Savings Account: ಬ್ಯಾಂಕ್‌ನಲ್ಲಿ ಸೇವಿಂಗ್ಸ್ ಖಾತೆ(Savings Account) ಹೊಂದಿರುವುದು ವಹಿವಾಟು ನಡೆಸಲು ಅವಶ್ಯಕವಾಗಿದ್ದು, ಆದರೆ ನಿಮ್ಮ ಸೇವಿಂಗ್ಸ್ ಅಕೌಂಟ್‌ನಲ್ಲಿ (Savings Account) ಸರಾಸರಿ ಬ್ಯಾಲೆನ್ಸ್ ಅನ್ನು ಹೊಂದಿರಲೇಬೇಕಾಗುತ್ತದೆ. ಮಿನಿಮಮ್ ಬ್ಯಾಲೆನ್ಸ್ (Minimum Balance)ಇಲ್ಲದಿದ್ದರೆ ಅದಕ್ಕೆ ದಂಡ ವಿಧಿಸಲಾಗುತ್ತದೆ.
ಮೆಟ್ರೋ ಇಲ್ಲವೇ ಗ್ರಾಮೀಣ ವಲಯಗಳಲ್ಲಿ ವಾಸಿಸುತ್ತಿದ್ದರೆ ವಿವಿಧ ಬ್ಯಾಂಕ್‌ಗಳಿಗೆ (Bank) ಉಳಿತಾಯ ಖಾತೆಯ ಕನಿಷ್ಠ ಬ್ಯಾಲೆನ್ಸ್ ರೂ 2000 ನಿಂದ ರೂ 10,000 ವಾಗಿರುತ್ತದೆ. ಬ್ಯಾಲೆನ್ಸ್ ನಿರ್ವಹಿಸದೇ ಹೋದರೆ ಅದಕ್ಕೆ ದಂಡವಾಗಿ ರೂ 500-600 ವಿಧಿಸಲಾಗುತ್ತದೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಮೇಂಟೇನ್ ಮಾಡಲು ಆಗುತ್ತಿಲ್ವೇ? ಈ ಟಿಪ್ಸ್ ಫಾಲೋ ಮಾಡಿ, ಪೆನಾಲ್ಟಿಯಿಂದ ಪಾರಾಗಿ!!
# ಸೇವಿಂಗ್ಸ್ ಅಕೌಂಟ್ ಕ್ಲೋಸ್ ಮಾಡಿ
ನಿಮ್ಮ ಬ್ಯಾಂಕ್ ಕನಿಷ್ಠ ಮಾಸಿಕ ಮೊತ್ತವನ್ನು ನಿಮಗೆ ನಿರ್ವಹಿಸಲು ಸಾಧ್ಯವಿದ್ದಲ್ಲಿ ಮಾತ್ರವೇ ಸೇವಿಂಗ್ಸ್ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ. ಒಂದು ವೇಳೆ, ಸರಾಸರಿ ಮೊತ್ತವನ್ನು ನಿರ್ವಹಿಸಲು ಸಾದ್ಯವೇ ಇಲ್ಲ ಎಂದಾದರೆ ದಂಡದಿಂದ ಪಾರಾಗಲು ನಿಮ್ಮ ಸೇವಿಂಗ್ಸ್ ಅಕೌಂಟ್ ಅನ್ನು ಕ್ಲೋಸ್ ಮಾಡಿಬಿಡಿ.
# ಶೂನ್ಯ ಬ್ಯಾಲೆನ್ಸ್ ಸೇವಿಂಗ್ಸ್ ಅಕೌಂಟ್‌ಗೆ ಬದಲಿಸಿಕೊಳ್ಳಿ
ಸೇವಿಂಗ್ಸ್ ಅಕೌಂಟ್ ಅನ್ನು ಕ್ಲೋಸ್ ಮಾಡಿದ ಬಳಿಕ ಜೀರೊ ಬ್ಯಾಲೆನ್ಸ್ ಸೇವಿಂಗ್ಸ್ ಖಾತೆಯನ್ನು ತೆರೆಯಲು ಅವಕಾಶವಿದೆ. ನಿಮ್ಮ ಬ್ಯಾಂಕ್ ಈ ಸೇವೆ ನೀಡುವುದಾದರೆ ಹೊಸ ಅಪ್ಲಿಕೇಶನ್‌ಗಳನ್ನು ಸಲ್ಲಿಸುವ ಮೂಲಕ ಜೀರೊ ಬ್ಯಾಲೆನ್ಸ್ ಉಳಿತಾಯ ಖಾತೆಯನ್ನು ತೆರೆಯಿರಿ. ನೀವು ಖಾತೆ ಹೊಂದಿರುವ ಬ್ಯಾಂಕಿನಲ್ಲಿ ಈ ಸೌಲಭ್ಯವಿಲ್ಲ ಎಂದರೆ ಬೇರೆ ಬ್ಯಾಂಕ್‌ಗಳಲ್ಲಿ ಶೂನ್ಯ ಬ್ಯಾಲೆನ್ಸ್ ಖಾತೆಗಳನ್ನು ತೆರೆಯಬಹುದು.
# ನೆಗೆಟೀವ್ ಬ್ಯಾಲೆನ್ಸ್
ಸೇವಿಂಗ್ಸ್ ಅಕೌಂಟ್ ಅನ್ನು ನೀವು ಕ್ಲೋಸ್ ಮಾಡುವ ಸಂದರ್ಭ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದೇ ಇರುವ ಹಿನ್ನೆಲೆ ನೀವು ನೆಗೆಟೀವ್ ಬ್ಯಾಲೆನ್ಸ್ ಹೊಂದಿರುವ ಸಂಭವವಿರುತ್ತದೆ. ಈ ವೇಳೆ ನೀವು ಬ್ಯಾಂಕಿನ ಸಿಬ್ಬಂದಿಯನ್ನು ಸಂಪರ್ಕಿಸಬೇಕಾಗಬಹುದು.
# ಕೆಲವು ದಿನಗಳವರೆಗೆ ಹೆಚ್ಚಿನ ಮೊತ್ತವನ್ನು ಖಾತೆಯಲ್ಲಿರಿಸಿಕೊಳ್ಳಿ
ಸೇವಿಂಗ್ಸ್ ಅಕೌಂಟ್‌ನಲ್ಲಿ ಕೊಂಚ ಮೊತ್ತವನ್ನು ಉಳಿತಾಯ ಮಾಡುವುದರಿಂದ ಆ ಹಣ ಭವಿಷ್ಯದಲ್ಲಿ ನಿಮಗೆ ನೆರವಾಗುತ್ತದೆ. ನೀವು ತಿಂಗಳಿಗೆ ರೂ 10,000 ಬ್ಯಾಲೆನ್ಸ್ ನಿರ್ವಹಿಸಬೇಕು ಎಂದುಕೊಂಡರೆ ನೀವು 6 ದಿನಗಳವರೆಗೆ ರೂ 50,000 ಮೊತ್ತವನ್ನು ಖಾತೆಯಲ್ಲಿ ಇರಿಸಿ, ಕನಿಷ್ಠ ಮಾಸಿಕ ಮೌಲ್ಯವನ್ನು 30 ದಿನಗಳವರೆಗೆ ನಿರ್ವಹಣೆ ಮಾಡಬಹುದು.
