FD Scheme: ಮದುವೆಯಾಗಲಿರುವ ಹುಡುಗಿರಿಗೆಲ್ಲಾ ಸಂತಸದ ಸುದ್ದಿ ಇಲ್ಲಿದೆ. ನಿಮಗಾಗಿ ಅಧಿಕ ಬಡ್ಡಿಯ ಹೊಸ FD ಸ್ಕೀಮ್ ಬಂದಿದೆ. ಹೌದು, ಸರ್ಕಾರ ವಿಶೇಷ ಯೋಜನೆ (FD Scheme) ಜಾರಿಗೆ ತಂದಿದ್ದು, ಸರಳ ಸಾಮೂಹಿಕ ವಿವಾಹ ಜನಪ್ರಿಯಗೊಳಿಸಲು ಆದರ್ಶ ವಿವಾಹ ಯೋಜನೆಯನ್ನು ಜಾರಿಗೆ ಮಾಡಿದೆ.
ರಾಜ್ಯ ಸರ್ಕಾರದ ಸರಳ ಸಾಮೂಹಿಕ ವಿವಾಹ ಜನಪ್ರಿಯ ಯೋಜನೆ ಇದಾಗಿದೆ. ಆದರ್ಶ ವಿವಾಹ ಯೋಜನೆ (Adarsh Vivah Yojana) ಯನ್ನು 2007-08ರಲ್ಲಿ ಜಾರಿಮಾಡಿದ್ದು, ಈ ಯೋಜನೆಯನ್ನು ಮದುವೆ ಆಗುವ ಯುವಕ ಯುವತಿಯರು ಅಳವಡಿಸಿಕೊಳ್ಳಬಹುದು. ಮದುವೆಯಾಗುವ ವಧು ವರರ ದುಂದುವೆಚ್ಚ ತಪ್ಪಿಸಲು ಈ Adarsh Vivah Yojana ಯನ್ನು ಜಾರಿಗೆ ತರಲಾಗಿದೆ.
ಈ ಸಾಮೂಹಿಕ ವಿವಾಹ ಮೂಲಕ ವಧುವಿನ ಹೆಸರಲ್ಲಿ ರೂ.10,000 ಹಣವನ್ನು 2 ವರ್ಷದ ಅವಧಿಗೆ ನಿಶ್ಚಿತ ಠೇವಣಿ ಇಡಬಹುದು. ಬೇರೆ ಜಾತಿ ವಿವಾಹಗಳಿಗೆ ಈ ಯೋಜನೆಯಲ್ಲಿ ಅವಕಾಶವಿದೆ. ಆದರೆ ಈ ಪ್ರೋತ್ಸಾಹಧನ ಪಡೆಯಲು ವಧು ವರರು ವಿವಾಹ ನೋಂದಣಿ ಮಾಡಿಸುವುದು ಕಡ್ಡಾಯ ವಾಗಿದೆ.
ಇದನ್ನೂ ಓದಿ: ಬಾಯಿಗೆ ಬಾಯಿಟ್ಟು ಹಾವಿಗೆ ಮರು ಜೀವ ನೀಡಿದ ಪೊಲೀಸ್ !! ವೈರಲ್ ಆಯ್ತು ವಿಡಿಯೋ
