Bank Holidays in September 2023: ಈಗ ಮುಂಚಿನಂತೆ ಗಂಟೆಗಟ್ಟಲೆ ಬ್ಯಾಂಕ್ ನಲ್ಲಿ ಕ್ಯೂ(Que) ನಿಂತು ಹಣ ಪಡೆಯಬೇಕಾಗಿಲ್ಲ ಆದರೂ ಕೂಡಾ ಕೆಲವೊಮ್ಮೆ ಬ್ಯಾಂಕ್ ಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾದಾಗ ರಜೆಯ ಬಗ್ಗೆ ಮಾಹಿತಿ ತಿಳಿಯದೆ ಭೇಟಿ ಕೊಟ್ಟರೆ ಕಾಲಹರಣ ಆಗುವ ಜೊತೆಗೆ ಅಂದುಕೊಂಡ ಕೆಲಸ ಕೂಡ ಆಗುವುದಿಲ್ಲ. ಹೀಗಿದ್ದಾಗ ಬ್ಯಾಂಕ್ ರಜೆಯ ಬಗ್ಗೆ ತಿಳಿದಿದ್ದರೆ ಒಳ್ಳೆಯದು.
ಈಗಾಗಲೇ ಗಣೇಶ ಚತುರ್ಥಿ (Ganesh chaturthi)ಹಬ್ಬದ ತಯಾರಿ ಎಲ್ಲೆಡೆ ಭರದಿಂದ ಸಾಗುತ್ತಿದೆ. ಸೆಪ್ಟೆಂಬರ್ 19 ರಂದು ಮಂಗಳವಾರ ಗಣೇಶ ಚತುರ್ಥಿ ಆಚರಣೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಯಾವುದೇ ಹಬ್ಬದ ಸಂದರ್ಭ ದೇಶದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುವುದು ಸಹಜ. ಅದೇ ರೀತಿ ,ಗಣೇಶ ಚತುರ್ಥಿ ದಿನವು ಕೂಡಾ ದೇಶದಲ್ಲಿ ಬ್ಯಾಂಕ್‌ಗಳು ಬಂದ್ ಆಗಿರಲಿದ್ದು, ಕೆಲವೆಡೆ ಹತ್ತು ದಿನಗಳ ಕಾಲ ಹಬ್ಬವನ್ನು ಸೆಪ್ಟೆಂಬರ್ 19 ರಿಂದ ಸೆಪ್ಟೆಂಬರ್ 28 ರವರೆಗೆ ಆಚರಿಸಲಾಗುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ರಜಾ ದಿನವು ಭಿನ್ನವಾಗಿದ್ದು, ಸೆಪ್ಟಂಬರ್ ನಲ್ಲಿ ಎಷ್ಟು ದಿನ ರಜೆಯಿರಲಿದೆ ಗೊತ್ತಾ?
ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಬ್ಯಾಂಕ್ ಗಳ ರಜಾ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಲಿದ್ದು, ಸೆಪ್ಟಂಬರ್ ತಿಂಗಳ ರಜಾ ದಿನಗಳ (Bank Holidays in September 2023)ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ತಿಂಗಳು 16 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ.
