Home » Liquor Sale: ಮದ್ಯ ಪ್ರಿಯರೇ ಹೊಸ ವರ್ಷಕ್ಕೆ ರೇಟ್ ಹೆಚ್ಚಳವೇ ನಿಮಗೆ ಗಿಫ್ಟ್- ನಾಳೆಯಿಂದ ಬಿಚ್ಚಬೇಕು ಇಷ್ಟು ಹೆಚ್ಚುವರಿ ದುಡ್ಡು

Liquor Sale: ಮದ್ಯ ಪ್ರಿಯರೇ ಹೊಸ ವರ್ಷಕ್ಕೆ ರೇಟ್ ಹೆಚ್ಚಳವೇ ನಿಮಗೆ ಗಿಫ್ಟ್- ನಾಳೆಯಿಂದ ಬಿಚ್ಚಬೇಕು ಇಷ್ಟು ಹೆಚ್ಚುವರಿ ದುಡ್ಡು

0 comments

Liquor Price Hike: ಹೊಸ ವರ್ಷದ ಹೊಸ್ತಿಲಲ್ಲಿ ಪಾನ ಪ್ರಿಯರಿಗೆ ಶಾಕಿಂಗ್ ನ್ಯೂಸ್ (Shocking News)ಹೊರಬಿದ್ದಿದೆ. ದಿನಂಪ್ರತಿ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನತೆಗೆ ಅದರಲ್ಲಿಯೂ ಮದ್ಯ ಪ್ರಿಯರಿಗೆ (Liquor)ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನವರಿಯಿಂದ ಮದ್ಯಪ್ರಿಯರ ಜೇಬಿಗೆ ಕತ್ತರಿ ಬೀಳೋದು ಫಿಕ್ಸ್ ಆಗಿದೆ. ಆದರೆ, ಈ ಬಾರಿ ಮದ್ಯ ಕಂಪನಿಗಳು ಮದ್ಯದ ಬೆಲೆ ಹೆಚ್ಚಳ( Liquor Price Hike)ಮಾಡಿದೆ.

ಕಂಪನಿಗಳ ಉತ್ಪಾದನಾ ವೆಚ್ಚ, ಸರಕು ಸಾಗಣೆ ವೆಚ್ಚಗಳು ಏರಿಕೆ ಆಗುತ್ತಿರುವ ಹಿನ್ನೆಲೆ ಮದ್ಯ ಕಂಪನಿಗಳು ಬೆಲೆ ಏರಿಕೆ ಮಾಡಲು ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ. ಬಿಯರ್ ಜೊತೆಗೆ ಇತರೆ ಮಾದರಿಯ ಮದ್ಯ ಮಾರಾಟದ ಪ್ರಮಾಣ 0.43 ಶೇ. ಹೆಚ್ಚಳ ಕಂಡಿದೆ. ಕಳೆದ ಬಜೆಟ್ನಲ್ಲಿ ಸರ್ಕಾರ (Government)ಮದ್ಯದ ಮೇಲಿನ ತೆರಿಗೆಯನ್ನು ಶೇಕಡಾ 10ರಿಂದ ಶೇ. 20ರಷ್ಟು ಹೆಚ್ಚಳ ಮಾಡಿದೆ. ಇದರಿಂದಾಗಿ ಜುಲೈ ಒಂದರಿಂದ ಮದ್ಯದ ದರ ಏರಿಕೆ ಜಾರಿಗೆ ಬಂದಿತ್ತು. ಇದೀಗ, ಅಬಕಾರಿ ಇಲಾಖೆಗೆ ಪತ್ರ ಬರೆದಿರುವ ಕಂಪನಿಗಳು ಓಟಿ, ಬಿಪಿ, 8 ಪಿಎಂ ದರ ಹೆಚ್ಚಳದ ಜೊತೆಗೆ ಪ್ರತಿ ಕ್ವಾಟ‌ರ್ ಮೇಲೆ 20-30 ರೂಪಾಯಿ ಏರಿಕೆ ಮಾಡುವ ಬಗ್ಗೆ ಮಾಹಿತಿ ನೀಡಿವೆ.

ಮದ್ಯದ ದರ ಪರಿಷ್ಕರಣೆ:

ಓಟಿ 180 ಎಂ ಎಲ್ ನ ದರ ಸದ್ಯ 100ರೂಪಾಯಿ ಆಗಿದ್ದು, ಜನವರಿ ಒಂದರಿಂದ ರೂಪಾಯಿ 123 ಆಗಲಿದೆ. ಬಿಪಿ 180 ಎಂಎಲ್ ನ ಈಗಿನ ದರ 123 ರೂ. ಆಗಿದ್ದು, ಜನವರಿಯಿಂದ 159 ರೂಪಾಯಿ ಆಗಲಿದೆ. 8PM (180 ಎಂ ಎಲ್ ನ) ಈಗಿನ ದರ 100 ಆಗಿದ್ದು, ಜನವರಿಯಿಂದ 123 ರೂ. ಆಗಲಿದೆ

You may also like

Leave a Comment