Bank Locker Facility: ಬ್ಯಾಂಕ್ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗ ಅಂತಾನೇ ಹೇಳಬಹುದು. ಬ್ಯಾಂಕ್ ನಲ್ಲಿ ದುಡ್ಡಿದೆ ಅಂದರೆ ನಾವು ಸ್ವಲ್ಪ ನಿರಾಳತೆ ಮತ್ತು ಸೇಫ್ಟಿ ಫೀಲ್ ಮಾಡ್ಕೋತೀವಿ. ಹಾಗೆನೇ ಬ್ಯಾಂಕ್ ಲಾಕರ್ ಕೂಡಾ ದೊಡ್ಡ ಮಟ್ಟದ ಪಾತ್ರ ವಹಿಸುತ್ತದೆ. ಚಿನ್ನಾಭರಣ, ಬೆಲೆಬಾಳುವ ವಸ್ತುಗಳು ಮತ್ತು ಅಗತ್ಯ ದಾಖಲೆಗಳನ್ನು ಭದ್ರತೆಯ ದೃಷ್ಟಿಯಿಂದ ಬ್ಯಾಂಕ್ ಲಾಕರ್‌ನಲ್ಲಿ ತುಂಬಾ ಜನ ಇಡುತ್ತಾರೆ. ಸದ್ಯ ಬ್ಯಾಂಕ್ ಲಾಕರ್ (Bank Locker Facility) ಬಗ್ಗೆ ಮುಖ್ಯ ಮಾಹಿತಿ ಇಲ್ಲಿದೆ.
ಜನರು ಬ್ಯಾಂಕ್ ಲಾಕರ್‌ನಲ್ಲಿ ವಸ್ತುಗಳನ್ನು ಸುರಕ್ಷಿತವಾಗಿ ಇಡುತ್ತಾರೆ. ಆದರೆ ದೀರ್ಘಕಾಲದವರೆಗೆ ಅದನ್ನು ತೆರೆಯುವುದಿಲ್ಲ. ನೀವೂ ವಸ್ತುಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದರೆ ಅದನ್ನು ತೆರೆಯದೆ ಇದ್ದರೆ, ಬ್ಯಾಂಕ್ ಲಾಕರ್ ಕ್ಲೋಸ್ ಆಗಿದ್ದರೆ ಏನಾಗುತ್ತದೆ?
ಇಲ್ಲಿವೆ ಆರ್ಬಿಐ ಹೊಸ ಮಾರ್ಗಸೂಚಿಗಳು. ಇತ್ತೀಚೆಗೆ ಆರ್‌ಬಿಐ ಬ್ಯಾಂಕ್ ಲಾಕರ್‌ಗೆ ಬಗ್ಗೆ ಹೊಸ ಮಾರ್ಗಸೂಚಿ
ಹೊರಡಿಸಿದೆ.
ಆರ್‌ಬಿಐ ಮಾರ್ಗಸೂಚಿ :
ಹಳೆಯ ಲಾಕರ್ ನಿಯಮಗಳಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಲಾಗಿದೆ. ಬಾಡಿಗೆ ಪಾವತಿಸಿದರೂ ಲಾಕರ್ ದೀರ್ಘಕಾಲದವರೆಗೆ ತೆರೆಯದಿದ್ದರೆ ಅದು ಸ್ವಯಂಚಾಲಿತವಾಗಿ ಮುಚ್ಚಲ್ಪಡುತ್ತದೆ ಎಂದು ಹೇಳಲಾಗಿದೆ.
7 ವರ್ಷಗಳೊಳಗೆ ಬ್ಯಾಂಕ್ ಲಾಕರ್ ಅನ್ನು ತೆರೆಯದಿದ್ದರೆ, ಆ ಲಾಕರ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಈ ವೇಳೆ, ಬ್ಯಾಂಕ್ ಮೊದಲು ಆ ಗ್ರಾಹಕರ ಕ್ಲೈಮ್‌ಗಾಗಿ ಕಾಯುತ್ತದೆ. ಅವರು ಕ್ಲೈಮ್ ಮಾಡದಿದ್ದರೂ ನಿಯಮಿತ ಬಾಡಿಗೆಯನ್ನು ಪಾವತಿಸಿದರೆ, ನಂತರ ಲಾಕರ್ ಅನ್ನು ಬ್ಯಾಂಕಿನಿಂದ ನಿಷ್ಕ್ರೀಯಗೊಳಿಸಲಾಗುತ್ತದೆ.
