Home » Bank Holiday in September 2023: ಬ್ಯಾಂಕ್ ಗ್ರಾಹಕರೇ ಗಮನಿಸಿ, ಸೆಪ್ಟೆಂಬರ್ ನಲ್ಲಿ ಅರ್ಧತಿಂಗಳಿಗಿಂತ ಹೆಚ್ಚು ರಜೆ! ಕರ್ನಾಟಕದಲ್ಲಿ ಎಷ್ಟು ದಿನ? ಕಂಪ್ಲೀಟ್ ವಿವರ ಇಲ್ಲಿದೆ!!!

Bank Holiday in September 2023: ಬ್ಯಾಂಕ್ ಗ್ರಾಹಕರೇ ಗಮನಿಸಿ, ಸೆಪ್ಟೆಂಬರ್ ನಲ್ಲಿ ಅರ್ಧತಿಂಗಳಿಗಿಂತ ಹೆಚ್ಚು ರಜೆ! ಕರ್ನಾಟಕದಲ್ಲಿ ಎಷ್ಟು ದಿನ? ಕಂಪ್ಲೀಟ್ ವಿವರ ಇಲ್ಲಿದೆ!!!

1 comment
Bank Holidays In September

Bank Holiday in September 2023: ಈಗ ಮುಂಚಿನಂತೆ ಗಂಟೆಗಟ್ಟಲೆ ಬ್ಯಾಂಕ್ ನಲ್ಲಿ ಕ್ಯೂ(Que) ನಿಂತು ಹಣ ಪಡೆಯಬೇಕಾಗಿಲ್ಲ ಆದರೂ ಕೂಡಾ ಕೆಲವೊಮ್ಮೆ ಬ್ಯಾಂಕ್ ಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾದಾಗ ರಜೆಯ ಬಗ್ಗೆ ಮಾಹಿತಿ ತಿಳಿಯದೆ ಭೇಟಿ ಕೊಟ್ಟರೆ ಕಾಲಹರಣ ಆಗುವ ಜೊತೆಗೆ ಅಂದುಕೊಂಡ ಕೆಲಸ ಕೂಡ ಆಗುವುದಿಲ್ಲ. ಹೀಗಿದ್ದಾಗ ಬ್ಯಾಂಕ್ ರಜೆಯ ಬಗ್ಗೆ ತಿಳಿದಿದ್ದರೆ ಒಳ್ಳೆಯದು.

ದೇಶದ ಹೆಚ್ಚಿನ ಬ್ಯಾಂಕ್ಗಳ ಕೆಲಸವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುವುದು ಗೊತ್ತಿರುವ ವಿಚಾರವೇ!! ಬ್ಯಾಂಕ್ ರಜೆಯ ಕುರಿತಾಗಿ, ಆರ್ ಬಿಐ(RBI) ಪ್ರತಿ ತಿಂಗಳ ಬಿಐ ಪ್ರತಿ ತಿಂಗಳು ರಜಾಪಟ್ಟಿ(Bank Holidays List)ಬಿಡುಗಡೆ ಮಾಡಲಿದ್ದು, ರಿಸರ್ವ್ ಬ್ಯಾಂಕ್ ಒಪ್ಪಿಗೆಯ ಬಳಿಕ ಬ್ಯಾಂಕ್ ರಜಾದಿನಗಳ ತೀರ್ಮಾನ ಕೈಗೊಳ್ಳಲಾಗುತ್ತದೆ. ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳು(Private Banks )ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಹೊರತುಪಡಿಸಿ ಭಾನುವಾರದಂದು ಕಾರ್ಯನಿರ್ವಹಿಸುವುದಿಲ್ಲ. ಅದರ ಅನ್ವಯ, ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಬ್ಯಾಂಕ್ ಗಳ ರಜಾ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಲಿದ್ದು, ಇದೀಗ ಮುಂದಿನ ತಿಂಗಳು ಸೆಪ್ಟಂಬರ್ ತಿಂಗಳ ರಜಾ ದಿನಗಳ (Bank Holidays in September 2023)ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ತಿಂಗಳು 16 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ.

