Gold Invest: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಆದರೆ ಚಿನ್ನದ ದರ ಎಷ್ಟೇ ಏರಿಕೆ ಕಂಡರೂ ಕೂಡ ಅದನ್ನು ಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಇದರ ನಡುವೆ ಭವಿಷ್ಯದಲ್ಲಿ ಚಿನ್ನದ ದರ ಏನಾಗಬಹುದು ಎಂಬ ಚರ್ಚೆಗಳು ಕೂಡ ಹುಟ್ಟಿಕೊಂಡಿವೆ. ಹಾಗಾದರೆ ನೀವು ಇಂದು ಚಿನ್ನದ ಮೇಲೆ 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 2030ರ ವೇಳೆಗೆ ಅದು ಎಷ್ಟಾಗಬಹುದು ಗೊತ್ತೇ?
ನವೆಂಬರ್ 25, 2025 ರ ಪ್ರಕಾರ, ಚಿನ್ನದ ಬೆಲೆ ಕಳೆದ ಕೆಲವು ದಿನಗಳಿಂದ ಏರಿಳಿತವನ್ನು ತೋರಿಸುತ್ತಿದೆ. 2000 ರಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನವು 4,400 ರೂ.ಗೆ ಮಾರಾಟವಾಗುತ್ತಿತ್ತು, ಆದರೆ 2025 ರ ವೇಳೆಗೆ ಇದು 1.25 ಲಕ್ಷ ರೂ. ತಲುಪಿದೆ. ಕಳೆದ 25 ವರ್ಷಗಳಲ್ಲಿ ಚಿನ್ನದ ಬೆಲೆ ಸರಾಸರಿ ವಾರ್ಷಿಕ 25-35% ಏರಿಕೆಯಾಗಿದೆ. ಈ ಏರಿಕೆ ಜಾಗತಿಕ ಮಾರುಕಟ್ಟೆ ಪರಿಸ್ಥಿತಿ, ಹೆಚ್ಚುತ್ತಿರುವ ಹಣದುಬ್ಬರ, ಮತ್ತು ಹೂಡಿಕೆದಾರರ ಬೇಡಿಕೆಯಿಂದ ಉಂಟಾಗಿದೆ.
ಇಂದಿನ ಬೆಲೆ ಪ್ರಕಾರ, 5 ಲಕ್ಷ ರೂಪಾಯಿಗಳನ್ನು ಚಿನ್ನದಲ್ಲಿ ಹೂಡಿಕೆ ಮಾಡಿದರೆ 2030 ರ ವೇಳೆಗೆ ಇದರ ಮೌಲ್ಯ ಸುಮಾರು 2.5 ಲಕ್ಷ ರೂ. ತಲುಪಬಹುದು. ಕೆಲವು ವರದಿಗಳ ಪ್ರಕಾರ, 10 ಗ್ರಾಂ ಚಿನ್ನದ ಬೆಲೆ 7 ಲಕ್ಷದಿಂದ 7.5 ಲಕ್ಷ ರೂ.ವರೆಗೆ ಏರಬಹುದು. ಹೀಗಾಗಿ, ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡುವ ಮೂಲಕ ದೀರ್ಘಾವಧಿಯಲ್ಲಿ ಉತ್ತಮ ಲಾಭ ಪಡೆಯಲು ಸಾಧ್ಯ.
