Home » Safest Banks in India: RBI ಪ್ರಕಾರ ಈ 3 ಬ್ಯಾಂಕ್’ಗಳು ಅತ್ಯಂತ ಸುರಕ್ಷಿತ, ಇಲ್ಲಿ ನಿಮ್ಮ ಹಣ ಪೂರ್ತಿ ಸೇಫ್ !

Safest Banks in India: RBI ಪ್ರಕಾರ ಈ 3 ಬ್ಯಾಂಕ್’ಗಳು ಅತ್ಯಂತ ಸುರಕ್ಷಿತ, ಇಲ್ಲಿ ನಿಮ್ಮ ಹಣ ಪೂರ್ತಿ ಸೇಫ್ !

0 comments
Safest Banks in India

Safest Banks in India: ಪ್ರತಿಯೊಬ್ಬರೂ ಕೂಡ ತಾವು ಕಷ್ಟಪಟ್ಟು ದುಡಿದ ಮತ್ತು ಗಳಿಸಿದ ಹಣವನ್ನು ಸುರಕ್ಷಿತವಾಗಿ ಬ್ಯಾಂಕಿನಲ್ಲಿ ಇಟ್ಟು ತಮ್ಮ ಕಷ್ಟಕಾಲದಲ್ಲಿ ಆ ಹಣ ನಮಗೆ ಆಗುತ್ತದೆ ಎಂಬ ಭರವಸೆಯಲ್ಲಿ ಇರುತ್ತಾರೆ ಅದಕ್ಕಾಗಿ ಆ ದುಡ್ಡನ್ನು ಅತ್ಯಂತ ವಿಶ್ವಾಸಾರ್ಹ ಬ್ಯಾಂಕುಗಳಲ್ಲಿ ಇಡಲು ಜನರು ಬಯಸುತ್ತಾರೆ. ಆದರೆ ಕೆಲವೊಮ್ಮೆ ಜನರ ದುಡ್ಡು ಮಾತ್ರವಲ್ಲ, ಆ ಬ್ಯಾಂಕುಗಳೇ ಕಣ್ಮರೆ ಆಗುವುದನ್ನೇ ಕೂಡ ನೀವು ನೋಡಿರುತ್ತೀರಿ. ಹೀಗಾಗಿ RBI ಘೋಷಣೆ ಮಾಡಿರುವಂತಹ ಅತ್ಯಂತ ಸುರಕ್ಷಿತ ಬ್ಯಾಂಕಿನ (Safest Banks in India) ಮಾಹಿತಿ ಅತ್ಯಂತ ಮಹತ್ವದ್ದು ಎನ್ನಿಸಿಕೊಳ್ಳುತ್ತದೆ. ಹಾಗಿದ್ದರೆ ಬನ್ನಿ ಆ ಬ್ಯಾಂಕುಗಳು ಯಾವುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ.

Reserve Bank Of India ಇತ್ತೀಚೆಗೆ ಬಿಡುಗಡೆ ಮಾಡಿರುವಂತಹ ಅತ್ಯಂತ ಸುರಕ್ಷಿತ ಬ್ಯಾಂಕುಗಳ ಪಟ್ಟಿಯಲ್ಲಿ ಒಂದು ಸರ್ಕಾರಿ ಬ್ಯಾಂಕ್ ಇದ್ದು, ಅದರ ಜತೆಗೆ 2 ಖಾಸಗಿ ವಲಯದ ಬ್ಯಾಂಕ್ ಸಹ ಇರೋದು ಗಮನ ಸೆಳೆದಿದೆ. ಹೌದು, ಸರ್ಕಾರಿ ವಲಯದ ಬ್ಯಾಂಕ್ ಆಗಿ State Bank of India ಇದ್ದರೆ ಹಾಗೂ ಖಾಸಗಿ ವಲಯದ 2 ಬ್ಯಾಂಕುಗಳಾಗಿ ಭಾರತದ ದೈತ್ಯ ಖಾಸಗಿ ಬ್ಯಾಂಕ್ ಆದ ICICI Bank ಹಾಗೂ HDFC ಬ್ಯಾಂಕುಗಳು ಇವುಗಳಲ್ಲಿ ಸೇರಿವೆ. ಹೀಗಾಗಿ ನಿಮ್ಮ ಹಣ ಈ 3 ಬ್ಯಾಂಕಿನಲ್ಲಿ ಇದೆ ಎಂದರೆ ಖಂಡಿತವಾಗಿ ಅತ್ಯಂತ ಸೇಫ್ ಎಂದು ಭಾವಿಸಬಹುದಾಗಿದೆ.

