Home » Cauvery 2.0 Software To Property Registration : ಆಸ್ತಿ ಖರೀದಿ ಮಾರಾಟಗಾರರಿಗೆ ಗುಡ್ ನ್ಯೂಸ್ !

Cauvery 2.0 Software To Property Registration : ಆಸ್ತಿ ಖರೀದಿ ಮಾರಾಟಗಾರರಿಗೆ ಗುಡ್ ನ್ಯೂಸ್ !

0 comments
Cauvery 2.0 Software To Property Registration

Cauvery 2.0 Software To Property Registration : ಆಸ್ತಿ ಖರೀದಿ ಮತ್ತು ಮಾರಾಟಗಾರರಿಗೆ (Cauvery 2.0 Software To Property Registration) ಗುಡ್ ನ್ಯೂಸ್ ಇಲ್ಲಿದೆ.
ಕಾವೇರಿ 2.0 ತಂತ್ರಾಂಶದಿಂದ ನೋಂದಣಿ ಪ್ರಕ್ರಿಯೆಯ ಬಗ್ಗೆ ಮಾಹಿತಿ ಇಲ್ಲಿದೆ. ಸುರಕ್ಷತೆ ಕ್ರಮಗಳೊಂದಿಗೆ ಸ್ಥಿರಾಸ್ತಿ, ಚರಾಸ್ತಿ ಇತರೆ ನೋಂದಣಿ ಪ್ರಕ್ರಿಯೆ 10 ನಿಮಿಷದಲ್ಲಿ ಪೂರ್ಣಗೊಳ್ಳಲಿದೆ. ಕಾವೇರಿ 2.0 ತಂತ್ರಾಂಶ ಜೂನ್ 25ರ ವೇಳೆಗೆ ರಾಜ್ಯದ ಎಲ್ಲಾ 260 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ಬಳಕೆದಾರರು ಅಗತ್ಯ ವಿವರ, ದಾಖಲೆ ಅಪ್ಲೋಡ್ ಮಾಡಿ, ಶುಲ್ಕ ಪಾವತಿಸಿ, ನೋಂದಣಿಗೆ ಸಮಯ ನಿಗದಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಈಗಾಗಲೇ 24 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾವೇರಿ 2.0 ತಂತ್ರಾಂಶ ಬಳಕೆಯಲ್ಲಿದೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ತಂತ್ರಾಂಶ ಬಳಕೆ, ನಿರ್ವಹಣೆಯ ತೊಂದರೆ ಸವಾಲುಗಳನ್ನು ಗುರುತಿಸಿ ಸರಿಪಡಿಸಿಕೊಳ್ಳುತ್ತಿದ್ದು, ಹಂತ ಹಂತವಾಗಿ ರಾಜ್ಯದ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೂ
ವಿಸ್ತರಿಸಲಾಗಿದೆ.

ಪಾಸ್ಪೋರ್ಟ್ ಕಚೇರಿ ಮಾದರಿಯ ನೋಂದಣಿ ಸೇವೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಕಚೇರಿ ನವೀಕರಣ, ವಿನ್ಯಾಸ ಕಾರ್ಯ ನಡೆಯುತ್ತಿದೆ. ನೋಂದಣಿಗೆ ಮೊದಲೇ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೇವಲ 10 ರಿಂದ 15 ನಿಮಿಷದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಕಾವೇರಿ 2.0 ತಂತ್ರಾಂಶ ಭೂಮಿ ಸೇರಿದಂತೆ ಭೂ ದಾಖಲೆಗೆ ಸಂಬಂಧಿಸಿದ ಹಲವು ತಂತ್ರಾಂಶಗಳೊಂದಿಗೆ ಇದು ಜೋಡಣೆಯಾಗಿದ್ದು, ಆಸ್ತಿಯ (property) ಸರ್ವೇ ನಂಬರ್ ಗಳನ್ನು ಕಾವೇರಿ 2.0 ದಲ್ಲಿ ದಾಖಲಿಸುತ್ತಿದ್ದಂತೆ ಆಸ್ತಿಯ ಸ್ಥಿತಿಗತಿಯ ಮಾಹಿತಿ ತಿಳಿಯುತ್ತದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವ ಕೊನೆಯ ಕ್ಷಣದವರೆಗೂ ಅಸ್ತಿಯ ಸ್ಥಿತಿಗತಿ ಪರಿಶೀಲಿಸಿ ಖಾತರಿಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.

 

ಇದನ್ನು ಓದಿ : OnePlus : ಒಂದು ಮೊಬೈಲ್​ ತಗೊಂಡ್ರೆ ಇನ್ನೊಂದು ಫೋನ್​ ಉಚಿತನಾ? ಇದು OnePlus ಆಫರ್! 

You may also like

Leave a Comment