ವ್ಯಾಪಾರದ ಒಟ್ಟು ವಹಿವಾಟು ನಿಗದಿತ ಮಿತಿಯನ್ನು ಮೀರಿದಾಗ GST ಅನ್ವಯ ವಾಗುತ್ತದೆ. ಯಾವುದೇ ವ್ಯವಹಾರಕ್ಕೆ GST ನೋಂದಣಿ ಅಗತ್ಯವಿದೆ. GST ಅಡಿಯಲ್ಲಿ ನೋಂದಣಿ ಇಲ್ಲದೆ ಯಾವುದೇ ವ್ಯಾಪಾರ ಘಟಕದಲ್ಲಿ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಿಲ್ಲ.
ನೀವು ಕೂಡ ವ್ಯಾಪಾರ (Business) ನಡೆಸುತ್ತಿದ್ದು, ಜಿಎಸ್‌ಟಿ (GST) ಗೆ ಯಾವಾಗ ನೋಂದಾಯಿಸಿಕೊಳ್ಳಬೇಕು ಎಂಬ ಪ್ರಶ್ನೆ ಗೊಂದಲ ಸಹಜವಾಗಿ ಮೂಡುತ್ತದೆ. ಉದ್ಯಮಿಗಳಿಗೆ GST ಯಾವಾಗ ಮಾಡಿಸಬೇಕು ಎಂಬ ಪ್ರಶ್ನೆ ಕಾಡದಿರದು.
GST ಭಾರತದಲ್ಲಿ ಸರಕು ಮತ್ತು ಸೇವೆಗಳ ಪೂರೈಕೆಯ ಮೇಲೆ ವಿಧಿಸುವ ತೆರಿಗೆಯಾಗಿದೆ. ಜಿಎಸ್‌ಟಿ ಪರೋಕ್ಷ ತೆರಿಗೆ. ವ್ಯಾಟ್ (Vats) , ಸೇವಾ ತೆರಿಗೆ (Service tax) , ಖರೀದಿ ತೆರಿಗೆ (Purchase Tax) , ಅಬಕಾರಿ ಸುಂಕ (Excise Duty) ದಂತಹ ಹಲವಾರು ಹಿಂದಿನ ತೆರಿಗೆಗಳನ್ನು ಬದಲಿಸಲು ಇದನ್ನು 2017 ರಲ್ಲಿ ಜಾರಿಗೆ ತರಲಾಗಿದೆ.
ನೀವು ಉದ್ಯಮಿಗಳಾಗಿದ್ದು, GST ರಿಜಿಸ್ಟ್ರೇಷನ್ ನೋಂದಣಿ ಇನ್ನೂ ಮಾಡಿಲ್ಲ ಎಂದು ಚಿಂತಿಸುತ್ತಿದ್ದೀರಾ??? ಉದ್ಯಮಿಗಳು ಯಾವಾಗ, ಹೇಗೆ ಜಿಎಸ್‌ಟಿ ನೋಂದಣಿ ಮಾಡಬೇಕು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಜಿಎಸ್‌ಟಿ ನೋಂದಣಿ ಮಿತಿ (GST Registration Limit) ಈ ಹಿಂದೆ 20 ಲಕ್ಷ ರೂಪಾಯಿಯಾಗಿತ್ತು. ಆದ್ರೆ, ಈಗ ಅದನ್ನು 40 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಈಗ 40 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ಹೊಂದಿರುವ ಎಲ್ಲಾ ವ್ಯವಹಾರಗಳು ಜಿಎಸ್‌ಟಿಗೆ ನೋಂದಾಯಿಸಿಕೊಳ್ಳಬೇಕಾಗಿದೆ.
GST ಎಲ್ಲಾ ತಯಾರಕರು, ವ್ಯಾಪಾರಿಗಳು ಮತ್ತು ಸೇವಾ ಪೂರೈಕೆದಾರರಿಗೆ ಅನ್ವಯವಾಗುತ್ತದೆ. ವ್ಯಾಪಾರ ನಡೆಸುವಾಗ ಒಟ್ಟು ವಹಿವಾಟು ನಿಗದಿತ ಮಿತಿಯನ್ನು ಮೀರಿದಾಗ GST ಅನ್ವಯ ವಾಗುತ್ತದೆ. ಯಾವುದೇ ವ್ಯವಹಾರವಾದರು ಕೂಡ GST ನೋಂದಣಿ ಅಗತ್ಯವಿದೆ. GST ಅಡಿಯಲ್ಲಿ ನೋಂದಣಿ ಇಲ್ಲದೆ ಯಾವುದೇ ವ್ಯಾಪಾರ ಘಟಕವು ವ್ಯಾಪಾರ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಆತನ ವಿರುದ್ಧ ಕಠಿಣ ಕ್ರಮ ವಿಧಿಸುವ ಅವಕಾಶ ಕಲ್ಪಿಸಲಾಗಿದೆ.
