Home » Google Pay: ಹೊಸ ಕ್ರೆಡಿಟ್‌ ಕಾರ್ಡ್‌ ಲಾಂಚ್‌ ಮಾಡಿದ ‘ಗೂಗಲ್ ಪೇ’!!

Google Pay: ಹೊಸ ಕ್ರೆಡಿಟ್‌ ಕಾರ್ಡ್‌ ಲಾಂಚ್‌ ಮಾಡಿದ ‘ಗೂಗಲ್ ಪೇ’!!

0 comments

Google Pay: ಆಕ್ಸಿಸ್ ಬ್ಯಾಂಕಿನ ಸಹಯೋಗದೊಂದಿಗೆ ರುಪೇ ನೆಟ್‌ವರ್ಕ್‌ನಲ್ಲಿ ಗೂಗಲ್ ಪೇ ಈ ಸಹ-ಬ್ರಾಂಡೆಡ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ.

ಹೌದು, ಜಾಗತಿಕ ಡಿಜಿಟಲ್‌ ಪೇಮೆಂಟ್‌ ಪ್ಲಾಟ್‌ಫಾರ್ಮ್‌ ಗೂಗಲ್ ಪೇ ಮತ್ತು ಭಾರತೀಯ ಹಣಕಾಸು ಸಂಸ್ಥೆ ಆಕ್ಸಿಸ್ ಬ್ಯಾಂಕ್ ಸಹಭಾಗಿತ್ವದಲ್ಲಿ ಇದೀಗ ಹೊಸ “ಗೂಗಲ್ ಪೇ ಫ್ಲೆಕ್ಸ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್” (Google Pay Flex Axis Bank Credit Card) ಲಾಂಚ್‌ ಆಗಿದೆ.

ಈ ಹೊಸ ಗೂಗಲ್ ಪೇ ಫ್ಲೆಕ್ಸ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್, ಆಕ್ಸಿಸ್ ಬ್ಯಾಂಕ್‌ನ ಸಹಯೋಗದೊಂದಿಗೆ Rupee ಪೇಮೆಂಟ್‌ ನೆಟ್‌ವರ್ಕ್‌ನಲ್ಲಿ ಕೆಲಸ ಮಾಡುತ್ತದೆ. ಇದು ಗ್ರಾಹಕರಿಗೆ ತಮ್ಮ ದೈನಂದಿನ ಯುಪಿಐ ಪಾವತಿಗಳೊಂದಿಗೆ ಕ್ರೆಡಿಟ್ ಕಾರ್ಡ್‌ ಬಳಸಲು ಸುಲಭವಾಗಲಿದೆ. ಕಂಪನಿಗಳು ತಮ್ಮ ಅಧಿಕೃತ ಪ್ರಕಟಣೆಯಲ್ಲಿ, “ರೂಪಿ ನೆಟ್‌ವರ್ಕ್‌ನಲ್ಲಿ ನಿರ್ಮಿಸಲಾಗಿರುವ ಈ ಕಾರ್ಡ್, ಗೂಗಲ್ ಪೇನ ಅನುಕೂಲಕರ, ಸುರಕ್ಷಿತ ಅನುಭವ ಮತ್ತು ಆಕ್ಸಿಸ್ ಬ್ಯಾಂಕ್‌ನ ವಿಶ್ವಾಸಾರ್ಹ ಬ್ಯಾಂಕಿಂಗ್ ಸೌಲಭ್ಯದೊಂದಿಗೆ, ದೈನಂದಿನ ಯುಪಿಐ ಬಳಕೆಯಂತೆಯೇ ಈ ಕ್ರೆಡಿಟ್‌ ಕಾರ್ಡ್‌ ಅನ್ನು ವಿಸ್ತರಿಸಲಿದೆ” ಎಂದು ತಿಳಿಸಿದೆ.

You may also like