RBI new rules: ಇಂದಿನ ದಿನದಲ್ಲಿ ಬ್ಯಾಂಕ್ ಲೋನ್ (Bank Loan) ಇಲ್ಲದೆ ಸ್ವಂತವಾದ ಮನೆಯನ್ನು ಕಟ್ಟಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಹೋಂ ಲೋನ್ (Home Loan) ಲಕ್ಷಾಂತರ ರೂಪಾಯಿಯಲ್ಲಿರುವ ಕಾರಣಕ್ಕಾಗಿ ಅದನ್ನು ಕಡಿಮೆ ಅಂದ್ರೆ 20 ರಿಂದ 30 ವರ್ಷಗಳ ಅವಧಿಯಲ್ಲಿ ಕಟ್ಟಬೇಕಾಗಿರುತ್ತದೆ. ಇದೀಗ ರಿಸರ್ವ್ ಬ್ಯಾಂಕ್ ಸಹಕಾರಿ ಬ್ಯಾಂಕುಗಳಿಗೆಲ್ಲಾ ಹೊಸ ನಿಯಮ(RBI new rules) ಘೋಷಿಸಿದೆ.
ಇದೀಗ ಸಹಕಾರಿ ಬ್ಯಾಂಕುಗಳಿಂದ ಪಡೆದುಕೊಳ್ಳಬಹುದಾಗಿರುವ ಲೋನ್ ಲಿಮಿಟ್ (Loan Limit) ಅನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪರಿಷ್ಕರಿಸಿದೆ ಎನ್ನಲಾಗಿದೆ. ಈ ಹಿಂದೆ ಸಹಕಾರಿ ಬ್ಯಾಂಕುಗಳಲ್ಲಿ ಲೋನ್ ಪಡೆದುಕೊಳ್ಳುವ ಲಿಮಿಟ್ 70 ಲಕ್ಷ ರೂಪಾಯಿಗಳು ಇತ್ತು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಈಗ ಸಹಕಾರಿ ಬ್ಯಾಂಕುಗಳಿಂದ ಪಡೆದುಕೊಳ್ಳುವಂತಹ ಲೋನ್ ಲಿಮಿಟ್ (Loan Limit) ಅನ್ನು ಇನ್ನಷ್ಟು ಹೆಚ್ಚಿಸಿದೆ. ಈಗ ಸಹಕಾರಿ ಬ್ಯಾಂಕುಗಳಿಂದ ಹೋಂ ಲೋನ್ ವಿಚಾರದಲ್ಲಿ 75 ಲಕ್ಷಗಳ ಸಾಲವನ್ನು ಮಾಡಬಹುದಾಗಿದೆ ಎಂಬುದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ಇತ್ತೀಚಿಗಷ್ಟೇ ನಡೆದಿರುವ ಮೀಟಿಂಗ್ನಲ್ಲಿ Repo Rate ಕೂಡ ಸ್ಥಿರವಾಗಿದೆ ಎಂಬುದು ತಿಳಿದುಬಂದಿದ್ದು, 6.5% ದಲ್ಲಿಯೇ ಮುಂದುವರೆಯುತ್ತಿದೆ.
