Home » ಕೆಲಸ ಬೋರಿಂಗ್ ಎಂದು ಕಂಪೆನಿಯಿಂದ 33 ಲಕ್ಷ ರೂ. ಪರಿಹಾರ ಪಡೆದ!

ಕೆಲಸ ಬೋರಿಂಗ್ ಎಂದು ಕಂಪೆನಿಯಿಂದ 33 ಲಕ್ಷ ರೂ. ಪರಿಹಾರ ಪಡೆದ!

by Praveen Chennavara
0 comments

“ಆಯ್ಯೋ, ಬೋರಿಂಗ್ ಕೆಲಸ ಇದು ಈಗಿನ ಸಾಕಷ್ಟು ಉದ್ಯೋಗಿಗಳ ದೂರು, ಇದೇ ರೀತಿ ದೂರನ್ನು ಹೊತ್ತಿದ್ದ ಪ್ಯಾರಿಸ್‌ನ ಕಂಪನಿಯೊಂದರ ಸಿಬ್ಬಂದಿಯೊಬ್ಬ, ತನ್ನ ಬಾಸ್ ವಿರುದ್ಧವೇ ಮೊಕದ್ದಮೆ ಹೇರಿ, ಕಂಪನಿಯಿಂದ 33 ಲಕ್ಷ ರೂ. ಪರಿಹಾರ ಪಡೆದಿದ್ದಾನೆ!

ಹೌದು, ಫೆಡೆರಿಕ್ ಡೆಸ್ಕಾರ್ಡ್ ಹೆಸರಿನ ವ್ಯಕ್ತಿ 2015ರವರೆಗೆ ಇಂಟರ್‌ಪರ್ಫ್ಯೂಮ್ಸ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾನೆ.

ಆತನಿಂದಾಗಿ ಕೆಂಟ್ ಒಬ್ಬರು ತಪ್ಪಿದರು ಎನ್ನುವ ಕಾರಣಕ್ಕೆ ಆತನನ್ನು ಅತ್ಯಂತ ಬೋರಿಂಗ್ ವಿಭಾಗದಲ್ಲಿ ಮ್ಯಾನೇಜರ್ ಮಾಡಲಾಗಿತ್ತು. ಅದರಿಂದಾಗಿ ಆತ ಬೇಸತ್ತಿದ್ದನಂತೆ. ನಂತರ ಕಾರು ಅಪಘಾತಕ್ಕೆ ಸಿಲುಕಿದ್ದ ಆತ 7 ತಿಂಗಳು ರಜೆ ಹಾಕಿದ ಎನ್ನುವ ಕಾರಣಕ್ಕೆ ಕೆಲಸದಿಂದ ತೆಗೆಯಲಾಗಿದೆ.

ಬಿಟ್ಟ ನಂತರ ಆತ, ಕಂಪನಿ ತನಗೆ ಬೋರಿಂಗ್ ಕೆಲಸ ಕೊಟ್ಟಿದ್ದಾಗಿ ಮೊಕದ್ದಮೆ ಹೂಡಿದ್ದು, ನಾಲ್ಕು ವರ್ಷಗಳ ನಂತರ ಅದರ ತೀರ್ಪು ಬಂದಿದೆ. ಆತನಿಗೆ 33 ಲಕ್ಷ ರೂ. ಪರಿಹಾರವನ್ನು ಕಂಪನಿಯಿಂದಲೇ ಕೊಡಿಸಲಾಗಿದೆ.

You may also like

Leave a Comment