ICICI and Bank of India Hikes MCLR: MCLR ಅಂದರೆ (ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್) ಬೇಸ್ ರೇಟ್ ರೀತಿ ಬ್ಯಾಂಕ್ ತನ್ನ ಯಾವುದೇ ಗ್ರಾಹಕರಿಗೆ ಆಫರ್ ಮಾಡಬಹುದಾದ ಕನಿಷ್ಠ ಬಡ್ಡಿದರವಾಗಿದ್ದು, ರೆಪೋ ದರಕ್ಕೆ ಅನುಗುಣವಾಗಿ ಇದರ ದರವೂ ಬದಲಾವಣೆಯಾಗುತ್ತದೆ.
ಎರಡು ಬ್ಯಾಂಕುಗಳು ಕನಿಷ್ಠ ಸಾಲದ ದರವಾದ ಎಂಸಿಎಲ್ಆರ್ (MCLR) ಅನ್ನು ಏರಿಸಿವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ (Bank Of India)ಮತ್ತು ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ (ICICI)ತಮ್ಮ ವಿವಿಧ ಅವಧಿಯ ಎಂಸಿಎಲ್ಆರ್ ದರವನ್ನು(MCLR hikes )ಹೆಚ್ಚಳ ಮಾಡಿದೆ. ಐಸಿಐಸಿಐನ ಒಂದು ವರ್ಷದ ಎಂಸಿಎಲ್ಆರ್ ಶೇ. 9ಕ್ಕೆ ಏರಿಸಲಾಗಿದೆ. ಬ್ಯಾಂಕ್ ಆಫ್ ಇಂಡಿಯಾದ ಒಂದು ವರ್ಷದ ಎಂಸಿಎಲ್ಆರ್ ಶೇ. 8.75ಕ್ಕೆ ಹೆಚ್ಚಳ ಮಾಡಲಾಗಿದೆ.
ಬ್ಯಾಂಕ್ ಆಫ್ ಇಂಡಿಯಾದ ಎಂಸಿಎಲ್ಆರ್ ದರ:
ಬ್ಯಾಂಕ್ ಆಫ್ ಇಂಡಿಯಾದ (Bank Of India)15 ದಿನದ ಎಂಸಿಎಲ್ಆರ್ ಶೇ. 7.95ರಷ್ಟಿದ್ದು, ಒಂದು ತಿಂಗಳಿಗೆ ಶೇ. 8.20, ಮೂರು ತಿಂಗಳಿಗೆ ಶೇ. 8.35, ಆರು ತಿಂಗಳಿಗೆ ಎಂಸಿಎಲ್ಆರ್ ದರ ಶೇ. 8.55 ರಷ್ಟಿದೆ. ಬಿಒಐನ ಒಂದು ವರ್ಷದ ಎಂಸಿಎಲ್ಆರ್ ಶೇ. 8.75ರಷ್ಟಿದ್ದು, ಮೂರು ವರ್ಷದ ಎಂಸಿಎಲ್ಆರ್ ಶೇ. 8.95ಕ್ಕೆ ಹೆಚ್ಚಳವಾಗಿದೆ.
ಐಸಿಐಸಿಐ ಬ್ಯಾಂಕ್ ಎಂಸಿಎಲ್ಆರ್ ದರ:
ಐಸಿಐಸಿಐ ಬ್ಯಾಂಕಿನ( ICICI)15 ದಿನದ ಮತ್ತು ಒಂದು ತಿಂಗಳ ಎಂಸಿಎಲ್ಆರ್ ಶೇ. 8.50ಕ್ಕೆ ಏರಿಸಲಾಗಿದ್ದು, ಮೂರು ತಿಂಗಳಿಗೆ ಶೇ. 8.55, ಆರು ತಿಂಗಳಿಗೆ ಶೇ. 8.90 ಹಾಗೂ ವರ್ಷದ ಎಂಸಿಎಲ್ಆರ್ ಶೇ. 9ರಷ್ಟಿದೆ.
ಇದನ್ನೂ ಓದಿ: Teachers Transfer:ಬೆಳ್ಳಂಬೆಳಗ್ಗೆಯೇ ಶಿಕ್ಷಕರಿಗೆ ಕಹಿ ಸುದ್ದಿ- ‘ವರ್ಗಾವಣೆ’ ನಿರೀಕ್ಷೆಯಲ್ಲಿರೋರಿಗೆ ಬಿಗ್ ಶಾಕ್
