Home » Canara Bank: ಕೆನರಾ ಬ್ಯಾಂಕಲ್ಲಿ ಖಾತೆ ಹೊಂದಿರೋರಿಗೆ ಬೆಳ್ಳಂಬೆಳಗ್ಗೆಯೇ ಸಿಹಿ ಸುದ್ದಿ !!

Canara Bank: ಕೆನರಾ ಬ್ಯಾಂಕಲ್ಲಿ ಖಾತೆ ಹೊಂದಿರೋರಿಗೆ ಬೆಳ್ಳಂಬೆಳಗ್ಗೆಯೇ ಸಿಹಿ ಸುದ್ದಿ !!

2 comments
Canara Bank

Canara Bank: ಕೆನರಾ ಬ್ಯಾಂಕಲ್ಲಿ ಖಾತೆ ಹೊಂದಿರೋರಿಗೆ ಬೆಳ್ಳಂಬೆಳಗ್ಗೆಯೇ ಸಿಹಿ ಸುದ್ದಿ ಸಿಕ್ಕಿದೆ. ಹೌದು, ಕೆನರಾ ಬ್ಯಾಂಕ್ ನಲ್ಲಿ (Canara Bank) ಎಫ್ ಡಿ ಇತರೆ ಇವರಿಗೆ ಉತ್ತಮ ಬಡ್ಡಿ ದರ ವನ್ನು ಬ್ಯಾಂಕ್ ನೀಡಿದೆ. ಬಡ್ಡಿ ದರಗಳ (Interest Rate) ಪರಿಷ್ಕರಣೆ ಮಾಡಲಾಗಿದ್ದು, ಎರಡು ಕೋಟಿಗಿಂತ ಕಡಿಮೆ ಫಿಕ್ಸೆಡ್ ಡೆಪಾಸಿಟ್ (Fixed Deposit) ಇಟ್ಟರೆ ಅದರ ಮೇಲಿನ ಬಡ್ಡಿ ದರವನ್ನು ಪರಿಷ್ಕರಿಸಲಾಗಿದೆ. ಅಕ್ಟೋಬರ್ 5, 2023ರಿಂದ ಈ ಹೊಸ ದರಗಳು ಅನ್ವಯವಾಗಲಿವೆ.

ಕೆನರಾ ಬ್ಯಾಂಕ್ (Canara Bank) ನಲ್ಲಿ ಏಳು ದಿನಗಳಿಂದ 10 ವರ್ಷಗಳವರೆಗೆ ಎಫ್‌ಡಿ ಇಡಬಹುದು. ಸಾಮಾನ್ಯರಿಗೆ ಶೇಕಡ 5ರಿಂದ 7.5% ಹಾಗೂ ಹಿರಿಯ ನಾಗರಿಕರಿಗೆ ನಾಲ್ಕರಿಂದ 7.75% ಬಡ್ಡಿ ಪಡೆಯಬಹುದು. ಇದೇ ತಿಂಗಳಿನಿಂದ ಕೆನರಾ ಬ್ಯಾಂಕ್ ನ ಹೊಸ ಪರಿಷ್ಕೃತ ಬಡ್ಡಿದರ ಎಲ್ಲಾ ಎಫ್ ಡಿ ಗಳ ಮೇಲೆ ಅನ್ವಯವಾಗಲಿದೆ. ಏಳರಿಂದ 45 ದಿನಗಳ ಅವಧಿಯ ಎಫ್ ಡಿ ಮೇಲೆ 4% ಬಡ್ಡಿ ಹಾಗೂ 46 ರಿಂದ 90 ದಿನಗಳ ಅವಧಿಯ ಠೇವಣಿ ಮೇಲೆ 5.25% ಬಡ್ಡಿ ಸಿಗುತ್ತದೆ. 91 ದಿನದಿಂದ 179 ದಿನಗಳವರೆಗೆ ಠೇವಣಿ ಇಟ್ಟರೆ 5.5% ಬಡ್ಡಿ ದರ ಪಡೆಯಬಹುದು. ಹಾಗೆಯೇ 180 ದಿನದಿಂದ 269 ದಿನಗಳ ವರೆಗಿನ ಠೇವಣಿಗೆ ಕೆನರಾ ಬ್ಯಾಂಕ್ 6.25% ನಷ್ಟು ಬಡ್ಡಿದರ ಕೊಡುತ್ತದೆ.

ಎರಡು ಕೋಟಿಗಿಂತ ಕಡಿಮೆ ಸ್ಥಿರ ಠೇವಣಿಯ ಮೇಲೆ ಹೊಸ ನಿಯಮಗಳನ್ನು ಕೂಡ ಜಾರಿಗೆ ತರಲಾಗಿದೆ. 80 ವರ್ಷ ಮೇಲ್ಪಟ್ಟವರಿಗೆ ಹೆಚ್ಚುವರಿಯಾಗಿ 0.60% ನಷ್ಟು ಬಡ್ಡಿ ಸಿಗುತ್ತದೆ. ಈ ಎಫ್ ಡಿ ಯನ್ನು ಅಕಾಲಿಕವಾಗಿ ಮುಚ್ಚಿದರೆ 1.00% ನಷ್ಟು ದಂಡ ಕೂಡ ಪಾವತಿಸಬೇಕು.

ಇದನ್ನೂ ಓದಿ: Health Tips: ನಿತ್ಯವೂ ಕಾಫಿ ಕುಡುದ್ರೆ ಸಣ್ಣ ಆಗ್ತಾರಾ ?! ಏನ್ ಹೇಳುತ್ತೆ ಸೈನ್ಸ್ ?!

You may also like

Leave a Comment