Home » 75 ವರ್ಷದ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ!

75 ವರ್ಷದ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ!

0 comments

ಸರ್ಕಾರ ಜನರ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರ ಇದೀಗ ಹಿರಿಯ ನಾಗರಿಕರಿಗೆ ಮಹತ್ವದ ಮಾಹಿತಿ ನೀಡಿದ್ದು, ಸಿಹಿ ಸುದ್ದಿಯೊಂದು ನೀಡಿದೆ. ಕೇಂದ್ರದ ಭರವಸೆಯನ್ನು ಈಡೇರಿಸಿರುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವಾಲಯ 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಆದಾಯ ತೆರಿಗೆ ಸಲ್ಲಿಸುವ ಅಗತ್ಯ ಇಲ್ಲವೆಂದು ಮಾಹಿತಿ ನೀಡಿದೆ.

ಸದ್ಯ ಉದ್ಯೋಗಸ್ಥರು ಆದಾಯ ತೆರಿಗೆ ಸ್ಲ್ಯಾಬ್‍ನಲ್ಲಿ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ ಇದಕ್ಕೂ ಮೊದಲೇ ಹಿರಿಯ ನಾಗರಿಕರ ಪಾಲಿಗೆ ಸಿಹಿಸುದ್ದಿ ಹೊರ ಬಿದ್ದಿದೆ. ಫೆಬ್ರವರಿ 1 ರಂದು ವರ್ಷ 2023ರ ಸಾಮಾನ್ಯ ಬಜೆಟ್ ಮಂಡಿಸಲಿದ್ದು, ನಿರ್ಮಲಾ ಸೀತಾರಾಮನ್ ಹಲವು ರಿಯಾಯಿತಿ ಜೊತೆಗೆ ಹಲವು ಉತ್ಪನ್ನಗಳ ಮೇಲೆ ವಿಧಿಸಿರುವ ದುಬಾರಿ ಜಿಎಸ್‍ಟಿ ಕಡಿತ ಮಾಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.

2023ರ ಬಜೆಟ್‍ಗೂ ಮುನ್ನ ಆದಾಯ ತೆರಿಗೆಯಲ್ಲಿನ ಪರಿಹಾರದ ಕುರಿತಂತೆ ಚರ್ಚೆಗಳು ನಡೆಯುತ್ತಿದ್ದು ಈ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಿರಿಯ ನಾಗರೀಕರಿಗೆ ಸಿಹಿ ಸುದ್ದಿ ನೀಡಿದ್ದಾರೆ. ತಮ್ಮ ಆದಾಯದ ಮೂಲವಾಗಿ ಪಿಂಚಣಿ ಮತ್ತು ಬ್ಯಾಂಕ್ ಬಡ್ಡಿಯನ್ನು ಮಾತ್ರ ಹೊಂದಿರುವವರು ಇದಕ್ಕೆ ಅರ್ಹರಾಗಿದ್ದಾರೆ. ಜೀವನ ನಿರ್ವಹಣೆಗೆ ಅವಲಂಬಿತರಾಗಿರುವುದನ್ನು ಅರಿತು ಹೊಸ ನಿರ್ಣಯ ಕೈಗೊಳ್ಳಲಾಗಿದೆ.

You may also like

Leave a Comment