Home » ಕಿಚ್ಚನ ಹಳ್ಳಿಮನೆ ಹೋಟೆಲ್ ಮ್ಯಾನೆಜರ್ ಸಾವು ! ಕಾರಣ ಕೇಳಿದ ಜನ ಕಂಗಾಲು

ಕಿಚ್ಚನ ಹಳ್ಳಿಮನೆ ಹೋಟೆಲ್ ಮ್ಯಾನೆಜರ್ ಸಾವು ! ಕಾರಣ ಕೇಳಿದ ಜನ ಕಂಗಾಲು

0 comments

ನಟ ಸುದೀಪ್ ಒಡೆತನದ ಕಿಚ್ಚನ ಹಳ್ಳಿಮನೆ ಹೋಟೆಲ್‌ನ ಮ್ಯಾನೇಜರ್ ಭಯಾನಕ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ.

ಗ್ಯಾಸ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಚಿತ್ರ ನಟ ಸುದೀಪ್ ಒಡೆತನದ ಕಿಚ್ಚನ ಹಳ್ಳಿಮನೆ ಹೋಟೆಲ್‌ನ ಮ್ಯಾನೇಜರ್ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಕುಣಿಗಲ್ ತಾಲೂಕಿನ ಎಡೆಯೂರು ಹೋಬಳಿಯ ಆಲಪ್ಪನಗುಡ್ಡೆ ಸಮೀಪ ಬುಧವಾರ ರಾತ್ರಿ ಅಪಘಾತ ಸಂಭವಿಸಿದೆ.

ಕುಣಿಗಲ್ ಕಡೆಯಿಂದ ಕಿಚ್ಚನ ಹಳ್ಳಿಮನೆ ಕಡೆಗೆ ಬೈಕ್ ನಲ್ಲಿ ಹೊಗುತ್ತಿದ್ದಾಗ ಎಡೆಯೂರು ಕಡೆಯಿಂದ ಕುಣಿಗಲ್ ಕಡೆಗೆ ಬರುತ್ತಿದ್ದ ಗ್ಯಾಸ್ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಬೈಕ್ ಸವಾರ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ , ಘಟನಾ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಎಡೆಯೂರಿಗೆ ಹೋಗುವ ಮಾರ್ಗದಲ್ಲಿ ಕಿಚ್ಚನ ಹಳ್ಳಿ ಮನೆ ಹೋಟೆಲ್‌ ಇದೆ. ಈ ಮಾರ್ಗದಲ್ಲಿ ಸಂಚಾರಿಸುವ ಪ್ರತಿಯೊಬ್ಬ ಸಿನಿ ಅಭಿಮಾನಿ ಇಲ್ಲಿ ನಿಲ್ಲಿಸಿ ಕಾಫಿ, ಟೀ ಭೋಜನೆ ಮಾಡಿ ಪ್ರಯಾಣ ಮುಂದುವರೆಸುತ್ತಾರೆ. 

You may also like

Leave a Comment