7
KMF Ghee Rate: ಕರ್ನಾಟಕ ಮಿಲ್ಕ್ ಫೆಡರೇಷನ್ (KMF) ತುಪ್ಪದ ದರವನ್ನು ಏರಿಕೆ ಮಾಡಿದೆ. ಇಂದಿನಿಂದ ಈ ಹೊಸ ದರ ಜಾರಿಗೆ ಬರಲಿದೆ. ಒಂದು ಲೀಟರ್ ಕೆಎಂಎಫ್ ತುಪ್ಪಕ್ಕೆ 90 ರೂ. ಏರಿಕೆಯಾಗಿದೆ.
ಒಂದು ಲೀಟರ್ ತುಪ್ಪವನ್ನು ರೂ.610 ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಜಿಎಸ್‌ಟಿ ಸ್ಲ್ಯಾಬ್ ಸುಧಾರಣೆಗೂ ಮೊದಲು ರೂ.650 ಇತ್ತು. ಸುಧಾರಣೆಯಲ್ಲಿ 40 ರೂ. ಇಳಿಕೆ ಮಾಡಲಾಗಿತ್ತು. ಆದರೆ ವಿಶ್ವ ಮಾರುಕಟ್ಟೆಯಲ್ಲಿ ತುಪ್ಪದ ದರ ಏರಿಕೆಯಾದ ಹಿನ್ನೆಲೆಯಲ್ಲಿ ತುಪ್ಪದ ದರ ಅನಿವಾರ್ಯವಾಗಿ ಏರಿಕೆ ಮಾಡಲಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
