Home » North Western Railway Jobs Application Last Date : ನಾರ್ಥ್‌ ವೆಸ್ಟರ್ನ್‌ ವಲಯದಲ್ಲಿ ಅಪ್ರೆಂಟಿಸ್‌ಗಳ ನೇಮಕ, ಭರ್ಜರಿ 2026 ಅಪ್ರೆಂಟಿಸ್‌ಗಳ ನೇಮಕ

North Western Railway Jobs Application Last Date : ನಾರ್ಥ್‌ ವೆಸ್ಟರ್ನ್‌ ವಲಯದಲ್ಲಿ ಅಪ್ರೆಂಟಿಸ್‌ಗಳ ನೇಮಕ, ಭರ್ಜರಿ 2026 ಅಪ್ರೆಂಟಿಸ್‌ಗಳ ನೇಮಕ

0 comments

ಕೇಂದ್ರ ಸರ್ಕಾರದ ರೈಲ್ವೆ ಸಚಿವಾಲಯ ಅಧೀನದ ವಾಯುವ್ಯ ರೈಲ್ವೆ ವಲಯದಲ್ಲಿ (ನಾರ್ಥ್‌ ವೆಸ್ಟರ್ನ್‌ ರೈಲ್ವೆ) ಬರೋಬ್ಬರಿ 2026 ಅಪ್ರೆಂಟಿಸ್‌ ಹುದ್ದೆಗಳನ್ನು ಭರ್ತಿ ಮಾಡಲು ಕಳೆದ ಜನವರಿ ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದು, ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸಬಹುದು.ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಒಟ್ಟು ಹುದ್ದೆಗಳು, ಮಾನದಂಡ ಅರ್ಜಿ ಶುಲ್ಕ ಇನ್ನಿತರ ಮಾಹಿತಿಗಳನ್ನು ತಿಳಿದಿರುವುದು ಅವಶ್ಯ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಎಸೆಸೆಲ್ಸಿ ಪಾಸ್ ಆಗಿರಬೇಕಾಗಿದ್ದು, (ವಿವಿಧ ಟ್ರೇಡ್‌ಗಳ ಅನುಸಾರ)ಐಟಿಐ ಪಾಸ್‌ ಮಾಡಿರಬೇಕು. ಆಕ್ಟ್‌ ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ 2026 ಇದ್ದು, ಮಾಸಿಕ ಸ್ಟೈಫಂಡ್ ರೂ.8000 ದೊರೆಯಲಿದೆ.

ವಾಯುವ್ಯ ರೈಲ್ವೆ ಡಿವಿಷನ್‌ವಾರು ಹುದ್ದೆಗಳ ವಿವರ ಹೀಗಿದೆ:
ಡಿಆರ್‌ಎಂ ಆಫೀಸ್, ಅಜ್ಮೀರ್ ಡಿವಿಷನ್ ಒಟ್ಟು 413 ಹುದ್ದೆಗಳು ಖಾಲಿ ಇವೆ.
ಡಿಆರ್‌ಎಂ ಆಫೀಸ್, ಬಿಕನೇರ್ ಡಿವಿಷನ್ ಒಟ್ಟು 423 ಹುದ್ದೆಗಳು ಖಾಲಿಯಿವೆ.
ಡಿಆರ್‌ಎಂ ಆಫೀಸ್, ಜೈಪುರ್ ಡಿವಿಷನ್ ಒಟ್ಟು 494 ಹುದ್ದೆಗಳು ಖಾಲಿಯಿವೆ.
ಡಿಆರ್‌ಎಂ ಆಫೀಸ್, ಜೋಧ್‌ಪುರ್ ಡಿವಿಷನ್ 404 ಹುದ್ದೆಗಳು ಖಾಲಿಯಿವೆ.
ಕ್ಯಾರಿಯೇಜ್ ವರ್ಕ್‌ಶಾಪ್, ಬಿಕನೇರ್ ಒಟ್ಟು 31 ಹುದ್ದೆಗಳು ಖಾಲಿಯಿವೆ.
ಕ್ಯಾರಿಯೇಜ್ ವರ್ಕ್‌ಶಾಪ್, ಜೋಧ್‌ಪುರ್ ಒಟ್ಟು 70 ಹುದ್ದೆಗಳು ಖಾಲಿಯಿವೆ.
ಬಿಟಿಸಿ ಕ್ಯಾರಿಯೇಟ್, ಅಜ್ಮೀರ್ ಒಟ್ಟು 126 ಹುದ್ದೆಗಳು ಖಾಲಿಯಿವೆ.
ಬಿಟಿಸಿ ಲೊಕೊ, ಅಜ್ಮೀರ್ ಒಟ್ಟು 65 ಹುದ್ದೆಗಳು ಖಾಲಿಯಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ ವಯೋಮಿತಿ ಅದೇ ರೀತಿ ಗರಿಷ್ಠ 24 ವರ್ಷ ವಯೋಮಿತಿ ನಿಗದಿ ಪಡಿಸಲಾಗಿದೆ. ಜಾತಿವಾರು ಮೀಸಲಾತಿ ನಿಯಮ ಅರ್ಹರಿಗೆ ಅನ್ವಯವಾಗುತ್ತದೆ. ಆಯ್ಕೆ ವಿಧಾನದ ಬಗ್ಗೆ ಗಮನ ಹರಿಸಿದರೆ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯಲ್ಲಿನ ಶೇಕಡ.50 ಅಂಕಗಳು, ಐಟಿಐ’ನ ಶೇಕಡ.50 ಅಂಕಗಳನ್ನು ಪರಿಗಣಿಸಿ, ಟ್ರೇಡ್‌ವಾರು ಮೆರಿಟ್‌ ಲಿಸ್ಟ್‌ ತಯಾರಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 10-02-2023 ಕೊನೆಯ ದಿನಾಂಕವಾಗಿದ್ದು, ಅರ್ಜಿ ಶುಲ್ಕ ರೂ.100 ಪಾವತಿ ಮಾಡಬೇಕಾಗುತ್ತದೆ. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ದೊರೆಯಲಿದ್ದು, ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡಬಹುದು.

You may also like

Leave a Comment