ITR Return: ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ 2025ರ ಇನ್ನು ಕೇವಲ ಗಡುವು ಮೂರು ದಿನಗಳಲ್ಲಿ ಕೊನೆಗೊಳ್ಳುತ್ತದೆ. ಕೊನೆಯ ಕ್ಷಣದಲ್ಲಿ ಒಂದಶ್ಟು ವೇಗವಾದ ಟ್ಯಾಕ್ಸ್ ರಿಟರ್ನ್ ಪ್ರಕ್ರಿಯೆ ನಡೆಯುತ್ತಿದ್ದರೂ, ಇನ್ನೂ ಸುಮಾರು 2 ಕೋಟಿ ರಿಟರ್ನ್‌ಗಳನ್ನು ಸಲ್ಲಿಸಬೇಕಾಗಿದೆ. ಹಾಗಾಗಿ ಅಂತಿಮ ದಿನಾಂಕ ಮತ್ತೊಮ್ಮೆ ವಿಸ್ತರಣೆ ಆಗಬಹುದಾ ಅನ್ನುವ ಪ್ರಶ್ನೆ ಎದ್ದಿದೆ.
ನಾವು ಈ ಲೇಖನದಲ್ಲಿ ಐಟಿಆರ್ ಅಂತಿಮ ದಿನಾಂಕದ ಸುತ್ತಲಿನ ಎಲ್ಲಾ ಘಟನೆಗಳ ಬಗ್ಗೆ ಮತ್ತು ಕೊನೆಯ ದಿನಾಂಕದ ಮೊದಲು ನಿಮ್ಮ ರಿಟರ್ನ್‌ಗಳನ್ನು ಹೇಗೆ ಸಲ್ಲಿಸುವುದರ ಅಗತ್ಯದ ಬಗ್ಗೆ ವಿವರಗಳಲ್ಲಿ ಚರ್ಚಿಸಲಿದ್ದೇವೆ.
2025-26 ನೇ ಸಾಲಿನ ಐಟಿಆರ್ ಇನ್ನೂ ಸಲ್ಲಿಸದ ತೆರಿಗೆದಾರರು ಕೊನೆ ಕ್ಷಣದ ಆತುರ ತಪ್ಪಿಸಲು ಆದಷ್ಟು ಬೇಗ ಸಲ್ಲಿಸುವಂತೆ ಆದಾಯ ತೆರಿಗೆ ಇಲಾಖೆ ನಿನ್ನೆ ತೆರಿಗೆದಾರರನ್ನು ಕೇಳಿದೆ. 25-26 ರ ಮೌಲ್ಯಮಾಪನ ವರ್ಷದಲ್ಲಿ ಈಗಾಗಲೇ 6 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಸದ್ಯಕ್ಕೆ ನಾಳೆ, ಸೆಪ್ಟಂಬರ್ 15, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಂತಿಮ ದಿನಾಂಕವಾಗಿರುತ್ತದೆ.
ತೆರಿಗೆ ರಿಟರ್ನ್ ದಿನಾಂಕ ಮುಂದೂಡಿಕೆ ಆಗುತ್ತಾ?
ಇನ್ನೂ 2 ಕೋಟಿ ಜನ ರಿಟರ್ನ್ಸ್ ಫೈಲ್ಸ್ ಮಾಡದೇ ಇರುವ ಕಾರಣದಿಂದ ಅನೇಕ ವೃತ್ತಿಪರ ತೆರಿಗೆ ರಿಟರ್ನ್ ಮಾಡಿಸುವವರು ಅಂತಿಮ ದಿನಾಂಕ ವಿಸ್ತರಣೆಯನ್ನು ಕೇಳುತ್ತಿದ್ದಾರೆ. ಆದರೆ ಈ ವರ್ಷ ಯಾವುದೇ ವಿಸ್ತರಣೆ ಇರುವುದಿಲ್ಲ ಎಂದು ಕಂಡುಬರುತ್ತಿದೆ.
