Success business: ಪ್ರಯತ್ನಕ್ಕೆ ತಕ್ಕಂತೆ ಪ್ರತಿಫಲ ದೊರೆಯುತ್ತವೆ ಅನ್ನೋದಕ್ಕೆ ಎಷ್ಟೋ ನಿದರ್ಶನಗಳು ಇವೆ. ಒಂದು ಸಾರಿ ಸೋಲು ಕಂಡರೂ ಮತ್ತೇ ಗೆಲ್ಲಬೇಕೆಂಬ ಛಲ ನಮ್ಮಲ್ಲಿ ಇದ್ದರೆ ಯಶಸ್ಸು ನಮ್ಮದಾಗಲಿದೆ ಅನ್ನೋದಕ್ಕೆ ಅಮೇರಿಕಾದ ಸಹೋದರಿಯರು ತಿಳಿಸಿಕೊಟ್ಟಿದ್ದಾರೆ.
ಅಮೇರಿಕಾದಲ್ಲಿ ಒಂದು ಸಾರಿ ಸೋಲು ಕಂಡರೂ ನಂತರ ಭಾರತಕ್ಕೆ ಬಂದು, ಸಣ್ಣ ಬ್ಯುಸಿನೆಸ್ ಒಂದನ್ನ ಆರಂಭಿಸಿ ಅತಿ ದೊಡ್ಡ ಸಕ್ಸಸ್ ( Success business) ಕಂಡಿದ್ದಾರೆ. ಅಷ್ಟೇ ಅಲ್ಲ ಈ ಅಕ್ಕ-ತಂಗಿಯರ ಸ್ಟಾರ್ಟ್ ಅಪ್ ಐಡಿಯಾ ಸಖತ್ ಕ್ಲಿಕ್ ಆಗಿದೆ ಪ್ರತಿ ತಿಂಗಳು ಬರೋಬ್ಬರಿ 25 ಲಕ್ಷ ರೂಪಾಯಿ ಲಾಭ ಗಳಿಸುತ್ತಿದ್ದಾರೆ.
ರೆಬೆಕಾ ಸೂದ್, ಏರಿಯೆಲ್ಲಾ ಬ್ಲಾಂಕ್ ಸಹೋದರಿಯರು ಸೇರಿ ‘ಕೊಂಬುಚಾ’ ಅನ್ನೋ ಬ್ರಾಂಡ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಕೊಂಬುಚಾ ಅಂದ್ರೆ ಸುವಾಸನೆಯ ಕಪ್ಪು ಚಹಾ ಪಾನೀಯ. ಈ ಪಾನೀಯವನ್ನು ಗಿಡ ಮೂಲಿಕೆಗಳಿಂದ ತಯಾರಿಸಲಾಗಿದೆ ಎಂದು ರೆಬೆಕಾ ಸೂದ್, ಏರಿಯೆಲ್ಲಾ ಬ್ಲಾಂಕ್ ವಿವರಿಸಿದ್ದಾರೆ.
ಸದ್ಯ ದೆಹಲಿಯಲ್ಲಿ ನೆಲೆಸಿರುವ ರೆಬೆಕಾ ಸೂದ್, ಏರಿಯೆಲ್ಲಾ ಬ್ಲಾಂಕ್ ಸಹೋದರಿಯರು ತಮ್ಮ ಇನ್ಸ್‌ಟಾದಲ್ಲಿ ಕೊಂಬುಚಾ ಪಾನೀಯಾಗೆ ವಿವರಣೆ ನೀಡಿದ್ದಾರೆ. ಜೊತೆಗೆ ಈ ಸಿಸ್ಟರ್ಸ್ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದಾರೆ. ಇನ್ನು ದೆಹಲಿಯ ಸುತ್ತಾಮುತ್ತ ಅಮೆರಿಕಾ ಸಹೋದರಿಯರ ‘ಕೊಂಬುಚಾ’ ಪಾನೀಯಾವನ್ನು ಮಾರಾಟ ಮಾಡಲಾಗುತ್ತಿದೆ.
ಸದ್ಯ ರೆಬೆಕಾ ಒಮ್ಮೆ ಇಂಡೋನೇಷ್ಯಾದ ಬಾಲಿಗೆ ಪ್ರವಾಸಕ್ಕೆ ಹೋಗಿದ್ದಾಗ ಈ ಐಡಿಯಾ ಬಂದ ಬಳಿಕ ಇಬ್ಬರೂ ಸಹೋದರಿಯರು ಸಾಕಷ್ಟು ಸಂಶೋಧನೆ ಮಾಡಿ ಈ ಪಾನೀಯವನ್ನು ಕಂಡು ಹಿಡಿದಿರುವುದಾಗಿ ಹೇಳಿದ್ದಾರೆ. ಸದ್ಯ ಏರಿಯೆಲ್ಲಾ ಬ್ಲಾಂಕ್ ಎಂಬ ಯುವತಿ ನ್ಯೂಟ್ಸಿಷನಲ್ ಥೆರಪಿಸ್ಟ್ ಅಧ್ಯಯನ ಮಾಡಿದ್ದು, ರೆಬೆಕಾ ಸೂದ್ ಬ್ಯುಸಿನೆಸ್ ಕನ್ಸಲ್ಟೆಂಟ್ ಕೂಡ ಆಗಿದ್ದಾರೆ.
ಇದನ್ನೂ ಓದಿ: 5G Smartphone: ಕೇವಲ 15,000 ರೂನಲ್ಲಿ ದಿ ಬೆಸ್ಟ್ ಸ್ಮಾರ್ಟ್ಫೋನ್ ಆಯ್ಕೆ ಯಾವುದು ಗೊತ್ತೇ? ಇಲ್ಲಿದೆ ಕಂಪ್ಲೀಟ್ ಆಯ್ಕೆ ವಿವರ
