ಹೊಸ ವರ್ಷ ಜನವರಿಯಲ್ಲಿ 16 ದಿನಗಳ ರಜೆಯಿದ್ದು, ಆರು ಶನಿವಾರ ಮತ್ತು ಭಾನುವಾರದ ರಜೆಗಳೂ ಸೇರಿಕೊಂಡಿದೆ. ಜನವರಿ 26ರಂದು ಗಣರಾಜ್ಯೋತ್ಸವ ಅಂಗವಾಗಿ ಸಾರ್ವತ್ರಿಕ ರಜೆ ಇರುತ್ತದೆ. ಉಳಿದ ರಜೆಗಳು ಕೆಲ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುತ್ತವೆ.
2026ರ ಜನವರಿ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳಿವು
ಜನವರಿ 1, ಗುರುವಾರ: ಹೊಸ ವರ್ಷಾಚರಣೆ (ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ರಜೆ)
ಜನವರಿ 2, ಶುಕ್ರವಾರ: ಹೊಸ ವರ್ಷಾಚರಣೆ, ಮನ್ನಂ ಜಯಂತಿ (ಕೇರಳ ಹಾಗೂ ಮಿಝೋರಾಮ್ ರಾಜ್ಯಗಳಲ್ಲಿ ರಜೆ)
ಜನವರಿ 3, ಶನಿವಾರ: ಹಜ್ರತ್ ಅಲಿ ಜಯಂತಿ (ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರಪ್ರದೇಶ ಮತ್ತು ಮಿಝೋರಾಮ್ ರಾಜ್ಯಗಳಲ್ಲಿ ರಜೆ)
ಜನವರಿ 4: ಭಾನುವಾರದ ರಜೆ
ಜನವರಿ 10: ಎರಡನೇ ಶನಿವಾರದ ರಜೆ
ಜನವರಿ 11: ಭಾನುವಾರದ ರಜೆ
ಜನವರಿ 12, ಸೋಮವಾರ: ಸ್ವಾಮಿ ವಿವೇಕಾನಂದ ಜಯಂತಿ (ಉತ್ತರಪ್ರದೇಶದಲ್ಲಿ ರಜೆ)
ಜನವರಿ 14, ಬುಧವಾರ: ಮಕರ ಸಂಕ್ರಾಂತಿ / ಬಿಹು ಮಾಘ (ಗುಜರಾತ್, ಒಡಿಶಾ, ಅಸ್ಸಾಂ, ಅರುಣಾಚಲ ರಾಜ್ಯಗಳಲ್ಲಿ ರಜೆ)
ಜನವರಿ 15, ಗುರುವಾರ: ಮಕರ ಸಂಕ್ರಾಂತಿ, ಉತ್ತರಾಯಣ ಪುಣ್ಯಕಾಲ, ಪೊಂಗಲ್, ಮಾಘೆ ಸಂಕ್ರಾಂತಿ (ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ, ಸಿಕ್ಕಿಂ ರಾಜ್ಯಗಳಲ್ಲಿ ರಜೆ)
ಜನವರಿ 16, ಶುಕ್ರವಾರ: ತಿರುವಳ್ಳುವರ್ ದಿನ (ತಮಿಳುನಾಡಿನಲ್ಲಿ ರಜೆ)
ಜನವರಿ 17, ಶನಿವಾರ: ಉಳವರ್ ತಿರುನಾಳ್ (ತಮಿಳುನಾಡಿನಲ್ಲಿ ರಜೆ)
ಜನವರಿ 18: ಭಾನುವಾರದ ರಜೆ
ಜನವರಿ 23, ಶುಕ್ರವಾರ: ನೇತಾಜಿ ಸುಭಾಷ್ ಚಂದ್ರ ಬೋಸ್, ಸರಸ್ವತಿ ಪೂಜೆ, ವೀರ ಸುರೇಂದ್ರಸಾಯಿ ಜಯಂತಿ (ತ್ರಿಪುರ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ರಜೆ)
ಜನವರಿ 24: ನಾಲ್ಕನೇ ಶನಿವಾರದ ರಜೆ
ಜನವರಿ 25: ಭಾನುವಾರದ ರಜೆ
ಜನವರಿ 26, ಸೋಮವಾರ: ಗಣರಾಜ್ಯೋತ್ಸವ (ಎಲ್ಲೆಡೆ ರಜೆ)