ಜಿಎಸ್‌ಟಿಗೆ ಯಾವಾಗ ನೋಂದಾಯಿಸಿಕೊಳ್ಳಬೇಕು?
GST 2017 ರ ಅಡಿಯಲ್ಲಿ ನೋಂದಾಯಿಸಲು, ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಈಶಾನ್ಯ ರಾಜ್ಯಗಳಿಗೆ ವಹಿವಾಟು 10 ಲಕ್ಷ ರೂ. ಹೆಚ್ಚಿನ ರಾಜ್ಯಗಳಲ್ಲಿ, 20 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ಹೊಂದಿರುವ ರೆಸ್ಟೋರೆಂಟ್‌ಗಳು ಜಿಎಸ್‌ಟಿಗೆ ನೋಂದಾಯಿಸಿಕೊಳ್ಳಬೇಕಾಗಿದೆ. ವಿಶೇಷ ವರ್ಗದ ರಾಜ್ಯದಲ್ಲಿ, ರೆಸ್ಟೋರೆಂಟ್ ತನ್ನ ವಾರ್ಷಿಕ ಒಟ್ಟು ಆದಾಯವು ರೂ 10 ಲಕ್ಷವನ್ನು ಮೀರಿದರೆ ಜಿಎಸ್‌ಟಿಗೆ ನೋಂದಾಯಿಸಿಕೊಳ್ಳಬೇಕಾಗುತ್ತದೆ.
ಜಿಎಸ್‌ಟಿ ನೋಂದಣಿ ಮಾಡಲು ಹಲವಾರು ವಿಧಾನಗಳಿವೆ. GST ನೋಂದಣಿಯ ವಿಶೇಷ ವರ್ಗದ ಅಡಿಯಲ್ಲಿ ಬರುವ ಸಾಮಾನ್ಯ ತೆರಿಗೆದಾರ. ಭಾರತದಲ್ಲಿ ವ್ಯಾಪಾರ ಮಾಡುವ ತೆರಿಗೆದಾರರಿಗೆ ಇದು ಅನ್ವಯ ವಾಗುತ್ತದೆ. ಸಂಯೋಜನೆ ತೆರಿಗೆದಾರರು ಎರಡನೇ ವರ್ಗಕ್ಕೆ ಸೇರುತ್ತಾರೆ. ಸಂಯೋಜನೆ ತೆರಿಗೆದಾರರಾಗಿ ನೋಂದಾಯಿಸಲು, ನೀವು GST ಸಂಯೋಜನೆಯ ಯೋಜನೆಯ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಇದರ ಜೊತೆಗೆ ಸಾಂದರ್ಭಿಕ ತೆರಿಗೆ ವಿಧಿಸಬಹುದಾದ ವ್ಯಕ್ತಿ ಮತ್ತು ನಿವಾಸಿ ತೆರಿಗೆ ವಿಧಿಸಬಹುದಾದ ವ್ಯಕ್ತಿಯ ವರ್ಗ ಕೂಡ ಇದೆ.
GST ನೋಂದಾವಣಿ ಮಾಡಲು ಅಗತ್ಯವಿರುವ ದಾಖಲೆಗಳು:
ಜಿಎಸ್‌ಟಿ ನೋಂದಣಿಗಾಗಿ ನಿಮಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಗಾತ್ರದ ಫೋಟೋ, ಪ್ರವರ್ತಕರ ವಿಳಾಸ ಮತ್ತು ಐಡಿ ಪುರಾವೆ, ಬ್ಯಾಂಕ್ ವಿವರಗಳು, ಪಾಸ್‌ಬುಕ್, ರದ್ದಾದ ಚೆಕ್, ವ್ಯಾಪಾರ ಆಧಾರ್ ವಿಳಾಸ, ನೋಂದಣಿ ಪ್ರಮಾಣಪತ್ರ, ಡಿಜಿಟಲ್ ಸಹಿ ಮತ್ತು ಅಧಿಕೃತ ಸಹಿಯ ಅಧಿಕೃತ ಪತ್ರ ಬೇಕಾಗುತ್ತದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
GST ನೋಂದಣಿಗಾಗಿ ಅಧಿಕೃತ GST ಪೋರ್ಟಲ್ (gst.gov.in) ಗೆ ಭೇಟಿ ನೀಡಬೇಕು. ಬಳಿಕ, ತೆರಿಗೆ ಪಾವತಿದಾರರ ಟ್ಯಾಬ್ ಅಡಿಯಲ್ಲಿ ‘ರಿಜಿಸ್ಟರ್’ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ, ಹೊಸ ನೋಂದಣಿ ಆಯ್ಕೆಯನ್ನು ಆರಿಸಿಕೊಂಡ ಬಳಿಕ, ವ್ಯಾಪಾರದ ಹೆಸರು, ಪ್ಯಾನ್, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯಂತಹ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಬೇಕು.
