Gold Invest: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಆದರೆ ಚಿನ್ನದ ದರ ಎಷ್ಟೇ ಏರಿಕೆ ಕಂಡರೂ ಕೂಡ ಅದನ್ನು ಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಇದರ ನಡುವೆ ಭವಿಷ್ಯದಲ್ಲಿ ಚಿನ್ನದ ದರ ಏನಾಗಬಹುದು ಎಂಬ ಚರ್ಚೆಗಳು ಕೂಡ ಹುಟ್ಟಿಕೊಂಡಿವೆ.
2025ರಲ್ಲಿ ಚಿನ್ನದ ಬೆಲೆಯು ಸುಮಾರು 70 ಪ್ರತಿಶತದಷ್ಟು ಏರಿಕೆಯಾಗುವ ಮೂಲಕ ಷೇರು ಮಾರುಕಟ್ಟೆಯ ದೊಡ್ಡ ಕಂಪನಿಗಳನ್ನೇ ಮೀರಿಸಿದೆ. ಈಗ ಎಲ್ಲರ ಕಣ್ಣು 2026ರ ಮೇಲಿದ್ದು, ಈ ಏರಿಕೆ ಹೀಗೆಯೇ ಮುಂದುವರಿಯುತ್ತದೆಯೇ ಎಂಬ ಕುತೂಹಲ ಮೂಡಿದೆ. ಸೋ, 2026ರಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವಂತಹ ವಿಚಾರ ಚರ್ಚೆಯಾಗುತ್ತಿದೆ. ಹಾಗೇನಾದರೂ ನೀವು ಹೊಸ ವರ್ಷದಂದು ಚಿನ್ನದ ಮೇಲೆ ಮೂರು ಲಕ್ಷದಷ್ಟು ಇನ್ವೆಸ್ಟ್ ಮಾಡಿದರೆ ಅದರ ಮುಂದಿನ ವರ್ಷ ನಿಮಗೆ ಎಷ್ಟು ಲಾಭ ಸಿಗುತ್ತದೆ?
2025ರ ಅಸಾಧಾರಣ ಬೆಳವಣಿಗೆಯನ್ನು ಮತ್ತೆ ನಿರೀಕ್ಷಿಸುವುದು ಕಷ್ಟವಾದರೂ, 2026ರಲ್ಲಿ ಚಿನ್ನವು ಹೂಡಿಕೆದಾರರಿಗೆ ಶೇ. 12 ರಿಂದ 15 ರಷ್ಟು ಲಾಭ ನೀಡಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಒಬ್ಬ ಹೂಡಿಕೆದಾರ ಡಿಸೆಂಬರ್ 2025ರ ಅಂತ್ಯಕ್ಕೆ 3 ಲಕ್ಷ ರೂಪಾಯಿಗಳನ್ನು ಚಿನ್ನದಲ್ಲಿ ಹೂಡಿಕೆ ಮಾಡಿದರೆ, ಮುಂದಿನ ಒಂದು ವರ್ಷದಲ್ಲಿ ಅದು ಉತ್ತಮ ಲಾಭ ತಂದುಕೊಡಲಿದೆ. ಶೇ. 13 ರಿಂದ 15 ರಷ್ಟು ಲಾಭದ ಲೆಕ್ಕಾಚಾರದಂತೆ, ಡಿಸೆಂಬರ್ 2026ರ ವೇಳೆಗೆ ಆ 3 ಲಕ್ಷ ರೂಪಾಯಿ ಹೂಡಿಕೆಯು ಅಂದಾಜು 3.36 ಲಕ್ಷದಿಂದ 3.45 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಲಿದೆ. ಸುರಕ್ಷಿತ ಹೂಡಿಕೆಯ ದೃಷ್ಟಿಯಿಂದ ಇದು ಆಕರ್ಷಕ ಆಯ್ಕೆಯಾಗಿ ಉಳಿಯಲಿದೆ.