ಬ್ಯಾಂಕ್ ಮೊದಲು ಲಾಕರ್ ಅನ್ನು ನಾಮಿನಿ ಅಥವಾ ಕಾನೂನು ಉತ್ತರಾಧಿಕಾರಿಗೆ ವರ್ಗಾಯಿಸುತ್ತದೆ. ನಾಮಿನಿಯನ್ನು ಪತ್ತೆಹಚ್ಚಲು ಸಾಧ್ಯವಾಗದಿದ್ದಾಗ ಬ್ಯಾಂಕ್ ಲಾಕರ್-ಹಿರಿಯರ್‌ಗೆ ತಿಳಿಸುತ್ತದೆ.
ಲಾಕರ್-ಬಾಡಿಗೆದಾರರಿಗೆ ಪತ್ರದ ಮೂಲಕ ಈ ಕುರಿತು ನೋಟಿಸ್ ನೀಡಲಿದ್ದು, ನೋಂದಾಯಿತ ಇಮೇಲ್ ಐಡಿ ಮತ್ತು ಮೊಬೈಲ್ ಫೋನ್ ಸಂಖ್ಯೆಗೆ ಇಮೇಲ್ ಮತ್ತು ಎಸ್‌ಎಂಎಸ್ ಅಲರ್ಟ್‌ಗಳನ್ನು ಸಹ ಕಳುಹಿಸಲಿವೆ.
ಪತ್ರ ಡೆಲಿವರಿಯಾಗದೆ ಹಿಂದಿರುಗಿದರೆ ಅಥವಾ ಲಾಕರ್ ಅನ್ನು ಬಾಡಿಗೆ ಪಡೆದವರ ವಿಳಾಸ ದೊರೆಯದ ಸಂದರ್ಭದಲ್ಲಿ, ಬ್ಯಾಂಕುಗಳು ಲಾಕರ್ ಬಾಡಿಗೆದಾರರು ಅಥವಾ ಲಾಕರ್ನಲ್ಲಿರುವ ಸಾಮಗ್ರಿಗಳಲ್ಲಿ ಆಸಕ್ತಿ ಹೊಂದಿರುವ ಇತರೆ ಯಾವುದೇ ವ್ಯಕ್ತಿಗೆ ಉತ್ತರ ನೀಡಲು ಸಮಯಾವಕಾಸ ನೀಡಿ, ಎರಡು ಸಾರ್ವಜನಿಕ ಪತ್ರಿಕೆಗಳಲ್ಲಿ (ಒಂದು ಆಂಗ್ಲ ಮಾಧ್ಯಮ ಪತ್ರಿಕೆ ಹಾಗೂ ಮತ್ತೊಂದು ಸ್ಥಳೀಯ ಮಾಧ್ಯಮ ಪತ್ರಿಕೆ) ಈ ಕುರಿತು ನೋಟಿಸ್ ಜಾರಿ ಮಾಡಲಿವೆ. ಆಗಲೂ ಯಾರೂ ಕ್ಲೇಮ್ ಮಾಡದೆ ಇದ್ದರೆ ಬ್ಯಾಂಕ್ ನವರು ಲಾಕರ್ ತೆರೆಯುತ್ತಾರೆ.
ಬ್ಯಾಂಕ್ ಅಧಿಕಾರಿ ಮತ್ತು ಇಬ್ಬರು ಸ್ವತಂತ್ರ ಸಾಕ್ಷಿಗಳ ಸಮ್ಮುಖದಲ್ಲಿ ಲಾಕರ್ ತೆರೆಯಬೇಕು ಮತ್ತು ಇಡೀ ಪ್ರಕ್ರಿಯೆಯನ್ನು ವೀಡಿಯೋ ರೆಕಾರ್ಡ್ ಮಾಡಬೇಕು. ಸ್ಮಾರ್ಟ್ ವಾಲ್ಟ್ ಇದ್ದರೆ, ಲಾಕರ್ ಅನ್ನು ಮುರಿಯಲು ವಾಲ್ಟ್ ನಿರ್ವಾಹಕರು ಪಾಸ್‌ವರ್ಡ್ ಅನ್ನು ಬಳಸುತ್ತಾರೆ. ಲಾಕರ್ ತೆರೆದ ನಂತರ ಅದನ್ನು ಹಿರಿಯ ಅಧಿಕಾರಿಗೆ ಹಸ್ತಾಂತರಿಸಲಾಗುತ್ತದೆ.
