Home » ಮೊಟ್ಟೆಗೆ ಮತ್ತೆ ಹೆಚ್ಚಿದ ಬೇಡಿಕೆ

ಮೊಟ್ಟೆಗೆ ಮತ್ತೆ ಹೆಚ್ಚಿದ ಬೇಡಿಕೆ

0 comments

ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಬ್ರಾಂಡೆಡ್ ಮೊಟ್ಟೆಗಳಿಗೆ ದಿಢೀರ್ ಬೇಡಿಕೆ ಕುಸಿದಿತ್ತು. ಈಗ ಆ ಸುದ್ದಿ ಸುಳ್ಳು ಎಂದು ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್ ಎಸ್‌ಎಐ) ದೃಢಪಡಿಸಿದ ನಂತರ ಎಲ್ಲಾ ಬಗೆಯ ಮೊಟ್ಟೆಗಳಿಗೆ ಬೇಡಿಕೆ ಬಂದಿದೆ. ಜತೆಗೆ ಚಳಿ ಹಿನ್ನೆಲೆಯಲ್ಲಿ ಮೊಟ್ಟೆಗಳ ಬಳಕೆ ಹೆಚ್ಚಾಗಿದ್ದು, ಬೆಲೆ ಕೂಡ ಹೆಚ್ಚಾಗಿದೆ.

ಸದ್ಯ ಸಗಟು ದರದಲ್ಲಿ ಒಂದು ಮೊಟ್ಟೆಗೆ 6.95 ರೂ. ಇದ್ದರೆ, ಚಿಲ್ಲರೆ ದರದಲ್ಲಿ8 ರೂ. ಇದೆ. ನಾಟಿ ಮೊಟ್ಟೆ 15 ರೂ.ನಂತೆ ಮಾರಾಟವಾಗುತ್ತಿದೆ.

ಚಳಿಗಾಲದಲ್ಲಿ ಮೊಟ್ಟೆ ಇಳುವರಿ ಪ್ರಮಾಣ ಕಡಿಮೆಯಾಗಿದ್ದು, ಬಳಕೆ ಹೆಚ್ಚಾಗಿದೆ,” ಎಂದು ರಾಷ್ಟ್ರೀಯಮೊಟ್ಟೆ ಸಮನ್ವಯ ಸಮಿತಿ (ಎನ್ ಇಸಿಸಿ) ಮಾರುಕಟ್ಟೆ ಅಭಿವೃದ್ಧಿ ಅಧಿ ಕಾರಿಯೊಬ್ಬರು ತಿಳಿಸಿದರು.

‘ಕೋಳಿ ಸಾಕಣೆ, ಮೊಟ್ಟೆ ಉತ್ಪಾದನೆಯ ಎಲ್ಲ ಹಂತದಲ್ಲಿ ನೈಟ್ರೋ ಪ್ಯೂರಾನ್ ಬಳಕೆ ನಿಷೇಧ. ಗ್ರಾಹಕರು ಯಾವುದೇ ಆತಂಕಪಡದೆ ನಿರಾತಂಕವಾಗಿ ಮೊಟ್ಟೆ ತಿನ್ನಬಹುದು,” ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‌ಇಸಿಸಿ) ಎನ್ನುತ್ತಾರೆ ಬೆಂಗಳೂರು ವಲಯದ ಅಧ್ಯಕ್ಷ ಟಿ. ವೆಂಕಟೇಶ್ವರಲು ಹೇಳಿದ್ದಾರೆ.

“ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂದರ್ಭದಲ್ಲಿ ಕೇಕ್ ತಯಾರಿಸಲು ಮೊಟ್ಟೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಮಾರುಕಟ್ಟೆಯ ಬೇಡಿಕೆಗೆ ಪೂರೈಕೆಯಾಗದ ತಕ್ಕಂತೆ ಮೊಟ್ಟೆ ಕಾರಣ ದರ ಹೆಚ್ಚಾಗಿದೆ,” ಎಂದಿದ್ದಾರೆ.

You may also like