Home » ಪ್ರೀತಿ ಮಾಯೆ ಹುಷಾರು | ಆದರೆ ಹೆತ್ತಮ್ಮನ ಕೊಲೆ ಮಾಡುವವರೆಗೆ? ಅಮ್ಮನಿಗೇ ಮುಹೂರ್ತ ಇಟ್ಟ ಮಗಳು, ಯಾಕಾಗಿ?

ಪ್ರೀತಿ ಮಾಯೆ ಹುಷಾರು | ಆದರೆ ಹೆತ್ತಮ್ಮನ ಕೊಲೆ ಮಾಡುವವರೆಗೆ? ಅಮ್ಮನಿಗೇ ಮುಹೂರ್ತ ಇಟ್ಟ ಮಗಳು, ಯಾಕಾಗಿ?

0 comments

ಪ್ರೀತಿಯ ಬಲೆಯಲ್ಲಿ ಬಿದ್ದವರಿಗೆ ತಮ್ಮದೇ ಗುಂಗಲ್ಲೇ ಮೈ ಮರೆತು ಹೆತ್ತವರ, ಸಮಾಜದ ಕೆಂಗಣ್ಣಿಗೆ ಗುರಿಯಾಗಿ ಮದುವೆ ಮಾಡಿಕೊಳ್ಳೋದು ಇಂದಿನ ಕಾಲದಲ್ಲಿ ಸಾಮಾನ್ಯ ವಿಚಾರವಾಗಿ ಬಿಟ್ಟಿದೆ. ಆದ್ರೆ, ಪ್ರೀತಿ ಕುರುಡು ಎಂಬ ಮಾತಿನಂತೆ ಪ್ರೇಮದ ನಶೆಯಲ್ಲಿ ತೇಲಾಡುತ್ತ ಇದಕ್ಕೆ ಮನೆಯವರು ವಿರೋಧ ವ್ಯಕ್ತ ಪಡಿಸಿದಾಗ ಕೊಂಚ ಸಮಯ ಕೋಪ – ತಾಪ , ಗಲಾಟೆ ನಡೆದು ಮಾತುಕತೆ ನಿಂತು ಮನೆಯವರಿಂದ ದೂರ ಆಗುವುದು ಕಾಮನ್.. ಆದರೆ, ಹೆತ್ತ ತಾಯಿ ತನ್ನ ಪ್ರೀತಿಗೆ ಸಮ್ಮತಿ ಸೂಚಿಸಿಲ್ಲ ವೆಂದು ತಾಯಿಯನ್ನೇ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಕೆಲವು ಪ್ರಕರಣಗಳು ಆಸ್ತಿ ವಿಚಾರಕ್ಕೋ, ಇಲ್ಲವೇ ಕುರುಡು ಕಾಂಚಣದ ಮಹಿಮೆಯೋ ಇಲ್ಲದೇ ಹೋದರೆ ಪ್ರೀತಿಯ ಜಾಲಕ್ಕೊ ಒಟ್ಟಿನಲ್ಲಿ ಒಬ್ಬರು ಮತ್ತೊಬ್ಬರನ್ನು ಕೊಲೆಗೈಯಲು ಕಾರಣವೇ ಬೇಕಾಗಿಲ್ಲ. ಮಕ್ಕಳಿಗಾಗಿ ತನ್ನೆಲ್ಲ ಜೀವನವನ್ನು ಒತ್ತೆಯಿರಿಸಿ ತ್ಯಾಗ ಮಾಡುವ ಹೆತ್ತಮ್ಮ ನನ್ನೆ ಪ್ರೀತಿಯ ಮೋಡಿಗೆ ಸಿಲುಕಿ ಮಗಳೆ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.

ಹದಿ ಹರೆಯದ ವಯೋಸಹಜ ಆಕರ್ಷಣೆ ಗೆ ಬಲಿಯಾಗಿ ಹದಿನೇಳು ವರ್ಷದ ಹುಡುಗಿ ತನ್ನ ತಾಯಿಯನ್ನೇ ಸಾವಿನ ದವಡೆಗೆ ಸಿಲುಕಿಸಿದ ಘಟನೆ ವರದಿಯಾಗಿದೆ. ಪ್ರಿಯತಮನಿಗಾಗಿ ಹದಿನೇಳರ ಹರೆಯದ ಹುಡುಗಿ ತನ್ನ ಪ್ರಿಯಕರನ ಜೊತೆ ಸೇರಿ ತನ್ನ ತಾಯಿಯನ್ನು ಚಾಕುವಿನಿಂದ ಹಲವು ಬಾರಿ ಇರಿದು ಕೊಂದಿದ್ದು, ಆದರೂ ಕೂಡ ಕಿಂಚಿತ್ತು ಪಾಪ ಪ್ರಜ್ಞೆ ಕಾಡದೇ ಚಾಕು ವಿನಿಂದ ಇರಿದ ಬಳಿಕ , ತಾಯಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.

