Home » Fixed Deposit Rate: ಉತ್ತಮ ಆದಾಯ ನೀಡುವ ಖಾಸಗಿ ಬ್ಯಾಂಕ್‌ FD! ಇಲ್ಲಿದೆ ಟಾಪ್‌-5 ಬ್ಯಾಂಕ್‌ಗಳ ಬಡ್ಡಿ ದರಗಳು!

Fixed Deposit Rate: ಉತ್ತಮ ಆದಾಯ ನೀಡುವ ಖಾಸಗಿ ಬ್ಯಾಂಕ್‌ FD! ಇಲ್ಲಿದೆ ಟಾಪ್‌-5 ಬ್ಯಾಂಕ್‌ಗಳ ಬಡ್ಡಿ ದರಗಳು!

by Mallika
0 comments
Fixed Deposit Rate

Fixed Deposit Rate: ಆರ್‌ಬಿಐ ಇತ್ತೀಚೆಗೆ ಜೂನ್‌ 8 ರಂದು ತನ್ನ ಹೊಸ ಹಣಕಾಸು ನೀತಿಯನ್ನು ಪ್ರಕಟಣೆ ಮಾಡಿತ್ತು. ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿರುವುದರಿಂದ ಕೇಂದ್ರ ಬ್ಯಾಂಕ್‌ ಈ ಬಾರಿ ರೆಪೋ ದರವನ್ನು ಚೇಂಜ್‌ ಮಾಡಿಲ್ಲ. ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಹಣಕಾಸು ನೀತಿಯನ್ನು ಪರಿಚಯಿಸಿದ ನಂತರ, ಬ್ಯಾಂಕ್‌ಗಳು ಎಫ್‌ಡಿಗಳ(Fixed Deposit Rate) ಮೇಲೆ ಮತ್ತು ಸಾಲಗಳ ಮೇಲೆ ಬಡ್ಡಿ ದರ ಬದಲಾಯಿಸುತ್ತದೆ. ಹಾಗಾಗಿ ನಾವಿಲ್ಲಿ ಎಫ್‌ಡಿಗಳಲ್ಲಿ ಉತ್ತಮ ಆದಾಯ ನೀಡುವ ದೇಶದ ಟಾಪ್‌ 5 ಖಾಸಗಿ ಬ್ಯಾಂಕ್‌ಗಳ ಬಗ್ಗೆ ಇಲ್ಲಿ ತಿಳಿಸಲಿದ್ದೇವೆ.

ಬ್ಯಾಂಕುಗಳು ಸಾಮಾನ್ಯವಾಗಿ 7 ದಿನಗಳಿಂದ 10 ವರ್ಷಗಳವರೆಗೆ FD ಯೋಜನೆಗಳನ್ನು ನೀಡುತ್ತವೆ. ಇಲ್ಲಿ ನಾವು ಟಾಪ್-5 ಖಾಸಗಿ ಬ್ಯಾಂಕ್‌ಗಳ ಎಫ್‌ಡಿ ಬಡ್ಡಿ ದರಗಳ ಬಗ್ಗೆ ಹೇಳಲಿದ್ದೇವೆ. ಇದರಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಇದೆ.

HDFC ಬ್ಯಾಂಕ್: ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್‌ನಲ್ಲಿ FD ಮೇಲೆ 3 ರಿಂದ 7.25 ಪ್ರತಿಶತ ಬಡ್ಡಿ ಲಭ್ಯವಿದೆ. 4 ವರ್ಷ 7 ತಿಂಗಳ FD ಮೇಲೆ ಗರಿಷ್ಠ ಬಡ್ಡಿ 7.25 ಶೇಕಡಾ. 10 ವರ್ಷಗಳ ಅವಧಿಯವರೆಗೆ FD ಗಳ ಮೇಲೆ ಉತ್ತಮ ಬಡ್ಡಿಯನ್ನು ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ FD ಮೇಲಿನ ಗರಿಷ್ಠ ಬಡ್ಡಿ 7.75 ಪ್ರತಿಶತ.

