Palm Oil Price: 2022/23ರಲ್ಲಿ ತೈಲ ಎಣ್ಣೆಗಳ ಬಳಕೆಯಲ್ಲಿನ (Palm Oil Price)ಹೆಚ್ಚಳ ಹಾಗೂ ದರಗಳು ಇಳಿಕೆ ಕಂಡ ಪರಿಣಾಮ ದಾಖಲೆ ಪ್ರಮಾಣದ ತಾಳೆ ಎಣ್ಣೆ(Palm Oil)ಮತ್ತು ಸೂರ್ಯಕಾಂತಿ ಎಣ್ಣೆಯನ್ನು(Sunflower Oil)ಭಾರತ ಆಮದು ಮಾಡಿಕೊಂಡಿದೆ. ಎರಡೂ ಖಾದ್ಯ ತೈಲಗಳ ಆಮದು(Oil Import Rate)ಕ್ರಮವಾಗಿ ಶೇ. 24 ಮತ್ತು ಶೇ. 54ರಷ್ಟು ಹೆಚ್ಚಳವಾಗಿದೆ.
ಖಾದ್ಯ ತೈಲಗಳ ವಿಶ್ವದ ಅತಿದೊಡ್ಡ ಆಮದುದಾರ ದೇಶವಾಗಿರುವ ಭಾರತ(India)ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಖರೀದಿಸುತ್ತಿರುವ ಹಿನ್ನೆಲೆ ಇಂಡೋನೇಷ್ಯಾ(Indonesia)ಮತ್ತು ಮಲೇಷ್ಯಾದಲ್ಲಿ ತಾಳೆ ಎಣ್ಣೆಯ ದಾಸ್ತಾನು ಇಳಿಕೆ ಕಂಡಿದೆಯಂತೆ. ಈ ಖರೀದಿಯಿಂದ ಸೂರ್ಯಕಾಂತಿ ಎಣ್ಣೆಯನ್ನು ಉತ್ಪಾದಿಸುವ ಕಪ್ಪು ಸಮುದ್ರದ ದೇಶಗಳಲ್ಲಿ ದಾಸ್ತಾನುಗಳನ್ನು ಕಡಿಮೆಯಾಗುವ ಸಾಧ್ಯತೆ ಕುರಿತು ತಜ್ಞರು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 31ಕ್ಕೆ ಅಂತ್ಯಗೊಂಡ 2022/23 ಮಾರುಕಟ್ಟೆ ವರ್ಷದಲ್ಲಿ ತಾಳೆ ಎಣ್ಣೆ (Palm Oil)ಆಮದು 97.9 ಲಕ್ಷ ಮೆಟ್ರಿಕ್ ಟನ್ ಆಗಿದ್ದು, ಸೂರ್ಯಕಾಂತಿ ಎಣ್ಣೆ ಆಮದು 30 ಲಕ್ಷ ಟನ್ ನಷ್ಟು ಹೆಚ್ಚಳ ಕಂಡಿದೆ ಎಂದು ಮುಂಬೈ ಮೂಲದ ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (SIA) ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಈ ನಡುವೆ, ಸೋಯಾಬಿನ್ ಎಣ್ಣೆಯ ಆಮದು ಶೇ. 12ರಷ್ಟು ಕುಸಿದು 36.8 ಲಕ್ಷ ಟನ್‌ಗಳಿಗೆ ಕುಸಿತ ಕಂಡಿದೆ. ಹೆಚ್ಚಿನ ಅವಧಿಯಲ್ಲಿ ತಾಳೆ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಗೆ ಹೋಲಿಕೆ ಮಾಡಿದ್ದಲ್ಲಿ ಸೋಯಾಬಿನ್ ಎಣ್ಣೆ ದರ ಹೆಚ್ಚಿಮ ಪ್ರಮಾಣದಲ್ಲಿದ್ದ ಹಿನ್ನೆಲೆ ಬೆಲೆ ಇಳಿಕೆಗೆ ಕಾರಣ ಎನ್ನಲಾಗಿದೆ.
