Bank account: ಪ್ರತಿಯೊಬ್ಬರು ಭವಿಷ್ಯದ ಹಿತ ದೃಷ್ಟಿಯಿಂದ ಬ್ಯಾಂಕ್ ಖಾತೆ ಹೊಂದಿರುವುದು ಸಾಮಾನ್ಯ ವಿಷಯ. ಮೋದಿ ಸರ್ಕಾರ ಜನ ಧನ ಯೋಜನೆಯನ್ನು ಜಾರಿಗೆ ತಂದ ಬಳಿಕ ಬ್ಯಾಂಕ್ ಖಾತೆಗಳ (Bank account)ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ, ಉಳಿತಾಯ ಖಾತೆಯನ್ನು ಬಳಸುವವರ ಸಂಖ್ಯೆಯು ಕೂಡ ಹೆಚ್ಚಾಗಿದೆ. ಬ್ಯಾಂಕ್ ಖಾತೆಗಳ ಸೇಫ್ಟಿ ಬಗ್ಗೆ ಕೆಲವೊಂದು ವಿಷಯ ನಾವಿಲ್ಲಿ ನಿಮಗೆ ಹೇಳಲಿದ್ದೇವೆ.
ವ್ಯವಹಾರ, ಮಕ್ಕಳ ವಿದ್ಯಾಭ್ಯಾಸ , ಕೃಷಿ ಚಟುವಟಿಕೆಗಳಿಗೆ ಸಾಲ ಪಡೆಯಲು ಹೀಗೆ ನಾನಾ ಕಾರಣಗಳಿಗೆ ಹೆಚ್ಚಿನವರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ. ಬ್ಯಾಂಕ್ ಗಳು ಜನರಿಗೆ ಅರ್ಥಿಕ ನೆರವು, ಭದ್ರತೆ, ಹಣ ವಿನಿಮಯ ಮಾಡಲು ಮೊಬೈಲ್ ಟ್ರಾನ್ಸ್ಫರ್, ಆನ್ಲೈನ್ ಬ್ಯಾಂಕಿಂಗ್ ಹೀಗೆ ಸೌಲಭ್ಯ ನೀಡುತ್ತಿರುವುದರಿಂದ, ಗ್ರಾಹಕರು ಉಳಿತಾಯ ಖಾತೆಯನ್ನು ತೆರೆಯಲು ಮುಂದಾಗುತ್ತಿದ್ದಾರೆ. ಆಯಾ ಬ್ಯಾಂಕ್ ನ ನಿಯಮಗಳಿಗೆ ಅನುಸಾರ ಬಡ್ಡಿ ದರ, ಠೇವಣಿ ಯೋಜನೆ, ಖಾತೆ ಯೋಜನೆಗಳಲ್ಲಿ ವ್ಯತ್ಯಾಸವಿದ್ದು, ಅನೇಕ ಬ್ಯಾಂಕ್ ನಲ್ಲಿ ಖಾತೆ ಹೊಂದಿದರೆ ಹೆಚ್ಚು ಪ್ರಯೋಜನಕಾರಿ ಎಂಬ ಭಾವನೆ ಹಲವರಲ್ಲಿದೆ. ಆದರೆ ,ಕೆಲವು ಅಂಶಗಳನ್ನು ಗಮನಿಸಿ ಅನೇಕ ಖಾತೆಗಳನ್ನು ಹೊಂದುವುದು ಉತ್ತಮ.
ಮಿನಿಮಮ್ ಬ್ಯಾಲೆನ್ಸ್ :
ಪ್ರತಿ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕು ಎಂಬ ಅಂಶವನ್ನು ನೆನಪಿಟ್ಟುಕೊಳ್ಳಬೇಕು. ಬ್ಯಾಂಕ್ ನ ಸೇವೆ ಮತ್ತು ಖಾತೆಯ ನಿರ್ವಹಣೆಯ ಆಧಾರದ ಮೇಲೆ ವೆಚ್ಚವನ್ನು ಪರಿಗಣಿಸಿ, ಬ್ಯಾಂಕ್ ಗಳು ಕನಿಷ್ಠ ಬ್ಯಾಲೆನ್ಸ್ ನಿಗದಿಪಡಿಸುತ್ತದೆ. ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ಬ್ಯಾಂಕ್ ನಿರ್ದಿಷ್ಟ ದಂಡ, ಅಥವಾ ಶುಲ್ಕ ಪಾವತಿಸಬೇಕಾಗುತ್ತದೆ. ಒಂದು ಅಥವಾ ಎರಡು ಉಳಿತಾಯ ಖಾತೆಗಳನ್ನು ಹೊಂದಿದ್ದರೆ, ಮಿನಿಮಮ್ ಬ್ಯಾಲೆನ್ಸ್ ಅನ್ನು ನಿರ್ವಹಣೆ ಮಾಡಲು ಸುಲಭ. ಆದರೆ, ಹಲವು ಬ್ಯಾಂಕ್ ಅಕೌಂಟ್ ಗಳನ್ನು ಹೊಂದಿದ್ದರೆ ನಿರ್ವಹಣೆ ಕಷ್ಟವಾಗಬಹುದು. ಶುಲ್ಕದ ಬಗ್ಗೆ ವಿವರ ತಿಳಿಯದಿದ್ದರೆ, ಖಾತೆ ತೆರೆಯುವಾಗ ಇಲ್ಲವೇ ಇತರೆ ವಹಿವಾಟು ನಡೆಸುವಾಗ ಬ್ಯಾಂಕ್ ನಿಂದ ಮಾಹಿತಿ ಕಲೆ ಹಾಕುವುದು ಉತ್ತಮ.