ICICI ಬ್ಯಾಂಕ್: ಈ ಬ್ಯಾಂಕಿನಲ್ಲಿ FD ಮೇಲಿನ ಬಡ್ಡಿಯು 3 ಪ್ರತಿಶತದಿಂದ 7.10 ಪ್ರತಿಶತದವರೆಗೆ ಇರುತ್ತದೆ. ಹೆಚ್ಚಿನ ಬಡ್ಡಿಯು 15 ತಿಂಗಳಿಗಿಂತ ಹೆಚ್ಚು ಆದರೆ 2 ವರ್ಷಗಳಿಗಿಂತ ಕಡಿಮೆ ಅವಧಿಗೆ ಲಭ್ಯವಿದೆ. ಸಾಮಾನ್ಯ ಜನರಿಗಿಂತ ಹಿರಿಯ ನಾಗರಿಕರಿಗೆ ಶೇ.0.50ರಷ್ಟು ಹೆಚ್ಚು ಬಡ್ಡಿ ಸಿಗುತ್ತದೆ.

Yes ಬ್ಯಾಂಕ್: ಯೆಸ್ ಬ್ಯಾಂಕ್ ತನ್ನ ಗ್ರಾಹಕರಿಗೆ FD ಮೇಲೆ ಶೇಕಡಾ 3.25 ರಿಂದ 7.75 ರಷ್ಟು FD ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರು ಇದಕ್ಕಿಂತ ಶೇ.0.50ರಷ್ಟು ಹೆಚ್ಚು ಬಡ್ಡಿ ಪಡೆಯುತ್ತಿದ್ದಾರೆ. 18 ತಿಂಗಳಿಗಿಂತ ಹೆಚ್ಚು ಆದರೆ 36 ತಿಂಗಳಿಗಿಂತ ಕಡಿಮೆ ಅವಧಿಯ ಬ್ಯಾಂಕಿನ FD ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ.

Kotak Mahindra Bank: ಈ ಬ್ಯಾಂಕ್‌ನಲ್ಲಿ ಎಫ್‌ಡಿ ಬಡ್ಡಿ ದರವು 2.75 ಪ್ರತಿಶತದಿಂದ ಪ್ರಾರಂಭವಾಗುತ್ತದೆ ಮತ್ತು ಉನ್ನತ ಮಟ್ಟದಲ್ಲಿ ಅದು ಶೇಕಡಾ 7.20 ಕ್ಕೆ ಏರುತ್ತದೆ. 390 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಆದರೆ 2 ವರ್ಷಗಳಿಗಿಂತ ಕಡಿಮೆ ಅವಧಿಯ FD ಯೋಜನೆಗಳಿಗೆ ಬ್ಯಾಂಕ್ ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ.

Axix ಬ್ಯಾಂಕ್: ಮತ್ತೊಂದು ಖಾಸಗಿ ವಲಯದ ಬ್ಯಾಂಕ್ ಆಕ್ಸಿಸ್ ಬ್ಯಾಂಕ್‌ನಲ್ಲಿ ಎಫ್‌ಡಿ ಬಡ್ಡಿ ದರಗಳು 3.50 ಪ್ರತಿಶತದಿಂದ 7.10 ಪ್ರತಿಶತದವರೆಗೆ ಇರುತ್ತದೆ. 13 ತಿಂಗಳಿಗಿಂತ ಹೆಚ್ಚಿನ ಆದರೆ ಒಂದೂವರೆ ವರ್ಷಕ್ಕಿಂತ ಕಡಿಮೆ ಅಂದರೆ 18 ತಿಂಗಳ ಎಫ್‌ಡಿಗಳಲ್ಲಿ ಹೆಚ್ಚಿನ ಬಡ್ಡಿ ಲಭ್ಯವಿದೆ. ಹಿರಿಯ ನಾಗರಿಕರಿಗೆ ಶೇಕಡಾ 0.50 ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ಈ ಹೊಸ ದರಗಳು ಮೇ 18 ರಿಂದ ಒಂದೇ ಆಗಿವೆ.

ಇದನ್ನೂ ಓದಿ: ಜೊತೆಯಾಗಿ ಶವರ್ ಸ್ನಾನ ಮಾಡಿದ ಯುವಕ ಯುವತಿ, ಬಾತ್ ರೂಮಿನಲ್ಲೇ ಕಾದಿತ್ತು ಸಾವು !

You may also like

Leave a Comment