ಪೊಲೀಸರ ಮಾಹಿತಿ ಅನುಸಾರ, ಎರಡು ತಿಂಗಳ ಹಿಂದೆ ಹುಡುಗಿ, ಆಕೆಯ ಪ್ರಿಯತಮನ ಜೊತೆಗೆ ಮನೆ ಬಿಟ್ಟು ಓಡಿ ಹೋಗಿದ್ದಾಳೆ. ಈ ವೇಳೆ ಆಕೆಯನ್ನು ತಡೆದು, ಮನೆಗೆ ಕರೆದು ತರಲಾಗಿದೆ. ಇತ್ತ ಆಕೆಯ ಪ್ರೇಮಿಯನ್ನು ಪೊಲೀಸರಿಗು ಕೂಡ ಒಪ್ಪಿಸಲಾಗಿತ್ತು. ಪೊಲೀಸರು ಯುವಕನನ್ನು ಬಂಧಿಸಿದ್ದು, ನಂತರ ಯುವಕನಿಗೆ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿತ್ತು.

ಭಾನುವಾರ ಬಾಲಕಿ ಮತ್ತು ಆಕೆಯ ಪ್ರಿಯಕರ ಪ್ಲಾನ್ ಮಾಡಿ ಬಾಲಕಿಯ ತಾಯಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಹತ್ಯೆಗೀಡಾದ ಮಹಿಳೆ 38 ವರ್ಷ ವಯಸ್ಸಿನವರಾಗಿದ್ದು, ಭಿಂಡ್ ಜಿಲ್ಲೆಯ ನಿವಾಸಿ ಎನ್ನಲಾಗಿದೆ. ತಾಯಿ ಮಗಳ ಜೊತೆ ಹಜಿರಾ ಪೊಲೀಸ್ ಠಾಣೆ ವ್ಯಾಪ್ತಿಯ ಗಡಿಯಾಪುರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದರು ಎನ್ನಲಾಗಿದೆ.

ಭಾನುವಾರ ಮಹಿಳೆ ಮನೆಯ ಬಾಗಿಲು ತೆರೆಯದೇ ಇದ್ದಾಗ ಬೇರೆಯವರಿಂದ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಮನೆಯೊಳಗೆ ಹೋಗಿ ನೋಡಿದಾಗ ಅಲ್ಲಿ ಮಹಿಳೆಯ ರಕ್ತದ ಕಲೆಗಳು ಕಂಡು ಬಂದಿವೆ ಎನ್ನಲಾಗಿದೆ. ತಾಯಿಯನ್ನು ಕೊಂದ ಬಳಿಕ ಬಾಲಕಿ ಹಾಗೂ ಆಕೆಯ ಪ್ರಿಯತಮ ಓಡಿ ಹೋಗಿದ್ದು, ಖಾಕಿ ಪಡೆಯ ಖೆಡ್ಡಾಗೆ ಬಿದ್ದಿದ್ದು, ಇಬ್ಬರೂ ಸೇರಿ ಮಹಿಳೆಯನ್ನು ತರಕಾರಿ ಕೊಚ್ಚುವ ಚಾಕುವಿನಿಂದ ಇರಿದು, ನಂತರ ಕತ್ತು ಹಿಸುಕಿ ಸಾಯಿಸಿದ್ದಾರೆ ಎನ್ನಲಾಗಿದೆ.

ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಈ ಘಟನೆ ಭಾನುವಾರ ಪೊಲೀಸರಿಗೆ ತಿಳಿದು ಬಂದಿದ್ದು, ಸದ್ಯ ಪೊಲೀಸರು ಬಾಲಕಿಯ ಜೊತೆಗೆ ಆಕೆಯ 25 ವರ್ಷದ ಪ್ರಿಯಕರನನ್ನು ಕೂಡ ಬಂಧಿಸಿದ್ದು, ಸದ್ಯ ತನಿಖೆ

You may also like

Leave a Comment