾರಿ ನೌಕರರಿಗೆ ದಸರಾ ಹಾಗೂ ದೀಪಾವಳಿ ಪ್ರಯುಕ್ತ ಸರ್ಕಾರಗಳು ಬಂಪರ್ ಗಿಫ್ಟ್ ಗಳನ್ನು ನೀಡುತ್ತಿವೆ. ಡಿಎ ಹೆಚ್ಚಳ, HRA ಹೆಚ್ಚಳ, ಮೂಲವೇತನ ಹೆಚ್ಚಳ ಹೀಗೆ ಒಂದೊಂದು ರೀತಿಯಲ್ಲೂ ಸಂಬಳವನ್ನು ಹೆಚ್ಚಿಸಿ ನೌಕರರಿಗೆ ಸಹಕಾರ ನೀಡುತ್ತಾ ಖುಷಿಪಡಿಸುತ್ತಿವೆ. ಅಂತೆಯೇ ಇದೀಗ ಮತ್ತೊಂದು ಗುಡ್ ನ್ಯೂಸ್ ಹೊರ ಬಿದ್ದಿದ್ದು, ಹೊಸ ವರ್ಷದ ಆರಂಭದಲ್ಲಿ ಸರ್ಕಾರಿ ನೌಕರರ(Government employees) ವೇತನದಲ್ಲಿ ಭರ್ಜರಿ ಏರಿಕೆಯಾಗಲಿದೆಯಂತೆ !!

ಹೌದು, ಸರ್ಕಾರಿ ನೌಕರರು ಇದೀಗ ತುಟ್ಟಿಭತ್ಯೆ ಹೆಚ್ಚಳ ಆಗಿರುವುದರಿಂದ, ದೀಪಾವಳಿ ಬೋನಸ್ ಸಿಗುವ ಆಸೆಯಿಂದ ಸಂತೋಷದಿಂದಿದ್ದಾರೆ. ಈ ನಡುವೆ ಇದೀಗ ಸರ್ಕಾರದಿಂದ ಹೊರಬಿದ್ದಂತ ಹೊಸ ಅಪ್ಡೇಟ್ ಒಂದು ಅವರ ಸಂತೋಷವನ್ನು ಇಮ್ಮಡಿಗೊಳಿಸಿದೆ. ಯಾಕೆಂದರೆ 2024ರ ಆರಂಭದಲ್ಲಿ ಅಂದರೆ ಹೊಸ ವರ್ಷದ ಆದಿಯಲ್ಲೇ ಸರ್ಕಾರಿ ನೌಕರರ ಡಿ.ಎ. 50% ಅಥವಾ ಅದಕ್ಕಿಂತ ಹೆಚ್ಚು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತಿದ್ದೆ. ಇದರಿಂದಾಗಿ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ ದೊರೆಯುತ್ತಿದೆ.

ಅಂದಹಾಗೆ ಮುಂದಿನ ಪರಿಷ್ಕರಣೆಯು ಜನವರಿ 2024 ರಲ್ಲಿ ನಡೆಯಲಿದೆ. ಆದರೆ, ಹೆಚ್ಚಳವು ಜುಲೈ 2023 ರಿಂದ ಡಿಸೆಂಬರ್ 2023 ರವರೆಗಿನ AICPI ಸೂಚ್ಯಂಕ ಸಂಖ್ಯೆಗಳನ್ನು ಆಧರಿಸಿರುತ್ತದೆ. ಇಲ್ಲಿಯವರೆಗೆ ಸೆಪ್ಟೆಂಬರ್‌ನ AICPI ಸಂಖ್ಯೆಗಳು ಲಭ್ಯವಾಗಿವೆ. ಇದರ ಆಧಾರದ ಮೇಲೆ ಹೊಸ ವರ್ಷದ ಆರಂಬದಲ್ಲೇ ಡಿಎ ಹೆಚ್ಚಳ ಆಗುವುದು ಬಹುತೇಕ ಫಿಕ್ಸ್ ಆಗಿದೆ. ಒಂದುವೇಳೆ ಇದು ಜಾರಿಯಾದರೆ ನೌಕರರಿಗೆ ಬಂಪರ್ ಲಾಟ್ರಿ ಹೊಡೆದಂತಾಗುತ್ತದೆ.

ಇದನ್ನೂ ಓದಿ: Teacher Recruitment Counselling: ಶಿಕ್ಷಕರ ನೇಮಕಾತಿ ಕುರಿತು ಬಂತು ಬಿಗ್ ಅಪ್ಡೇಟ್- ಕೌನ್ಸೆಲಿಂಗ್ ದಿನಾಂಕ ಪ್ರಕಟ

You may also like

Leave a Comment