Canara Digital Rupee Application: ಯುಪಿಐ(UPI)ಮತ್ತು ಇ-ರುಪಾಯಿ ಎರಡನ್ನೂ ಒಂದೇ ಪ್ಲಾಟ್ಫಾರ್ಮ್ನಲ್ಲಿ ಆಪರೇಟ್ ಮಾಡುವ ಸಾಮರ್ಥ್ಯ ಹೊಂದಿರುವ ಯುಪಿಐ ಸ್ಕ್ಯಾನ್ ಮೂಲಕ ವಹಿವಾಟು ನಡೆಸಲು ಕೆನರಾ ಬ್ಯಾಂಕ್ ಡಿಜಿಟಲ್ ರುಪೀ ಅಪ್ಲಿಕೇಶನ್ (Canara Digital Rupee Application) ಅನ್ನು ಬಿಡುಗಡೆ ಮಾಡಿದೆ.
ಕೆನರಾ ಬ್ಯಾಂಕ್ ಯುಪಿಐ ಇಂಟರಾಪರಬಲ್ (UPI Interoperable) ಡಿಜಿಟಲ್ ರುಪೀ ಆ್ಯಪ್ ಅನ್ನು ಬಿಡುಗಡೆ ಮಾಡಿದ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ. ಕೆನರಾ ಡಿಜಿಟಲ್ ರುಪೀ ಆ್ಯಪ್ ಬಳಸಿ ವರ್ತಕರ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡಲು ಅನುವು ಮಾಡಿಕೊಡುತ್ತದೆ. ಡಿಜಿಟಲ್ ಕರೆನ್ಸಿ ಪಾವತಿಗೆ ಪ್ರತ್ಯೇಕ ಕ್ಯುಆರ್ ಕೋಡ್ ಅವಶ್ಯಕತೆಯಿರದು. ಯುಪಿಐ ಕ್ಯೂಆರ್ ಕೋಡ್ ಮೂಲಕವೇ ಡಿಜಿಟಲ್ ಕರೆನ್ಸಿಯ ಪಾವತಿ ಮಾಡಬಹುದಾಗಿದೆ.
ಆರ್ಬಿಐ ರೂಪಿಸಿರುವ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಅಥವಾ ಇ-ರುಪೀ ಅನ್ನು ಅನ್ನು ಕೆನರಾ ಬ್ಯಾಂಕ್ ಬಿಡುಗಡೆ ಮಾಡಿದ್ದು, ಯುಪಿಐ ಮತ್ತು ಇ-ರುಪೀ ಎರಡಕ್ಕೂ ಒಂದೇ ಕ್ಯುಆರ್ ಕೋಡ್ ಸಾಕಾಗುತ್ತದೆ.ಇ ರುಪಾಯಿ ಎಂಬುದು ನಗದು ಹಣದ ಎಲೆಕ್ಟ್ರಾನಿಕ್ ರೂಪವಾಗಿದ್ದುವಾಗಿದ್ದು, ಬ್ಯಾಂಕ್ ಖಾತೆಯಿಂದ ವ್ಯಾಲಟ್ಗೆ ನಿರ್ದಿಷ್ಟ ಮೊತ್ತದ ಹಣವನ್ನು ವರ್ಗಾವಣೆ ಮಾಡಲು ನೆರವಾಗುತ್ತದೆ. ಗೌಪ್ಯತೆ ಕಾಯ್ದುಕೊಳ್ಳುತ್ತ ಈ ವ್ಯಾಲಟ್ನಲ್ಲಿರುವ ಇ-ರುಪಾಯಿಯನ್ನೂ ಬಳಕೆ ಮಾಡಬಹುದು. ಯುಪಿಐ ವ್ಯವಸ್ಥೆಯಲ್ಲಿ ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಹಣ ರವಾನೆ ಮಾಡಬಹುದು. ಡಿಜಿಟಲ್ ಕರೆನ್ಸಿಯಲ್ಲಿ ವ್ಯಾಲಟ್ನಿಂದ ವ್ಯಾಲಟ್ಗೆ ಹಣ ವರ್ಗಾವಣೆ ಪ್ರಕ್ರಿಯೆ ನಡೆಸಬಹುದು.
ಕೆನರಾ ಡಿಜಿಟಲ್ ರುಪೀ ಅಪ್ಲಿಕೇಶನ್ ಅನ್ನು ಕೆನರಾ ಬ್ಯಾಂಕಿನ ಎಂಡಿ ಮತ್ತು ಸಿಇಒ ಆಗಿರುವ ಕೆ ಸತ್ಯನಾರಾಯಣ ರಾಜು ಬಿಡುಗಡೆ ಮಾಡಿದ್ದು, ಆರ್ಬಿಐ ರೂಪಿಸಿರುವ ಡಿಜಿಟಲ್ ಕರೆನ್ಸಿಯಿಂದ ವೇಗವಾಗಿ ಮತ್ತು ಸುರಕ್ಷಿತ ವಿಧಾನದ ಮೂಲಕ ವಹಿವಾಟು ನಡೆಸಲು ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ: ಪ್ರೇಮಿ ಜೊತೆ ಲಾಡ್ಜ್ ಗೆ ಹೋದ ಯುವಕ! ದಿಢೀರ್ ಸಾವು!!!
