Home » Dhoom Bikes : ನಿಮಗಿದು ಗೊತ್ತೇ? ಧೂಮ್‌ ಚಿತ್ರದಲ್ಲಿ ಬಳಸಿದ ಬೈಕ್‌ಗಳ ಬೆಲೆ ಎಷ್ಟೆಂದು?

Dhoom Bikes : ನಿಮಗಿದು ಗೊತ್ತೇ? ಧೂಮ್‌ ಚಿತ್ರದಲ್ಲಿ ಬಳಸಿದ ಬೈಕ್‌ಗಳ ಬೆಲೆ ಎಷ್ಟೆಂದು?

0 comments
dhoom film

Dhoom Bikes : 2004ರಲ್ಲಿ ಬಾಲಿವುಡ್​ (Bollywood)ನಲ್ಲಿ ತೆರೆಕಂಡ ಸೂಪರ್‌ಹಿಟ್ ಸಿನಿಮಾ ಧೂಮ್ (Dhoom). ಸೂಪರ್ ಹಿಟ್ ಅಂದ ಮೇಲೆ ಈ ಸಿನಿಮಾ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟವಾಗಿರತ್ತೆ. ಧೂಮ್ ಸಿನಿಮಾದಲ್ಲಿ ಬೈಕ್ (Dhoom Bikes) ಗೆ ಪ್ರಾಮುಖ್ಯತೆ ಹೆಚ್ಚಿತ್ತು. ಭಾರತದಲ್ಲಿ ಬೈಕ್‌ಗಳಲ್ಲಿ ತಯಾರಾದ ಮೊದಲ ಬ್ಲಾಕ್‌ಬಸ್ಟರ್ ಚಿತ್ರವಾಗಿತ್ತು. ಸದ್ಯ ಸಿನಿಮಾದಲ್ಲಿ ಬಳಸಿದ ಬೈಕ್ ಬೆಲೆ ಕೇಳಿದ್ರೆ ನೀವು ಶಾಕ್ ಆಗೋದು ಖಂಡಿತ!!

ಧೂಮ್ ಚಿತ್ರ ಭಾರೀ ಸದ್ದು ಮಾಡಿದ ಸಿನಿಮಾ, ಯುವಕರಲ್ಲಿ ಬೈಕ್ ಕ್ರೇಜ್ ಹುಟ್ಟಿಸಿದ ಸಿನಿಮಾ ಎಂದೇ ಹೇಳಬಹುದು. ಧೂಮ್ ಚಿತ್ರದಲ್ಲಿ ಸುಜುಕಿ ಹಯಾಬುಸಾ (Suzuki Hayabusa) (1300 ಸಿಸಿ), ಸುಜುಕಿ ಜಿಎಸ್‌ಎಕ್ಸ್-ಆರ್ (Suzuki GSX-R)(600 ಸಿಸಿ) ಮತ್ತು ಸುಜುಕಿ ಬ್ಯಾಂಡಿಟ್ (Suzuki Bandit)(1200 ಸಿಸಿ) ನಂತಹ ಸೂಪರ್‌ ಬೈಕ್‌ಗಳನ್ನು ಬಳಸಲಾಗಿತ್ತು. ಅಂದಿನ ದಿನದಲ್ಲಿ ಈ ಬೈಕ್ ಗಳು ವಿಶ್ವದ ಅತ್ಯಂತ ವೇಗದ ಮೋಟಾರ್‌ಸೈಕಲ್‌ಗಳಲ್ಲಿ ಒಂದು ಎಂದೆನಿಸಿದ್ದವು.

ಸುಜುಕಿ ಹಯಬುಸಾ ಬೈಕ್ (Suzuki Hayabusa): ಚಿತ್ರದ ಬಿಡುಗಡೆ ಆದ ಬಳಿಕ, ಅದರಲ್ಲಿ ಬಳಸಿದ ಹಯಬುಸಾ ಬೈಕ್ ದೇಶದಲ್ಲಿ ಅತ್ಯಂತ ಜನಪ್ರಿಯ ಬೈಕ್ ಎನಿಸಿಕೊಂಡಿದೆ. ಈ ಬೈಕ್ NOS (ನೈಟ್ರಸ್ ಆಕ್ಸೈಡ್ ಸಿಸ್ಟಮ್) ಸೆಟಪ್ ಅನ್ನು ಹೊಂದಿತ್ತು. ಇದೀಗ ಈ ಹಯಬುಸಾ ಬೈಕ್ ಎಕ್ಸ್ ಶೋ ರೂಂ ಬೆಲೆ 16 ಲಕ್ಷ ರೂ. ಆಗಿದೆ.

ಸುಜುಕಿ ಜಿಎಸ್‌ಎಕ್ಸ್ ಆರ್-600 (Suzuki GSX-R) : ಚಿತ್ರದಲ್ಲಿ ಬಳಸಿದ ಸುಜುಕಿ GSX-R 600 ಬೈಕ್‌ 599CC 4-ಸ್ಟ್ರೋಕ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದೀಗ ಕಂಪನಿಯು ಈ ಬೈಕ್‌ನ ಹೊಸ ಮಾದರಿಯನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ. ಇದರ ಬೆಲೆ 15 ಲಕ್ಷಕ್ಕಿಂತ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.

ಸುಜುಕಿ ಬ್ಯಾಂಡಿಟ್ (Suzuki Bandit): ಇನ್ನು ಸುಜುಕಿ ಬ್ಯಾಂಡಿಟ್ ಬೈಕ್ 1,255cc 4-ಸ್ಟ್ರೋಕ್ ಫೋರ್ ಸಿಲಿಂಡರ್ ಮತ್ತು ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದ್ದು, ಈ ಬೈಕ್ ಬೆಲೆ 11 ಲಕ್ಷ ರೂ. ಎನ್ನಲಾಗಿದೆ.

ಸುಜುಕಿ ಜಿಎಸ್ ಎಕ್ಸ್ ಆರ್ 1000ಸಿಸಿ : ಈ ಬೈಕ್ 999 ಸಿಸಿ ಎಂಜಿನ್ ಹೊಂದಿದ್ದು, 199.23 ಪಿಎಸ್ ಪವರ್ ಉತ್ಪಾದಿಸುತ್ತದೆ. ಇದೀಗ ಈ ಬೈಕ್ ಎಕ್ಸ್ ಶೋ ರೂಂ ಬೆಲೆ 16 ಲಕ್ಷ ರೂ. ಆಗಿದೆ.

You may also like

Leave a Comment