Home » Canara Bank,SBI ಸೇರಿದಂತೆ ವಿವಿಧ ಸರ್ಕಾರಿ ಬ್ಯಾಂಕ್​ಗಳಿಂದ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್ ಬಿಡುಗಡೆ!!!

Canara Bank,SBI ಸೇರಿದಂತೆ ವಿವಿಧ ಸರ್ಕಾರಿ ಬ್ಯಾಂಕ್​ಗಳಿಂದ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್ ಬಿಡುಗಡೆ!!!

1 comment
Diwali Gifts

Diwali Gifts: ದೀಪಾವಳಿ ಹಬ್ಬದ(Diwali Festival) ಸಮಯದಲ್ಲಿ ಹೆಚ್ಚಿನ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ. ಉಡುಗೊರೆಗಳು ಸಿಹಿತಿಂಡಿಗಳಿಂದ ಹಿಡಿದು ಗೃಹೋಪಯೋಗಿ ವಸ್ತುಗಳವರೆಗೆ ಅನೇಕ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ನೀಡುವುದಿದೆ. ಇದೀಗ, ದೀಪಾವಳಿ(Diwali)ಹಬ್ಬದ ಹಿನ್ನೆಲೆ ಬ್ಯಾಂಕ್ ನೌಕರರಿಗೆ ಬೊಂಬಾಟ್ ಗಿಫ್ಟ್(Diwali Gifts) ಸಿಗಲಿದೆ.

ದೀಪಾವಳಿ ಹಿನ್ನೆಲೆ ಸ್ಟೇಟ್ ಬ್ಯಾಂಕ್ ಇಂಡಿಯಾ(SBI), ಕೆನರಾ ಬ್ಯಾಂಕ್ (Canara Bank), ಇಂಡಿಯನ್ ಓವರ್ಸೀಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ಮೊದಲಾದ ಸರ್ಕಾರಿ ಬ್ಯಾಂಕುಗಳಲ್ಲಿ ಸಿಹಿತಿಂಡಿಯ ಜೊತೆಗೆ ಉಡುಗೊರೆಯಾಗಿ (Deepavali Gift)ಪ್ರತಿಯೊಬ್ಬ ಉದ್ಯೋಗಿಗೂ 2,500 ರೂವರೆಗೆ ಹಣವನ್ನು ನೀಡಲಾಗುತ್ತಿದೆ.

ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್ಬಿಐ (State Bank of India) ತನ್ನ ಪ್ರತಿಯೊಬ್ಬ ಉದ್ಯೋಗಿಗೂ ಕೂಡ 2,500 ರೂಗಳಷ್ಟು ದೀಪಾವಳಿ ಬೋನಸ್ (Deepavli Bonus)ಅನ್ನು ಘೋಷಣೆ ಮಾಡಿದೆ. ಸಿಹಿತಿಂಡಿಯ ಜೊತೆಗೆ ಎಲ್ಲಾ ಎಸ್ಬಿಐ ಉದ್ಯೋಗಿಗಳಿಗೂ ಗ್ರೀಟಿಂಗ್ ಕಾರ್ಡ್ (Greeting Cards)ಕೂಡ ನೀಡಲಾಗುತ್ತಿದೆ. ಇದರ ಜೊತೆಗೆ,ಸಿಹಿ ತಿಂಡಿ, ಡ್ರೈಫ್ರೂಟ್ ಇತ್ಯಾದಿ ಖರೀದಿಸಿ ಉದ್ಯೋಗಿಗಳಿಗೆ ವಿತರಿಸುವ ಸಲುವಾಗಿ ಪ್ರತಿಯೊಬ್ಬ ಎಸ್ಬಿಐ ಬ್ಯಾಂಕ್ ನೌಕರರಿಗೆ 2,500 ರೂನಂತೆ ಹಣ ಬಿಡುಗಡೆ ಮಾಡಲಾಗಿದೆ. ಇದಲ್ಲದೇ, ದೀಪಾವಳಿ ಹಬ್ಬಕ್ಕೆ ಮುನ್ನ ಸಿಹಿ ಡಬ್ಬಿಗಳನ್ನು ಉದ್ಯೋಗಿಗಳಿಗೆ ಹಂಚಬೇಕೆಂದು ಸೂಚನೆ ನೀಡಲಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ನ(PNB)ಉದ್ಯೋಗಿಗಳಿಗೆ 1,000 ರೂ ಮೌಲ್ಯದ ಸಿಹಿ ತಿಂಡಿಯನ್ನು ದೀಪಾವಳಿ ಗಿಫ್ಟ್ ನೀಡಲು ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ. ಇದರ ಜೊತೆಗೆ ಸರ್ಕಾರಿ ಬ್ಯಾಂಕುಗಳ ಉದ್ಯೋಗಿಗಳಿಗೂ (PSU Banks Employees) ಗಿಫ್ಟ್ (Deepvali Gift) ನೀಡಲಾಗುತ್ತಿದ್ದು, 2,500 ರೂವರೆಗೆ ಹಣವನ್ನು ಎಲ್ಲಾ ಉದ್ಯೋಗಿಗಳಿಗೂ ನೀಡಲಾಗುತ್ತಿದೆ. ನವೆಂಬರ್ 10ರಿಂದ 14ರವರೆಗೆ ಇರುವ ದೀಪಾವಳಿ ಹಬ್ಬಕ್ಕೆ ಮನೆಗೆ ಸಿಹಿತಿಂಡಿ, ಬಟ್ಟೆ ವಗೈರೆ ಖರೀದಿಸಲು ನೆರವಾಗುವ ನಿಟ್ಟಿನಲ್ಲಿ ಹಣ ಬಿಡುಗಡೆ ಮಾಡಲಾಗಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಪ್ರತಿಯೊಬ್ಬ ಉದ್ಯೋಗಿಗೂ 1,500 ರೂ ಯನ್ನು ದೀಪಾವಳಿ ಹಬ್ಬಕ್ಕೆ ಗಿಫ್ಟ್ ಆಗಿ ನೀಡಲಿದೆ. ಕೆನರಾ ಬ್ಯಾಂಕ್ ಕೂಡ ತನ್ನ ಉದ್ಯೋಗಿಗಳಿಗೆ ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ 2,500 ರೂ ನೀಡಿದ್ದು, ಇಂಡಿಯನ್ ಓವರ್ಸೀಸ್ ಬ್ಯಾಂಕ್ನ ಉದ್ಯೋಗಿಗಳಿಗೆ ಹಬ್ಬದ ಸಂಭ್ರಮ ಇಮ್ಮಡಿ ಮಾಡಲು 2,000 ರೂ. ದೀಪಾವಳಿ ಗಿಫ್ಟ್ ನೀಡಿದೆ.

ಇದನ್ನೂ ಓದಿ: Canara Bank,SBI ಸೇರಿದಂತೆ ವಿವಿಧ ಸರ್ಕಾರಿ ಬ್ಯಾಂಕ್ಗಳಿಂದ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್ ಬಿಡುಗಡೆ!!!

You may also like

Leave a Comment