ಸೆಪ್ಟೆಂಬರ್ ನಲ್ಲಿ 16 ದಿನಗಳ ಕಾಲ ಬ್ಯಾಂಕುಗಳಿಗೆ ರಜೆಯಿರಲಿದ್ದು, ರಜೆಯ ಪಟ್ಟಿ ಹೀಗಿದೆ:
ಸೆಪ್ಟೆಂಬರ್ 3 – ಭಾನುವಾರ
ಸೆಪ್ಟೆಂಬರ್ 6 – ಕೃಷ್ಣಾ ಜನ್ಮಾಷ್ಠಮಿ (ಭುವನೇಶ್ವರ್, ಚೆನ್ನೈ, ಹೈದರಾಬಾದ್ ಮತ್ತು ಪಾಟ್ನಾದಲ್ಲಿ ಬ್ಯಾಂಕ್ ರಜೆ)
ಸೆಪ್ಟೆಂಬರ್ 7 – ಕೃಷ್ಣಾ ಜನ್ಮಾಷ್ಠಮಿ(ಅಹ್ಮದಾಬಾದ್, ಚಂದೀಗಡ, ಡೆಹ್ರಾಡೂನ್, ಗ್ಯಾಂಗ್ಟೋಕ್, ತೆಲಂಗಾಣ, ಜೈಪುರ್, ಜಮ್ಮು, ಕಾನಪುರ್, ಲಕ್ನೋ, ರಾಯಪುರ್, ರಾಂಚಿ, ಸಿಲಾಂಗ್, ಶಿಮ್ಲಾ ಮತ್ತು ಶ್ರೀನಗರದಲ್ಲಿ ಬ್ಯಾಂಕ್ ರಜೆ)
ಸೆಪ್ಟೆಂಬರ್ 9- ಎರಡನೇ ಶನಿವಾರ
ಸೆಪ್ಟೆಂಬರ್ 10 – ಭಾನುವಾರ
ಸೆಪ್ಟೆಂಬರ್ 17 – ಭಾನುವಾರ
ಸೆಪ್ಟೆಂಬರ್ 18 – ವರಸಿದ್ಧಿ ವಿನಾಯಕ ವ್ರತ ಮತ್ತು ವಿನಾಯಕ ಚತುರ್ಥಿ (ಬೆಂಗಳೂರು ಮತ್ತು ತೆಲಂಗಾಣದಲ್ಲಿ ಬ್ಯಾಂಕ್ ರಜೆ)
ಸೆಪ್ಟೆಂಬರ್ 19 – ಗಣೇಶ ಚತುರ್ಥಿ(ಅಹ್ಮದಾಬಾದ್, ಬೇಲಾಪುರ್, ಭುನವೇಶ್ವರ್, ಮುಂಬೈ, ನಾಗಪುರ್ ಮತ್ತು ಪಣಜಿಯಲ್ಲಿ ಬ್ಯಾಂಕ್ ರಜೆ)
ಸೆಪ್ಟೆಂಬರ್ 20: ಗಣೇಶ ಚತುರ್ಥಿ ಎರಡನೇ ದಿನ (ಕೊಚ್ಚಿ) ಮತ್ತು ನುವಾಖಾಯ್ (ಒಡಿಶಾ)
ಸೆಪ್ಟೆಂಬರ್ 22- ಶ್ರೀ ನಾರಾಯಣ ಗುರು ಸಮಾಧಿ ದಿನ(ಕೊಚ್ಚಿ, ಪಣಜಿ ಮತ್ತು ತಿರುವನಂತಪುರಂ)
ಸೆಪ್ಟೆಂಬರ್ 23 – ಮಹಾರಾಜಾ ಹರಿಸಿಂಗ್ ಜಿ ಅವರಾ ಜನ್ಮದಿನ (ನಾಲ್ಕನೇ ಶನಿವಾರ)
ಸೆಪ್ಟೆಂಬರ್ 24 – ಭಾನುವಾರ
ಸೆಪ್ಟೆಂಬರ್ 25 – ಶ್ರೀಮಂತ ಶಂಕರ ಜನ್ಮದಿನ(ಗುವಾಹಟಿಯಲ್ಲಿ ಬ್ಯಾಂಕ್ ರಜೆ)
ಸೆಪ್ಟೆಂಬರ್ 27 – ಪ್ರವಾದಿ ಮೊಹಮದ್ದ್ ಅವರ ಜನ್ಮದಿನ(ಜಮ್ಮು, ಕೊಚ್ಚಿ, ಶ್ರೀನಗರ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್ ರಜೆ)
ಸೆಪ್ಟೆಂಬರ್ 28 – ಈದ್ -ಮಿಲಾದ್(ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ಕಾನಪುರ್, ಲಕ್ನೋ, ಮುಂಬೈ ಮತ್ತು ನವದೆಹಲಿಯಲ್ಲಿ ಬ್ಯಾಂಕ್ ರಜೆ)
ಸೆಪ್ಟೆಂಬರ್ 29 – ಇಂದ್ರಜಾತಾ (ಗ್ಯಾಂಗ್ಟಕ್, ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕ್ ರಜೆ)

2023ರ ಸೆಪ್ಟೆಂಬರ್ನಲ್ಲಿ ಬೆಂಗಳೂರಿನಲ್ಲಿ ಬ್ಯಾಂಕ್ ರಜೆಗಳ ಪಟ್ಟಿ ಹೀಗಿದೆ:
ಸೆಪ್ಟೆಂಬರ್ 3: ಭಾನುವಾರ
ಸೆಪ್ಟೆಂಬರ್ 9: ಎರಡನೇ ಶನಿವಾರ
ಸೆಪ್ಟೆಂಬರ್ 10: ಭಾನುವಾರ
ಸೆಪ್ಟೆಂಬರ್ 17: ಭಾನುವಾರ
ಸೆಪ್ಟೆಂಬರ್ 18: ವಿನಾಯಕ ಚತುರ್ಥಿ
ಸೆಪ್ಟೆಂಬರ್ 23: ನಾಲ್ಕನೇ ಶನಿವಾರ
ಸೆಪ್ಟೆಂಬರ್ 24: ಭಾನುವಾರ
ಸೆಪ್ಟೆಂಬರ್ 28: ಈದ್ ಮಿಲಾದ್

ಇದನ್ನೂ ಓದಿ: Awareness Programme: ದ್ವಿಚಕ್ರ ವಾಹನ ಸವಾರರೇ ಇತ್ತ ಗಮನಿಸಿ: ಹೆಲ್ಮೆಟ್ ಧರಿಸದಿದ್ದವರ ಮೇಲೆ ಕ್ಯಾಮರಾ ಕಣ್ಣು!! ಬೀಳುತ್ತೆ ನಿಮ್ಮ ಮೇಲೆ ಭಾರೀ ದಂಡ, ಕೇಸು!!!

You may also like

Leave a Comment