ಭಾರತದಲ್ಲಿ ಬ್ಯಾಂಕಿಂಗ್ ಸ್ಕ್ಯಾಮ್ ಗಳನ್ನು ನೋಡಿದ ನಂತರ, ಈಗ ತನ್ನ ಅಧೀನದಲ್ಲಿ ಬರುವಂತಹ ಪ್ರತಿಯೊಂದು ಬ್ಯಾಂಕುಗಳ ಬಗ್ಗೆ ಕೂಡ RBI ಹದ್ದಿನ ಕಣ್ಣನ್ನು ಇಟ್ಟಿದೆ. ಕಾಲ ಕಾಲಕ್ಕೆ ಬ್ಯಾಂಕುಗಳ ಪ್ರತಿನಿತ್ಯದ ವಹಿವಾಟುಗಳು, ದೊಡ್ಡ ಮಟ್ಟದಲ್ಲಿ ಯಾರಿಗಾದರೂ ಸಾಲವನ್ನು ಕೊಡುವಾಗ ಅದರ ವಿವರಗಳು, ಬೃಹತ್ ಪ್ರಮಾಣದ ಶೇರ್ ವ್ಯವಹಾರ ಮುಂತಾದ ಕುರಿತಂತೆ, ಸಂಪೂರ್ಣ ನಿಗಾ ವಹಿಸುತ್ತದೆ. ಯಾವುದೇ ಕ್ರಿಯೆಯು ಬ್ಯಾಂಕಿಂಗ್ ವ್ಯವಹಾರದ ಮೇಲೆ ಯಾವುದಾದರೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದರೆ ಅದರ ಮೇಲು ಕೂಡ ತನ್ನ ಮೇಲ್ವಿಚಾರಣೆಯನ್ನು ರಿಸರ್ವ್ ಬ್ಯಾಂಕ್ ತೀಕ್ಷ್ಣಗೊಳಿಸುತ್ತದೆ. ಇದರ ಜತೆಗೆ, ಭಾರತದ ಅತ್ಯಂತ ಸುರಕ್ಷಣಾ ಬ್ಯಾಂಕುಗಳ ಹೆಸರನ್ನು ಆರ್‌ಬಿಐ ಪಟ್ಟಿ ಮಾಡಿದೆ. ಸಾಮಾನ್ಯ ಬಂಡವಾಳ ಸಂರಕ್ಷಣಾ ಬಫರ್ ಜೊತೆಗೆ ಸಾಮಾನ್ಯ ಇಕ್ವಿಟಿ ಶ್ರೇಣಿ 1 (CET1) ಮತ್ತು ಅದೇ ರೀತಿ, icici ಬ್ಯಾಂಕ್ ಮತ್ತು hdfc ಬ್ಯಾಂಕ್ ಹೆಚ್ಚುವರಿ 0.2 % ರಿಸರ್ವ್ ಫಂಡ್ ನಿರ್ವಹಿಸಿದರೆ ಆಗ ಆ ಬ್ಯಾಂಕುಗಳಿಗೆ ಸುರಕ್ಷತಾ ಬ್ಯಾಂಕಿನ ಸ್ಥಾನಮಾನ ನೀಡಲಾಗುತ್ತದೆ.

ಈ ಸುರಕ್ಷತಾ ಬ್ಯಾಂಕಿನ ಪಟ್ಟಿಯನ್ನು ಮೊದಲಿಗೆ 2015 ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ್ದು ಪ್ರತಿಯೊಂದು ವಿಚಾರಗಳನ್ನು ಗಮನದಲ್ಲಿ ಇರಿಸಿಕೊಂಡು ತಮ್ಮ ರೇಟಿಂಗ್ ಅನ್ನು 3 ಬ್ಯಾಂಕುಗಳಿಗೆ ನೀಡಿ ಆಯ್ಕೆ ಮಾಡಿದೆ. ಭಾರತವು ಇಷ್ಟು ದೊಡ್ಡ ರಾಷ್ಟ್ರ. ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರ ಅತ್ಯಂತ ಬಲಿಷ್ಠವಾಗಿದ್ದು ಹಲವಾರು ದೈತ್ಯ ಬ್ಯಾಂಕುಗಳಿವೆ. ಆದರೆ ಇಲ್ಲಿಯವರೆಗೆ ಕೇವಲ 3 ಬ್ಯಾಂಕುಗಳು ಮಾತ್ರ ಈ ವ್ಯಾಪ್ತಿಯಲ್ಲಿ ಬರಲು ಸಾಧ್ಯವಾಗಿದೆ. ನೀವು ಯಾವುದೇ ಬ್ಯಾಂಕುಗಳಲ್ಲಿ ಬೇಕಾದರು ವ್ಯವಹಾರ ಮಾಡಿ ಲೋನು ಅಡ್ವಾನ್ಸ್ ಪಡೆದುಕೊಳ್ಳಿ ಸಮಸ್ಯೆ ಇಲ್ಲ, ಆದರೆ ಅತ್ಯಂತ ಸೇಫ್ ಇರುವಂತಹ ಈ ಬ್ಯಾಂಕುಗಳಲ್ಲಿ ಹಣವನ್ನು ಠೇವಣಿ ಇಡುವುದು ಅಥವಾ ಹೂಡಿಕೆ ಮಾಡಲು ಪ್ರಾಮುಖ್ಯತೆ ಕೊಡಿ. ಯಾಕೆಂದರೆ ನಿಮ್ಮ ಹಣ ಸುರಕ್ಷಿತ ಆಗಿರಲಿ. ಹಣ ಏನು ಸುಮ್ನೆ ಬರತ್ತಾ, ಅಲ್ಲವೇ ?

ಇದನ್ನೂ ಓದಿ: ಮಳೆ ಆರಂಭವಾದಂತೆ ಸೊಳ್ಳೆ ಕಡಿತ ಹೆಚ್ಚಳ..! ಪರಿಹಾರಕ್ಕಾಗಿ ಈ ಮನೆಮದ್ದು ಅನುಸರಿಸಿ .

You may also like

Leave a Comment