ಸೆಪ್ಟೆಂಬರ್ ನಲ್ಲಿ 16 ದಿನಗಳ ಕಾಲ ಬ್ಯಾಂಕುಗಳಿಗೆ ರಜೆಯಿರಲಿದ್ದು, ರಜೆಯ ಪಟ್ಟಿ ಹೀಗಿದೆ:
ಸೆಪ್ಟೆಂಬರ್ 3 – ಭಾನುವಾರ
ಸೆಪ್ಟೆಂಬರ್ 6 – ಕೃಷ್ಣಾ ಜನ್ಮಾಷ್ಠಮಿ (ಭುವನೇಶ್ವರ್, ಚೆನ್ನೈ, ಹೈದರಾಬಾದ್ ಮತ್ತು ಪಾಟ್ನಾದಲ್ಲಿ ಬ್ಯಾಂಕ್ ರಜೆ)
ಸೆಪ್ಟೆಂಬರ್ 7 – ಕೃಷ್ಣಾ ಜನ್ಮಾಷ್ಠಮಿ(ಅಹ್ಮದಾಬಾದ್, ಚಂದೀಗಡ, ಡೆಹ್ರಾಡೂನ್, ಗ್ಯಾಂಗ್ಟೋಕ್, ತೆಲಂಗಾಣ, ಜೈಪುರ್, ಜಮ್ಮು, ಕಾನಪುರ್, ಲಕ್ನೋ, ರಾಯಪುರ್, ರಾಂಚಿ, ಸಿಲಾಂಗ್, ಶಿಮ್ಲಾ ಮತ್ತು ಶ್ರೀನಗರದಲ್ಲಿ ಬ್ಯಾಂಕ್ ರಜೆ)
ಸೆಪ್ಟೆಂಬರ್ 9- ಎರಡನೇ ಶನಿವಾರ
ಸೆಪ್ಟೆಂಬರ್ 10 – ಭಾನುವಾರ
ಸೆಪ್ಟೆಂಬರ್ 17 – ಭಾನುವಾರ
ಸೆಪ್ಟೆಂಬರ್ 18 – ವರಸಿದ್ಧಿ ವಿನಾಯಕ ವ್ರತ ಮತ್ತು ವಿನಾಯಕ ಚತುರ್ಥಿ (ಬೆಂಗಳೂರು ಮತ್ತು ತೆಲಂಗಾಣದಲ್ಲಿ ಬ್ಯಾಂಕ್ ರಜೆ)
ಸೆಪ್ಟೆಂಬರ್ 19 – ಗಣೇಶ ಚತುರ್ಥಿ(ಅಹ್ಮದಾಬಾದ್, ಬೇಲಾಪುರ್, ಭುನವೇಶ್ವರ್, ಮುಂಬೈ, ನಾಗಪುರ್ ಮತ್ತು ಪಣಜಿಯಲ್ಲಿ ಬ್ಯಾಂಕ್ ರಜೆ)
ಸೆಪ್ಟೆಂಬರ್ 20: ಗಣೇಶ ಚತುರ್ಥಿ ಎರಡನೇ ದಿನ (ಕೊಚ್ಚಿ) ಮತ್ತು ನುವಾಖಾಯ್ (ಒಡಿಶಾ)
ಸೆಪ್ಟೆಂಬರ್ 22- ಶ್ರೀ ನಾರಾಯಣ ಗುರು ಸಮಾಧಿ ದಿನ(ಕೊಚ್ಚಿ, ಪಣಜಿ ಮತ್ತು ತಿರುವನಂತಪುರಂ)
ಸೆಪ್ಟೆಂಬರ್ 23 – ಮಹಾರಾಜಾ ಹರಿಸಿಂಗ್ ಜಿ ಅವರಾ ಜನ್ಮದಿನ (ನಾಲ್ಕನೇ ಶನಿವಾರ)
ಸೆಪ್ಟೆಂಬರ್ 24 – ಭಾನುವಾರ
ಸೆಪ್ಟೆಂಬರ್ 25 – ಶ್ರೀಮಂತ ಶಂಕರ ಜನ್ಮದಿನ(ಗುವಾಹಟಿಯಲ್ಲಿ ಬ್ಯಾಂಕ್ ರಜೆ)
ಸೆಪ್ಟೆಂಬರ್ 27 – ಪ್ರವಾದಿ ಮೊಹಮದ್ದ್ ಅವರ ಜನ್ಮದಿನ(ಜಮ್ಮು, ಕೊಚ್ಚಿ, ಶ್ರೀನಗರ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್ ರಜೆ)
ಸೆಪ್ಟೆಂಬರ್ 28 – ಈದ್ -ಮಿಲಾದ್(ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ಕಾನಪುರ್, ಲಕ್ನೋ, ಮುಂಬೈ ಮತ್ತು ನವದೆಹಲಿಯಲ್ಲಿ ಬ್ಯಾಂಕ್ ರಜೆ)
ಸೆಪ್ಟೆಂಬರ್ 29 – ಇಂದ್ರಜಾತಾ (ಗ್ಯಾಂಗ್ಟಕ್, ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕ್ ರಜೆ)
ಇದನ್ನೂ ಓದಿ: ಮಣಿಪಾಲ: Canara Bank ಮಹಿಳಾ ಅಧಿಕಾರಿ ಆತ್ಮಹತ್ಯೆ!!!
