ಇತ್ತೀಚೆಗಷ್ಟೇ ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿ ಅಸಭ್ಯ ವರ್ತನೆ ತೋರಿದ ಘಟನೆ ಎಲ್ಲೆಡೆ ಸುದ್ದಿಯಾಗಿತ್ತು. ಈ ಘಟನೆಯ ಬಳಿಕ ಏರ್ ಇಂಡಿಯಾ ತನ್ನ ಹಾರಾಟದ ಸಮಯದಲ್ಲಿ ಮದ್ಯವನ್ನು ಪೂರೈಸುವ ನೀತಿಯನ್ನು ಬದಲಾವಣೆ ಮಾಡಿದೆ.
ಇತ್ತೀಚೆಗೆ ವಿಮಾನದಲ್ಲಿ ಮಹಿಳೆಯ ಮೇಲೆ ವ್ಯಕ್ತಿಯ ನಡೆಯಿಂದ ಮುಜುಗರಕ್ಕೀಡಾದ ಮಹಿಳೆ ಏರ್ ಇಂಡಿಯಾ ದ ಮೇಲೆ ಆರೋಪ ಮಾಡಿದ ಬೆನ್ನಲ್ಲೇ ಏರ್ ಇಂಡಿಯಾ ಮದ್ಯ ಪೂರೈಕೆಯಲ್ಲಿ ದೊಡ್ಡ ಬದಲಾವಣೆ ತಂದಿದೆ. ಪರಿಷ್ಕೃತ ನೀತಿಯ ಅನುಸಾರ, ವಿಮಾನದ ಕ್ಯಾಬಿನ್ ಸಿಬ್ಬಂದಿಗೆ ಅಗತ್ಯವಿರುವಾಗ ವಿವೇಚನೆಯಿಂದ ಮದ್ಯವನ್ನು ಪೂರೈಸಲು ತಿಳಿಸಲಾಗಿದೆ ಎನ್ನಲಾಗಿದೆ.
ಅಮೆರಿಕನ್ ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಷನ್ (ಎನ್‌ಆರ್‌ಎ) ಮಾರ್ಗಸೂಚಿಗಳ ಅನುಸಾರ ವಿಮಾನದಲ್ಲಿ ಆಲ್ಕೋಹಾಲ್ ನೀಡುವ ಅಸ್ತಿತ್ವದಲ್ಲಿರುವ ನೀತಿಯನ್ನು ವಿಮಾನಯಾನವು ಪರಿಶೀಲಿಸಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ ಎನ್ನಲಾಗಿದೆ. ಏರ್ ಇಂಡಿಯಾದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿ ಅನುಚಿತ ವರ್ತನೆ ಪ್ರಕರಣದಲ್ಲಿ ಮಹಿಳೆಯ ದೂರಿನ ಅನುಸಾರ ವಿಮಾನದ ಮುಖ್ಯ ಪೈಲಟ್‌ನ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ. ಸದ್ಯ ಈ ಆದೇಶವನ್ನು ರದ್ದುಗೊಳಿಸುವಂತೆ ವಾಯುಯಾನ ವಲಯದ ಆರು ಉದ್ಯೋಗಿಗಳ ಸಂಘಟನೆಗಳ ಜಂಟಿ ವೇದಿಕೆಯು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಮನವಿ ಮಾಡಿದೆ ಎಂದು ತಿಳಿದುಬಂದಿದೆ.
ಮಂಗಳವಾರ (ಜನವರಿ 24) ಪರಿಷ್ಕೃತ ನೀತಿಗೆ ಸಂಬಂಧಿಸಿದಂತೆ ಇದೀಗ ಅನೇಕ ವಿಚಾರಗಳು ಮುನ್ನೆಲೆಗೆ ಬಂದಿದೆ. ಗಮನಾರ್ಹವಾಗಿ, ಕಳೆದ ಕೆಲವು ದಿನಗಳಲ್ಲಿ 2 ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಕರ ಅನುಚಿತ ವರ್ತನೆಗಾಗಿ ಟಾಟಾ ಗ್ರೂಪ್ ಒಡೆತನದ ಏರ್‌ಲೈನ್ಸ್ (ಏರ್ ಇಂಡಿಯಾ) ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ದಂಡ ವಿಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಪರಿಷ್ಕೃತ ನೀತಿಯ ಅನುಸಾರ ಸಿಬ್ಬಂದಿ ಸದಸ್ಯರು ತಾವೇ ಖುದ್ದಾಗಿ ತಂದು ಕುಡಿಯುವಂತಿಲ್ಲ ಜೊತೆಗೆ ಆಲ್ಕೋಹಾಲ್ಯುಕ್ತ ಪಾನೀಯಗಳನ್ನು ಸೂಕ್ತ ಮತ್ತು ಸುರಕ್ಷಿತ ರೀತಿಯಲ್ಲಿ ಒದಗಿಸಬೇಕು ಎಂದು ಸೂಚಿಸಲಾಗಿದೆ. ಇದರ ಜೊತೆಗೆ ಅತಿಥಿಗಳಿಗೆ ಆಲ್ಕೋಹಾಲ್ (ಮತ್ತಷ್ಟು) ನೀಡಲು ನಿರಾಕರಿಸುವುದನ್ನು ಕೂಡ ಸೇರ್ಪಡೆಗೊಳಿಸಲಾಗಿದೆ.ಸದ್ಯ, ಪರಿಷ್ಕೃತ ನೀತಿಯಲ್ಲಿ ನಿಖರವಾದ ಬದಲಾವಣೆಯನ್ನು ಸ್ಪಷ್ಟ ಪಡಿಸಲು ಸಾಧ್ಯವಿಲ್ಲ ಎನ್ನಲಾಗಿದೆ.
