Gas subsidy: ಕೇಂದ್ರ ಸರ್ಕಾರವು ದೇಶಾದ್ಯಂತ LPG ಗ್ರಾಹಕರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದ್ದು ಗ್ಯಾಸ್ ಸಬ್ಸಿಡಿ(Gas subsidy) ಪಡೆಯಲು ಹೊಸ ನಿಯಮ ಜಾರಿಗೆ ತಂದಿದೆ. ಇನ್ಮುಂದೆ ಗ್ಯಾಸ್ ಸಬ್ಸಿಡಿ ಬೇಕಂದ್ರೆ ನೀವು ಈ ರೂಲ್ಸ್ ಫಾಲೋ ಮಾಡಲೇ ಬೇಕು.
ಹೌದು, ಕೆಲವು ಸಮಯದ ಹಿಂದಷ್ಟೇ ಕೇಂದ್ರ ಸರ್ಕಾರವು(Central Government)ತಮ್ಮ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ (ಎಲ್‌ಪಿಜಿ ಕನೆಕ್ಷನ್) ಪಡೆದ ಬಡ ಮಹಿಳೆಯರಿಗೆ ನೀಡುವ ಸಬ್ಸಿಡಿಯನ್ನು ಪ್ರತಿ ಸಿಲಿಂಡರ್‌ಗೆ ಪ್ರಸ್ತುತ ಇರುವ 200 ರೂಪಾಯಿಯನ್ನು 300 ರೂಪಾಯಿಗೆ ಹೆಚ್ಚಿಸಲು ತೀರ್ಮಾನ ಮಾಡಿತ್ತು. ಅಂತೆಯೇ ಇದನ್ನು ಜಾರಿಗೊಳಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿತ್ತು. ಆದರೀಗ ಈ ಬೆನ್ನಲ್ಲೇ ಸಬ್ಸಿಡಿ ವಿಚಾರದಲ್ಲಿ ನಿಯಮ ಬದಲಾಯಿಸಿ ಆದೇಶ ಹೊರಡಿಸಿದೆ.
ಗ್ಯಾಸ್ KYC ಅಪ್ಡೇಟ್ ಮಾಡಿ:
ಗ್ಯಾಸ್ ಸಬ್ಸಿಡಿಗಾಗಿ ಎಲ್ ಪಿಜಿ ಗ್ಯಾಸ್ ಕೆವೈಸಿ ಅಪ್ಡೇಟ್ ಮಾಡದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬುದು ಗ್ಯಾಸ್ ವೆಂಡರ್ಸ್ ಅಸೋಸಿಯೇಷನ್ ನ ಹೇಳಿಕೆ. ಯಾರು ನಿಗದಿತ ಸಮಯದಲ್ಲಿ ಅಪ್ಡೇಟ್ ಕೊಡುವುದಿಲ್ಲವೋ ಅಂತವರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ್ದು ಗ್ಯಾಸ್ ಸಬ್ಸಿಡಿ ನಿಲ್ಲಿಸುವುದಾಗಿ ಘೋಷಿಸಿದೆ.
ಅಂದಹಾಗೆ ಗ್ರಾಹಕರ ಗ್ಯಾಸ್‌ನ KYC ಅನ್ನು ನವೀಕರಿಸುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವು ಮಾರಾಟಗಾರರ ಮೇಲೆ ಹಾಕಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಗಡುವು ನಿಗದಿಪಡಿಸದಿದ್ದರೂ, ಡಿಸೆಂಬರ್ 31 ರೊಳಗೆ ಈ ಮಾಹಿತಿಯನ್ನು ಸಲ್ಲಿಸಬೇಕು ಮಾರಾಟಗಾರರು ಹೇಳಿದ್ದಾರೆ. ಈ KYC ಅನ್ನು ಡಿಸೆಂಬರ್ 31 ರೊಳಗೆ ನವೀಕರಿಸದಿದ್ದರೆ, LPG ಗ್ಯಾಸ್ ಸಬ್ಸಿಡಿಯನ್ನು ನಿಲ್ಲಿಸಬಹುದು ಎಂದು ತಿಳಿಸಲಾಗಿದೆ.
ಸಬ್ಸಿಡಿ ಪಡೆಯಲು ಗ್ರಾಹಕರು ಬಯೋಮೆಟ್ರಿಕ್ ಮಾಹಿತಿಯನ್ನು ನೀಡಬೇಕು. ಮತ್ತು ಬಯೋಮೆಟ್ರಿಕ್ ಮಾಹಿತಿಗಾಗಿ (ಬಯೋಮೆಟ್ರಿಕ್ KYC ಅಪ್‌ಡೇಟ್) ಪ್ರತಿಯೊಬ್ಬ ವ್ಯಕ್ತಿಯ ಫಿಂಗರ್‌ಪ್ರಿಂಟ್, ಐಬಾಲ್ ಫೋಟೋ, ಫೇಸ್ ಫೋಟೋವನ್ನು ಒದಗಿಸಲು ಶಿಫಾರಸು ಮಾಡಲಾಗಿದೆ. ಇನ್ನು ಗ್ಯಾಸ್ ಮಾರಾಟಗಾರರು ಗ್ಯಾಸ್ ಆಫೀಸ್‌ಗೆ ಹೋಗಿ ಗ್ರಾಹಕರ KYC ಅನ್ನು ನವೀಕರಿಸಬೇಕು. ಇಲ್ಲ ಮನೆ ಮನೆಗೂ ತೆರಳಿ ನವೀಕರಿಸಬಹುದು.
ಇದನ್ನೂ ಓದಿ: Drumstick: ಪುರುಷರೇ ಇದೊಂದು ತರಕಾರಿ ತಿನ್ನಿ ಸಾಕು – ಲೈಂಗಿಕತೆಯಲ್ಲಿ ತೊಡಗಿದಾಗ ನಿಮಗೆ ಸುಸ್ತೇ ಆಗಲ್ಲ !!
