Gold Purchase Rule: ದೀಪಾವಳಿ ಹತ್ತಿರಾಗುತ್ತಿದೆ. ಹಬ್ಬದ ತಯಾರಿ ಜೋರಾಗಿದೆ. ಅಂತೆಯೇ ಅನೇಕರ ಮನೆಯಲ್ಲಿ ಚಿನ್ನ ಖರೀದಿಸುವ ಬಯಕೆಯೂ ಹೆಚ್ಚಾಗುತ್ತಿದೆ. ವರಮಹಾಲಕ್ಷ್ಮಿ ಹಬ್ಬದ ದಿನ ಚಿನ್ನ ಖರೀದಿಸಿದರೆ(Gold Purchase Rule) ಒಳಿತುಂಟಾಗುತ್ತದೆ ಎಂಬುದು ಹಲವರ ನಂಬಿಕೆ. ಏನೇ ಇರಲಿ ಇದೀಗ ಚಿನ್ನ ಖರೀದಿಸುವವರಿಗೆ ದೇಶಾದ್ಯಂತ ರೂಲ್ಸ್ ಒಂದು ಜಾರಿಯಾಗಿದೆ.
ಹೌದು, ಭಾರತೀಯ ನಾರಿಯರು ಆಭರಣ ಪ್ರಿಯರು. ಇತರ ದೇಶಗಳಿಂತ ಭಾರತದ ಸ್ತ್ರೀಯರು ಯತೇಚ್ಛವಾಗಿ ಬಂಗಾರ ಖರೀದಿಸುತ್ತಾರೆ. ಕೆಲವರು ಸಾವಿರ ಲೆಕ್ಕದಲ್ಲೆ ಖರೀದಿಸಿದ್ರೆ ಮತ್ತೆ ಕೆಲವರು ಲಕ್ಷ ಗಟ್ಟಲೆ, ಕೋಟಿ ಗಟ್ಟಲೆ ಅಷ್ಟೇ ಏಕೆ ಕೆ ಜಿ ಗಟ್ಟಲೆಯಲ್ಲೂ ಖರೀದಿಸುವುದುಂಟು ಹೀಗಾಗಿ ಇದರೆಲ್ಲದರ ಕುರಿತು ಪಕ್ಕಾ ಲೆಕ್ಕಾ ಹಿಡಿಯಲು, ತೆರೆಗೆಗೂ ಅನುಕೂಲಕರವಾಗಲೆಂದು ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ. ಹಾಗಿದ್ರೆ ಏನದು? ಇಲ್ಲಿದೆ ನೋಡಿ ಡೀಟೇಲ್ಸ್
ನಗದು ರೂಪದಲ್ಲಿ ಎಷ್ಟು ಚಿನ್ನ ಖರೀದಿಸಬಹುದು?
ನೇರವಾಗಿ ಹಣವನ್ನು ಕೊಟ್ಟು ಚಿನ್ನ ಖರೀದಿಸುವುದಾದರೆ ಅದಕ್ಕೆ ಮಿತಿ ಇದೆ. ಎಷ್ಟು ಬೇಕಾದರೂ ಹಣ ಕೊಟ್ಟು ಚಿನ್ನ ಖರೀದಿಸುವಂತಿಲ್ಲ. ಅಥವಾ ನೀವು ಎಷ್ಟು ಹಣವನ್ನು ಬೇಕಾದರೂ ಕೊಟ್ಟು ಚಿನ್ನ ಖರೀದಿಸಲು ಮುಂದಾದರು ಮಾರಾಟಗಾರರು 2 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ನಗದು ಹಣವನ್ನು ತೆಗೆದುಕೊಳ್ಳುವಂತಿಲ್ಲ.
ಎರಡು ಲಕ್ಷ ರೂಪಾಯಿಗೂ ಹೆಚ್ಚು ಚಿನ್ನ ಖರೀದಿಸುವುದಾದರೆ ಏನು ಮಾಡಬೇಕು?
ಎರಡು ಲಕ್ಷ ರೂಪಾಯಿಗಳವರೆಗಿನ ನಗದು ಚಿನ್ನ ಖರೀದಿ (Gold Purchase) ಮಾಡುವ ವ್ಯವಹಾರದ ಮೇಲೆ ಯಾವುದೇ ರೀತಿಯ ನಿರ್ಬಂಧವಿಲ್ಲ. ಆದರೆ ಎರಡು ಲಕ್ಷ ಮೀರಿದ್ರೆ ಆಗ ಆಧಾರ್ ಕಾರ್ಡ್ (Aadhaar Card) ಪ್ಯಾನ್ ಕಾರ್ಡ್ (PAN Card) ಮತ್ತು ವಿವರಗಳನ್ನು ಕೊಡಬೇಕು.