ಈ ಬಳಿಕ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಮುಂದುವರಿಯಬೇಕು. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಬೇಕು. ಈಗ ಪುಟವು ನಿಮಗೆ ತಾತ್ಕಾಲಿಕ ಉಲ್ಲೇಖ ಸಂಖ್ಯೆ (TRN) ತೋರಿಸುತ್ತದೆ. ಮತ್ತೆ GST ಸೇವಾ ಪೋರ್ಟಲ್‌ಗೆ ಹೋಗಿ ಮತ್ತು ‘ತೆರಿಗೆದಾರ’ ಮೆನುವಿನಲ್ಲಿ ‘ರಿಜಿಸ್ಟರ್’ ಕ್ಲಿಕ್ ಮಾಡಬೇಕು. TRN ಅನ್ನು ಆಯ್ಕೆ ಮಾಡಿ TRN ಮತ್ತು ಕ್ಯಾಪ್ಚಾ ನಮೂದಿಸಿ. ‘ಮುಂದುವರಿಯಿರಿ’ ಮೇಲೆ ಕ್ಲಿಕ್ ಮಾಡಬೇಕು.
ಇದರ ಬಳಿಕ, ನೀವು ಮತ್ತೆ OTP ಅನ್ನು ಪಡೆಯುತ್ತೀರಿ. ಈ OTP ಅನ್ನು ನಮೂದಿಸಿ ಮತ್ತು ‘ಮುಂದುವರಿಯಿರಿ’ ಕ್ಲಿಕ್ ಮಾಡಬೇಕು. ಈಗ ನೀವು ನಿಮ್ಮ GST ನೋಂದಣಿ ಆನ್‌ಲೈನ್ ಅಪ್ಲಿಕೇಶನ್‌ನ ಸ್ಥಿತಿಯನ್ನು ನೋಡಬಹುದು. ಬಲಭಾಗದಲ್ಲಿ ನೀವು ‘ಸಂಪಾದಿಸು’ ಐಕಾನ್ ಅನ್ನು ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಬೇಕು. ಈಗ ವಿವರಗಳನ್ನು ಭರ್ತಿ ಮಾಡಿ ಮತ್ತು ಡಾಕ್ಯುಮೆಂಟ್‌ನ ಸ್ಕ್ಯಾನ್ ಮಾಡಿದ ಪ್ರತಿಯನ್ನು ಲಗತ್ತಿಸಬೇಕು. ಪರಿಶೀಲನೆ ಪುಟದ ಮೇಲೆ ಕ್ಲಿಕ್ ಮಾಡಿದ ನಂತರ ನೀವು ಘೋಷಣೆಯನ್ನು ಪರಿಶೀಲಿಸಬೇಕು.
ಈಗ ನಿಮ್ಮ ಡಿಜಿಟಲ್ ಸಹಿಯನ್ನು ಸೇರಿಸಿಕೊಂಡು ಅದರ ನಂತರ ನೀವು ಪರದೆಯ ಮೇಲೆ ನೋಂದಣಿ ಯಾದ ಸಂದೇಶವನ್ನು ಪಡೆಯಲಿದ್ದಿರಿ. ನಿಮಗೆ ಅಪ್ಲಿಕೇಶನ್ ಉಲ್ಲೇಖ ಸಂಖ್ಯೆ (ARN) ನೀಡಲಾಗುವುದು. ಈಗ ನೀವು ಪೋರ್ಟಲ್‌ನಲ್ಲಿ AIN ಸ್ಥಿತಿಯನ್ನು ಪರಿಶೀಲಿಸಬಹುದು.
