Home » Cibil Score: ಬ್ಯಾಂಕ್ ಸಾಲಕ್ಕೆ ಸಿಬಿಲ್ ಸ್ಕೋರ್ ಬೇಡ!!

Cibil Score: ಬ್ಯಾಂಕ್ ಸಾಲಕ್ಕೆ ಸಿಬಿಲ್ ಸ್ಕೋರ್ ಬೇಡ!!

0 comments

Cibil Score: ಈ ಮೊದಲು ಬ್ಯಾಂಕ್ ಸಾಲ ಪಡೆಯುವವರಿಗೆ CIBIL ಸ್ಕೋರ್ ಇಲ್ಲದ ಕಾರಣಕ್ಕೆ ಬ್ಯಾಂಕ್ ಗಳಲ್ಲಿ ಸಾಲ ನೀಡಲಾಗುತ್ತಿರಲಿಲ್ಲ. ಆದ್ರೆ ಇನ್ನುಮುಂದೆ CIBIL ಸ್ಕೋರ್ ಕಾರಣ ನೀಡದೆ ಸಾಲ ನಿರಾಕರಿಸಲಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ, ಹೊಸ ಸಾಲ ಪಡೆಯುವವರ ಸಾಲ ಅರ್ಜಿಗಳನ್ನು ಅವರಿಗೆ ಹಿಂದಿನ ಸಾಲ ಇತಿಹಾಸವಿಲ್ಲ ಎಂಬ ಕಾರಣಕ್ಕಾಗಿ ತಿರಸ್ಕರಿಸಲಾಗುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕುಗಳು ಮತ್ತು ಕ್ರೆಡಿಟ್ ಸಂಸ್ಥೆಗಳಿಗೆ ಸೂಚನೆ ನೀಡಿದೆ ಎಂದು ಹೇಳಿದ್ದಾರೆ. ಮೊದಲ ಬಾರಿಗೆ ಸಾಲ ಪಡೆಯುವವರ ಸಾಲ ಅರ್ಜಿಗಳನ್ನು ಅವರಿಗೆ ಕ್ರೆಡಿಟ್ ಇತಿಹಾಸವಿಲ್ಲ ಎಂಬ ಕಾರಣಕ್ಕಾಗಿ ತಿರಸ್ಕರಿಸಬಾರದು ಎಂದು RBI ಸಲಹೆ ನೀಡಿದೆ. ಮುಖ್ಯವಾಗಿ ಆರ್‌ಬಿಐ ಸಾಲಗಾರರಿಗೆ ಯಾವುದೇ ಕನಿಷ್ಠ ಕ್ರೆಡಿಟ್ ಸ್ಕೋರ್ ಅನ್ನು ನಿಗದಿಪಡಿಸಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

You may also like