Home » Anand Mahindra Post : ರಸ್ತೆಯ ಡಿಸೈನ್‌ ಗೆ ಮಾರು ಹೋದ ಆನಂದ್‌ ಮಹೀಂದ್ರಾ! ಏನಂದ್ರು ? ಇಲ್ಲಿದೆ ಮಾಹಿತಿ

Anand Mahindra Post : ರಸ್ತೆಯ ಡಿಸೈನ್‌ ಗೆ ಮಾರು ಹೋದ ಆನಂದ್‌ ಮಹೀಂದ್ರಾ! ಏನಂದ್ರು ? ಇಲ್ಲಿದೆ ಮಾಹಿತಿ

0 comments
Anand Mahindra Post

Anand Mahindra Post : ದೇಶದಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವೊಂದು ಪ್ರದೇಶಗಳಲ್ಲಿ ವಾಹನಗಳ ಓಡಾಟ ಹೆಚ್ಚಾಗಿ, ಟ್ರಾಫಿಕ್ ಜಾಮ್ ಆಗುತ್ತದೆ. ಈ ಟ್ರಾಫಿಕ್(Traffic) ಅನ್ನು ನಿಯಂತ್ರಿಸಲು ರಸ್ತೆಯಲ್ಲಿ ಟ್ರಾಫಿಕ್ ಸಿಗ್ನಲ್(Traffic signal) ಹಾಗೂ ಅಲ್ಲೇ ಪಕ್ಕದಲ್ಲಿ ಟ್ರಾಫಿಕ್ ಪೊಲೀಸರು(traffic police) ಇರುವುದನ್ನು ಗಮನಿಸಿರುತ್ತೇವೆ. ಆದರೆ ಟ್ರಾಫಿಕ್ ಸಿಗ್ನಲ್ ಇಲ್ಲದೇ ವಾಹನಗಳನ್ನು ನಿಯಂತ್ರಿಸಬಹುದಂತೆ, ಹಾಗಂತ ಆನಂದ್​ ಮಹೀಂದ್ರಾ ಪೋಸ್ಟ್( (Anand Mahindra Post) ಮೂಲಕ ತಿಳಿಸಿದ್ದಾರೆ. ಹೇಗೆ? ಬನ್ನಿ ಪೂರ್ಣ ಮಾಹಿತಿ ತಿಳಿಯೋಣ.

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್(Twitter) ಖಾತೆಯಲ್ಲಿ, ಟ್ರಾಫಿಕ್ ಸಿಗ್ನಲ್ ಗಳಿಲ್ಲದೆ ಸಂಚಾರವನ್ನು ಸಂಪೂರ್ಣವಾಗಿ ನಿರ್ವಹಿಸುವ ಅದ್ಭುತ ರಸ್ತೆ ವಿನ್ಯಾಸದ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಮಾದರಿಯನ್ನು ಯೆಮೆನ್ ಎಂಜಿನಿಯರ್ ಮುಹಮ್ಮದ್ ಆವಾಸ್ 2016 ರಲ್ಲಿ ವಿನ್ಯಾಸಗೊಳಿಸಿದ್ದಾರೆ. ಇದು ಸಂಚಾರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇಲ್ಲಿ ಟ್ರಾಫಿಕ್ ಸಿಗ್ನಲ್ ಗಳ ಅಗತ್ಯವಿಲ್ಲ ಎನ್ನಲಾಗಿದೆ.

ಈ ವೀಡಿಯೋದಲ್ಲಿ, ವಾಹನಗಳು(vehicle) ಯಾವುದೇ ನಿಲುಗಡೆಯಿಲ್ಲದೆ ರಸ್ತೆಯಲ್ಲಿ ಚಲಿಸುವುದನ್ನು ಮತ್ತು ಯಾವುದೇ ದಟ್ಟಣೆಯಿಲ್ಲದೆ ಅರ್ಧ ಸುತ್ತಿನಲ್ಲಿ ತಿರುವು ತೆಗೆದುಕೊಳ್ಳುವುದನ್ನು ನೋಡಬಹುದು. ಅಲ್ಲದೆ, ಟ್ರಾಫಿಕ್ ಜಾಮ್ ಆಗುವ ಸಂಭವವೂ ಇಲ್ಲ. ವಾಹನಗಳು ಲೀಲಾಜಾಲವಾಗಿ ಸಾಗುತ್ತವೆ.

ಈ ವಿಡಿಯೋ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಒಬ್ಬರು “ಈ ಮಾದರಿಯು ಅಸಮರ್ಥವಾಗಿದೆ, ಯಾಕಂದ್ರೆ ಇದರಿಂದ ಹೆಚ್ಚು ಇಂಧನ ಹಾಳಾಗುತ್ತದೆ ಮತ್ತು ಎಡ ತಿರುವುಗಳಿಗೆ ಸಹ ಹೆಚ್ಚಿನ ಸಮಯ ಬೇಕಾಗುತ್ತದೆ” ಎಂದಿದ್ದಾರೆ.

ಇನ್ನೋರ್ವ “ವಿನ್ಯಾಸವು ನೋಡಲು ಚೆನ್ನಾಗಿಯೇ ಕಾಣುತ್ತದೆ, ಆದರೆ ಇದು ಭಾರಿ ಟ್ರಾಫಿಕ್ ಜಾಮ್ ಅನ್ನು ಸೃಷ್ಟಿಸುತ್ತದೆ. ಅಂದರೆ ಯಾರಾದರೂ ನೇರವಾಗಿ ಹೋಗಲು ಬಯಸಿದರೆ ಮೊದಲ ಬಲಕ್ಕೆ ತಿರುಗಲು, ಮತ್ತೆ ಎಡಕ್ಕೆ, ಪ್ರತಿ ಬಾರಿಯೂ ವ್ಯಕ್ತಿಯು ಸುಗಮ ತಿರುಗುವಿಕೆಗಾಗಿ ರಸ್ತೆಯ ಎಡ ಬದಿಗೆ ಬರಬೇಕಾಗುತ್ತದೆ, ಆಗ ಸ್ಥಳವು ಎರಡು ಬದಿಯಿಂದ ಕಡಿಮೆ ಮತ್ತು ಭಾರಿ ದಟ್ಟಣೆಯನ್ನು ಹೊಂದಿದೆ” ಎಂದು ಹೇಳಿದರು. ಒಟ್ಟಾರೆ ಆನಂದ್ ಮಹೀಂದ್ರಾ ಪೋಸ್ಟ್ ಸಖತ್ ವೈರಲ್(viral) ಆಗಿದ್ದು, ಚರ್ಚೆಗೆ ಒಳಗಾಗಿದೆ.

You may also like

Leave a Comment