Home » Bank Strike: ಡಿಸೆಂಬರ್ 4 ಕ್ಕಿಲ್ಲಿಲ್ಲ ಬ್ಯಾಂಕ್ ಮುಷ್ಕರ- ಹಾಗಿದ್ರೆ ಯಾವಾಗ ?!

Bank Strike: ಡಿಸೆಂಬರ್ 4 ಕ್ಕಿಲ್ಲಿಲ್ಲ ಬ್ಯಾಂಕ್ ಮುಷ್ಕರ- ಹಾಗಿದ್ರೆ ಯಾವಾಗ ?!

1 comment
Bank Strike

Bank Strike: ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘವು (AIBEA) ಡಿ. 4 ಮತ್ತು ಜನವರಿ 2ರಿಂದ 6ರವರೆಗೆ ನಡೆಸಲು ಉದ್ದೇಶಿಸಿದ್ದ ಬ್ಯಾಂಕ್‌ ನೌಕರರ ಮುಷ್ಕರವನ್ನು (Bank Strike)ಮುಂದೂಡಲಾಗಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಮತ್ತು ಪಂಜಾಬ್‌ ಮತ್ತು ಸಿಂಧ್‌ ಬ್ಯಾಂಕ್‌ಗಳ ನೌಕರರು ಡಿ. 4ರಂದು ಮುಷ್ಕರ ನಡೆಸಲು ಮುಂದಾಗಿದ್ದರು. ಡಿ. 5ರಂದು ಬ್ಯಾಂಕ್‌ ಆಫ್‌ ಬರೋಡಾ, ಬ್ಯಾಂಕ್‌ ಆಫ್‌ ಇಂಡಿಯಾ, ಡಿ. 7ರಂದು ಕೆನರಾ ಬ್ಯಾಂಕ್‌ ಮತ್ತು ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, ಡಿ. 8ರಂದು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದರು.

ನೌಕರರ ಬೇಡಿಕೆಗಳಿಗೆ ಭಾರತೀಯ ಬ್ಯಾಂಕ್‌ ಸಂಘಟನೆಯು (ಐಬಿಎ) ಸ್ಪಂದನೆ ನೀಡಿರುವ ಹಿನ್ನೆಲೆ ಸಂಘ ಮುಷ್ಕರದ ಯೋಚನೆ ಕೈ ಬಿಟ್ಟಿರುವ ಸಾಧ್ಯತೆ ನೀಡಿದೆ. ಅಖಿಲ ಭಾರತ ಮಟ್ಟದಲ್ಲಿ ಜ. 19 ಮತ್ತು 20ರಂದು ಮುಷ್ಕರಕ್ಕೆ ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘವು ಕರೆ ನೀಡಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಪಂಜಾಬ್‌ ಮತ್ತು ಸಿಂಧ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ, ಬ್ಯಾಂಕ್‌ ಆಫ್‌ ಇಂಡಿಯಾ, ಕೆನರಾ ಬ್ಯಾಂಕ್‌, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಸೇರಿದಂತೆ ಬಹುತೇಕ ಬ್ಯಾಂಕ್‌ಗಳ ನೌಕರರು ಈ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ.

“ಬ್ಯಾಂಕಿಂಗ್ ಸರಿಯಾಗಿ ನೇಮಕವಾಗುತ್ತಿಲ್ಲ. ಕಾಯಂ ಉದ್ಯೋಗಗಳ ಬದಲು ಹೊರಗುತ್ತಿಗೆ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಇದನ್ನು ವಿರೋಧಿಸಿ ಬ್ಯಾಂಕಿಂಗ್‌ ಯೂನಿಯನ್‌ ಮುಷ್ಕರಕ್ಕೆ ಕರೆ ನೀಡಿದ್ದು, ಹುದ್ದೆಗಳನ್ನು ಕಡಿತಗೊಳಿಸಿದ ಹಿನ್ನೆಲೆ ನೌಕರರ ಮೇಲೆ ಒತ್ತಡ ಹೆಚ್ಚಿದೆ,” ಎಂದು ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ನೀಡಿದ್ದಾರೆ.

ಇದನ್ನೂ ಓದಿ: Electric Sewing Machine: ಮಹಿಳೆಯರೆ ಸರ್ಕಾರದಿಂದ ಸಿಗ್ತಿದೆ ಉಚಿತ ಎಲೆಕ್ಟ್ರಿಕ್ ಹೊಲಿಗೆ ಯಂತ್ರ – ತಕ್ಷಣ ಅರ್ಜಿ ಸಲ್ಲಿಸಿ, ಹೊಲಿಗೆಯಂತ್ರ ನಿಮ್ಮದಾಗಿಸಿ

You may also like

Leave a Comment