ನಾಲ್ಕು ತಿಂಗಳ ಕೆಳಗೆ, ಮೇ ತಿಂಗಳಲ್ಲಿ ಘೋಷಿಸಲಾದ ವಿಸ್ತರಣೆಯು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫಾರ್ಮ್‌ಗಳ ಪರಿಷ್ಕರಣೆಗಳ ಕಾರಣದಿಂದಾಗಿತ್ತು, ಇವುಗಳನ್ನು ಏಪ್ರಿಲ್ ಅಂತ್ಯ ಮತ್ತು ಮೇ ಆರಂಭದಲ್ಲಿ ತಿಳಿಸಲಾಯಿತು.
ಕೊನೆ ಕ್ಷಣದಲ್ಲಿ ಆತುರದಲ್ಲಿ ಐಟಿಆರ್ ಸಲ್ಲಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಏನು?
*ಗಡುವಿನ ದಿನಾಂಕದ ಒಂದಷ್ಟು.ಮೊದಲೇ ಐಟಿಆರ್ ಸಲ್ಲಿಸಿ. ಕೋಣೆಯ ದಿನಗಳಿಗೆ ಕಾಯಬೇಡಿ. ತಡವಾಗಿ ರಿಟರ್ನ್ ಸಲ್ಲಿಸುವುದನ್ನು ತಪ್ಪಿಸಿ.
*ಹೆಚ್ಚಿನ ಆದಾಯ ತೆರಿಗೆ ಕೊಡುವವರು ಪ್ರೊಫೆಷನಲ್ ತೆರಿಗೆ ಕನ್ಸಲ್ಟೆಂಟ್ ಅನ್ನು ಸಂಪರ್ಕಿಸೋದು ಒಳ್ಳೆಯದು. ನೀವೇ ಖುದ್ದಾಗಿ ಕೂಡಾ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬಹುದು. ನಿಮ್ಮಿಂದ ತಪ್ಪುಗಳು ಆಗದಂತೆ. ಜಾಗೃತೆ ವಹಿಸಿ.
*ಫಾರ್ಮ್ 26AS ಅನ್ನು ಡೌನ್‌ಲೋಡ್ ಮಾಡಿ ಮತ್ತು ನಿಜವಾದ ಟಿಡಿಎಸ್/ಟಿಸಿಎಸ್/ತೆರಿಗೆ ಪಾವತಿಸಿರುವುದನ್ನು ದೃಢೀಕರಿಸಿ. ಯಾವುದೇ ವ್ಯತ್ಯಾಸ ಕಂಡುಬಂದರೆ ಅದನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಅಗತ್ಯ ಬಿದ್ದರೆ ತೆರಿಗೆ ಕನ್ಸಲ್ಟೆಂಟ್ ನ್ನು ಸಂಪರ್ಕಿಸಿ.
*ರಿಟರ್ನ್ ಸಲ್ಲಿಸುವ ಸಂದರ್ಭ ಬೇಕಾದ ಬ್ಯಾಂಕ್ ಸ್ಟೇಟ್‌ಮೆಂಟ್/ಪಾಸ್‌ಬುಕ್, ಬಡ್ಡಿ ಪ್ರಮಾಣಪತ್ರ, ಕಡಿತಗಳನ್ನು ಪಡೆಯಲು ಬೇಕಾದ ಹೂಡಿಕೆ ಪುರಾವೆಗಳು, ಖಾತೆ ಪುಸ್ತಕಗಳು ಇತ್ಯಾದಿಗಳನ್ನು ಸಂಗ್ರಹಿಸಿ ಮತ್ತು ಎಚ್ಚರಿಕೆಯಿಂದ ಅಧ್ಯಯನ ಮಾಡಿ.