ಹಿಂತೆಗೆದುಕೊಳ್ಳುವ ಮಿತಿ
ಪ್ರತಿ ಬ್ಯಾಂಕ್ ನಲ್ಲಿಯೂ ಗ್ರಾಹಕನ ಉಳಿತಾಯ ಖಾತೆಗಳಿಗೆ ಲಿಂಕ್ ಮಾಡಲಾದ ಡೆಬಿಟ್ ಕಾರ್ಡ್‌ಗಳಿಗೆ ಹಣವನ್ನು ಹಿಂಪಡೆಯಲು ಪ್ರತಿ ದಿನಕ್ಕೆ ನಿರ್ದಿಷ್ಟ ಮಿತಿಯನ್ನೂ ಹೊಂದಿರುತ್ತವೆ. ಅಂತಹ ಸನ್ನಿವೇಶದಲ್ಲಿ, ಹಲವು ಖಾತೆಗಳನ್ನು ಹೊಂದಿದ್ದರೆ ಅನಿವಾರ್ಯ ಸಂದರ್ಭದಲ್ಲಿ, ವಿವಿಧ ಖಾತೆಗಳಿಂದ ಹೆಚ್ಚು ಮೊತ್ತವನ್ನು ಹಿಂಪಡೆಯುವ ಅವಕಾಶವಿದೆ.
ಬ್ಯಾಂಕ್ ಸೇವಿಂಗ್ಸ್ ಅಕೌಂಟ್ ಅಥವಾ ಉಳಿತಾಯ ಖಾತೆಯನ್ನು ಹೊಂದಲು ಯಾವುದೇ ಮಿತಿಯಿಲ್ಲ. ಹಾಗಾಗಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ನಲ್ಲಿ ಖಾತೆ ಹೊಂದಿರಬಹುದು. ಆದರೆ, ಬ್ಯಾಂಕ್ ಖಾತೆ ಸಕ್ರಿಯವಾಗಿರಬೇಕಾಗಿದ್ದು. ಖಾತೆಯಲ್ಲಿ ಯಾವುದೇ ಚಟುವಟಿಕೆ ಮಾಡದಿದ್ದರೆ, ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯವೆಂದು ಬ್ಯಾಂಕ್ ಪರಿಗಣಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ, ಬ್ಯಾಂಕ್ ಖಾತೆ ನಿಷ್ಕ್ರಿಯವಾದರೆ, ಇದರಿಂದ ದಂಡವನ್ನು ನಿಮ್ಮ ಅಕೌಂಟ್‌ನ ಬ್ಯಾಂಕ್ ಬ್ಯಾಲೆನ್ಸ್ ಕೂಡ ಕಡಿಮೆಯಾಗುತ್ತದೆ.
ಬ್ಯಾಂಕ್ ಶುಲ್ಕಗಳು
ಬ್ಯಾಂಕ್ ಗಳು ಗ್ರಾಹಕರಿಗೆ ಆನ್ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ , ಭದ್ರತೆ, ಸೌಲಭ್ಯ ಹೀಗೆ ನಾನಾ ಸೇವೆಗಳನ್ನು ನೀಡುವುದರ ಜೊತೆಗೆ ಶುಲ್ಕವನ್ನೂ ಕೂಡ ವಸೂಲಿ ಮಾಡುತ್ತದೆ. ಹಾಗಾಗಿ ಗ್ರಾಹಕರು ಖಾತೆ ಹೊಂದಿರುವ ಬ್ಯಾಂಕ್ ನ ಸೇವೆಗಳ ಜೊತೆಗೆ ಶುಲ್ಕ, ದಂಡದ ಬಗ್ಗೆ ಅರಿತಿರಬೇಕಾಗಿರುವುದು ಅವಶ್ಯಕವಾಗಿದೆ. ಇಲ್ಲದಿದ್ದರೆ ಕೇವಲ ಮಿನಿಮಮ್ ಬ್ಯಾಲೆನ್ಸ್ ಮಾತ್ರ ಇದ್ದ ಸಂದರ್ಭದಲ್ಲಿ ಖಾತೆಯಲ್ಲಿ ಹಣ ಇರದೆ ಇರುವ ಸಾಧ್ಯತೆಯೂ ಇದೆ. ಇದರ ಜೊತೆಗೆ ಹೆಚ್ಚುವರಿ ದಂಡ ವಿಧಿಸಬೇಕಾಗಬಹುದು. ಮೇಲೆ ತಿಳಿಸಿದ ಎಲ್ಲ ಅಂಶವನ್ನು ಪರಿಗಣಿಸಿ, ಖಾತೆ ಹೊಂದುವುದು ಉತ್ತಮ.
