Home » Loan: ನೀವು ಸಹಕಾರಿ ಸಂಘಗಳಲ್ಲಿ ಸಾಲ ತೆಗೆದಿದ್ದೀರಾ? ಹಾಗಿದ್ರೆ ತಪ್ಪದೆ ಈ ಸ್ಟೋರಿ ನೋಡಿ !

Loan: ನೀವು ಸಹಕಾರಿ ಸಂಘಗಳಲ್ಲಿ ಸಾಲ ತೆಗೆದಿದ್ದೀರಾ? ಹಾಗಿದ್ರೆ ತಪ್ಪದೆ ಈ ಸ್ಟೋರಿ ನೋಡಿ !

1 comment
Loan

Loan: ಪ್ರತಿಯೊಬ್ಬರೂ ಒಂದಲ್ಲ ಒಂದು ವಿಚಾರಕ್ಕೆ ಸಾಲ ತೆಗೆದುಕೊಳ್ಳುತ್ತಾರೆ. ಕೆಲವರು ಮನೆ ಕಟ್ಟಲು ಸಾಲ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ಒಡವೆ ಖರೀದಿಗೆ, ವಾಹನ ಖರೀದಿ, ಜಾಗ ಖರೀದಿಗೆ ಸಾಲ ತೆಗೆದುಕೊಳ್ಳುವವರು ಇದ್ದಾರೆ.
ಅದೆಷ್ಟೋ ಜನರು ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಅಥವಾ ಮಾನಸಿಕ ಸ್ಥಿತಿ ಹದಗೆಟ್ಟಿರುವ ಪ್ರಕರಣಗಳು ಇದೆ. ನೀವು ಸರಕಾರಿ ಸಂಘಗಳಲ್ಲಿ ಸಾಲ ತೆಗೆದಿದ್ದೀರಾ? ಹಾಗಿದ್ರೆ ತಪ್ಪದೆ ಈ ಸ್ಟೋರಿ ಓದಿ!!!.

ದೇಶದಲ್ಲಿ ಸಾಲ (Loan) ಮಾಡಿ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಸಂಖ್ಯೆ ಬಹಳಷ್ಟು ಇದೆ. ಇವತ್ತಿಗೂ 50,000 , 1 ಲಕ್ಷ ಸಾಲ ಮಾಡಿ ತೀರಿಸಲು ಸಾಧ್ಯವಾಗದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡ ರೈತರು ಕೂಡ ಇದ್ದಾರೆ.
ಅದರಲ್ಲೂ ನ್ಯಾಷನಲ್ ಬ್ಯಾಂಕ್ ಗಳಲ್ಲಿ (National Bank) ಕೋಟಿ ಕೋಟಿ ಸಾಲ ಪಡೆದಂತ ಅನೇಕರು ದೇಶದಿಂದಲೇ ಪರಾರಿಯಾಗಿದ್ದಾರೆ.

ರಾಜ್ಯದ ಪಟ್ಟಣ ಸಹಕಾರಿ ಬ್ಯಾಂಕ್ (Cooperative Bank), ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ (Co-operative Central Bank) ಹಾಗೂ ವಿವಿಧ ಸಹಕಾರಿ ಬ್ಯಾಂಕ್ ಗಳಿಂದ 1,404 ಕೋಟಿ ಸಾಲವನ್ನು ಪಡೆದಿದ್ದ 2,888 ಮಂದಿ ಸಾಲ ತೀರಿಸಲು ಆಗದೇ ನಾಪತ್ತೆಯಾಗಿರುವ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ.

ಯಾವ ಊರಿನಲ್ಲಿ ಎಷ್ಟು ಮಂದಿ ಸಾವು ಮಾಡಿದ್ದಾರೆ ಗೊತ್ತಾ?
ಬೆಂಗಳೂರಲ್ಲಿ 2,485 ಮಂದಿಯಿಂದ 1,406 ಕೋಟಿ ರೂ, ಮೈಸೂರಲ್ಲಿ 132 ಸಾಲಗಾರರಿಂದ 57 ಲಕ್ಷ, ಬೆಳಗಾವಿ 15 ಮಂದಿಯಿಂದ 41 ಲಕ್ಷ ರೂ ಸೇರಿದಂತೆ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಗಳಲ್ಲಿ ಒಟ್ಟು 2,632 ಮಂದಿ ಪಟ್ಟಣ ಸಹಕಾರ ಬ್ಯಾಂಕ್ ಗಳಿಂದ ಸಾಲ ಪಡೆದಿದ್ದಾರೆ. ಇವರಲ್ಲಿ 2,888 ಮಂದಿ ಸಾಲವನ್ನು ತೀರಿಸಲಾಗದೇ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ.

ನಾಪತ್ತೆಯಾಗಿರುವ 2,888 ಮಂದಿಯಲ್ಲಿ ಬೆಂಗಳೂರಿನ ನೆಟ್ಟಕಲ್ಲಪ್ಪ ವೃತ್ತದಲ್ಲಿರುವ ಸಹಕಾರಿ ಬ್ಯಾಂಕಿನದ್ದೇ ಹೆಚ್ಚಿನ ಪಾಲು. ಈ ಹಿನ್ನಲೆಯಲ್ಲಿ ಈ ಬ್ಯಾಂಕ್ ಎವರ್ ಗ್ರೀನ್ ಕ್ರೆಡಿಟ್ ಎಂಬುದಾಗಿ ಹಾಗೂ 1,400 ಕೋಟಿ ರೂ.ಸಾಲವನ್ನು ಅನುತ್ಪಾದಕ ಆಸ್ತಿನಷ್ಟವೆಂದೂ ಘೋಷಿಸಿದೆ.

ಇದನ್ನೂ ಓದಿ: Manglore ಸೈಬರ್ ಕಳ್ಳರ ಕರಾಮತ್ತು ! ಸಬ್‌ ರಿಜಿಸ್ಪ್ರೇಶನ್‌ ಕಚೇರಿಯಲ್ಲೇ 100ಕ್ಕೂ ಅಧಿಕ ಮಂದಿಗೆ ಮಹಾಮೋಸ !

You may also like

Leave a Comment