*ಬ್ಯಾಲೆನ್ಸ್ ಶೀಟ್, ಲಾಭ ಮತ್ತು ನಷ್ಟ ಖಾತೆ (ಅನ್ವಯಿಸಿದರೆ)ಇತ್ಯಾದಿಗಳನ್ನು ತಯಾರಿಸಿ
*ನೆನಪಿಡಿ, ಆದಾಯದ ರಿಟರ್ನ್‌ನೊಂದಿಗೆ ಯಾವುದೇ ದಾಖಲೆಗಳನ್ನು ಲಗತ್ತಿಸಬಾರದು.
(ಸರಿಯಾದ ರಿಟರ್ನ್ ಫಾರ್ಮ್ ಅನ್ನು ಆಯ್ಕೆ ಮಾಡೋದು ಮತ್ತು ರಿಟರ್ನ್ ಫಾರ್ಮ್‌ನಲ್ಲಿ ಎಲ್ಲಾ ಮಾಹಿತಿಯನ್ನು ಒದಗಿಸಬೇಕು.)
* ನಿಮ್ಮ ಪ್ಯಾನ್, ಇ-ಮೇಲ್ ವಿಳಾಸ, ವಿಳಾಸ, ಬ್ಯಾಂಕ್ ಖಾತೆ ಇತ್ಯಾದಿ ವಿವರಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ.
*ಆದಾಯದ ರಿಟರ್ನ್‌ನಲ್ಲಿ ಎಲ್ಲಾ ವಿವರಗಳನ್ನು ಭರ್ತಿ ಮಾಡಿ. ನಂತರ ಎಲ್ಲಾ ವಿವರಗಳನ್ನು ದೃಢೀಕರಿಸಿ. ಆಮೇಲೆ, ಐಟಿಆರ್ ಸಲ್ಲಿಸಲು ಮತ್ತು ಸಂಪೂರ್ಣ ಇ-ಪರಿಶೀಲನೆಯೊಂದಿಗೆ ಮುಂದುವರಿಯಿರಿ.
ಐಟಿಆರ್ ತಡವಾಗಿ ಸಲ್ಲಿಸುವ ಮೂಲಕ ನೀವು ಮರುಪಾವತಿಯನ್ನು ಕಳೆದುಕೊಳ್ಳಬಹುದೇ? ಎನ್ನುವ ಪ್ರಶ್ನೆ ಸಾಮಾನ್ಯರಲ್ಲಿ ಕೇಳಿಬರುತ್ತಿದೆ. ನೀವು ನಿಗದಿತ ದಿನಾಂಕದ ನಂತರವೂ ತಡವಾಗಿ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ಅವಕಾಶವಿರುತ್ತದೆ. ಆಗ ಕೂಡಾ ನೀವು ಆದಾಯ ತೆರಿಗೆ ಮರುಪಾವತಿಯನ್ನು ಸಲ್ಲಿಸಿದರೂ, ನಿಮಗೆ ನವೀಕರಿಸಿದ ರಿಟರ್ನ್ (ITR-U) ಸಲ್ಲಿಸುವ ಮೂಲಕ ಮರುಪಾವತಿಯನ್ನು ಪಡೆಯಲು ಸಾಧ್ಯವಿಲ್ಲ. FY 24-25 (AY 25-26) ಗಾಗಿ ತಡವಾಗಿ ರಿಟರ್ನ್‌ಗಳನ್ನು ಡಿಸೆಂಬರ್ 31, 2025 ರವರೆಗೆ ಕೂಡಾ ಸಲ್ಲಿಸಬಹುದು. ಆದರೆ ಈಗಾಗಲೇ ಟ್ಯಾಕ್ಸ್ ಕಡಿತ ಆಗಿದ್ದರೂ, ಅದನ್ನು ನಿಮಗೆ ಮರುಪಾವತಿ ಮಾಡಲಾಗುವುದಿಲ್ಲ ಎನ್ನುವುದು ನೆನಪಿರಲಿ.
