Home » Onion Price near 100 Rs: ಕರ್ನಾಟಕ ಸೇರಿ ದೇಶಾದ್ಯಂತ ಗಗನಕ್ಕೇರಿದ ಈರುಳ್ಳಿ ಬೆಲೆ, 100 ರ ಸನಿಹದಲ್ಲಿ ಬೆಲೆ, ಗ್ರಾಹಕರ ಕಣ್ಣಲ್ಲಿ ನೀರು !

Onion Price near 100 Rs: ಕರ್ನಾಟಕ ಸೇರಿ ದೇಶಾದ್ಯಂತ ಗಗನಕ್ಕೇರಿದ ಈರುಳ್ಳಿ ಬೆಲೆ, 100 ರ ಸನಿಹದಲ್ಲಿ ಬೆಲೆ, ಗ್ರಾಹಕರ ಕಣ್ಣಲ್ಲಿ ನೀರು !

by ಹೊಸಕನ್ನಡ
0 comments

Onion Price neat 100 Rs: ದೇಶಾದ್ಯಂತ ಈರುಳ್ಳಿ ಬೆಲೆ ಮತ್ತೊಂದು ಬಾರಿ ಗಗನಮುಖಿಯಾಗುತ್ತಿದೆ. ಸಣ್ಣಗೆ ಗ್ರಾಹಕರ ಕಣ್ಣಲ್ಲಿ ನೀರು ತರಿಸಲು ಈರುಳ್ಳಿ ಸಜ್ಜಾಗಿದೆ. ಕಳೆದ ವಾರ ಕೆಜಿ 40-50 ರೂಪಾಯಿ ಇದ್ದ ಈರುಳ್ಳಿ ಈಗ ರೂಪಾಯಿ ಈಗ ದೇಶದ ಹಲವೆಡೆ 70 ರೂಪಾಯಿಯ ಆಸುಪಾಸಿನಲ್ಲಿ ಇದೆ. ಕೆಲವು ಕಡೆ ಅದು ಕೆಜಿಗೆ 80 ರಿಂದ 90 ರ ತನಕ ಏರಿಕೆ ಆಗಿ ಶತಕ ಬಾರಿಸುವ ನಿಟ್ಟಿನಲ್ಲಿ ಸಣ್ಣ ಈರುಳ್ಳಿ ಬೆಲೆ ಏರಿಕೆ ಆಗುತ್ತಿದೆ. ( Onion price is near 100 Rs Per KG)

ಕರ್ನಾಟಕದಲ್ಲಿಯೂ ಕೂಡಾ ಈರುಳ್ಳಿ ಉತ್ಪಾದನೆ ಕುಂಠಿತವಾಗಿದೆ. ಕೆಲವು ಕಡೆ ಅತಿವೃಷ್ಟಿ ಮತ್ತೆ ಕೆಲವು ಕಡೆಗಳಲ್ಲಿ ಅನಾವೃಷ್ಟಿ ಅಥವಾ ಮಳೆ ಕುಂಠಿತ ಆದ ಕಾರಣ ಈರುಳ್ಳಿ ಉತ್ಪಾದನೆ ಕುಂಠಿತವಾಗಿದೆ. ಉತ್ತರ ಕರ್ನಾಟಕದಲ್ಲಿನ ತೀವ್ರ ಬರ ಪರಿಸ್ಥಿತಿಗಳು ಈರುಳ್ಳಿ ಬೆಲೆ ಹೆಚ್ಚಳಕ್ಕೆ ಕಾರಣವೆಂದು ಭಾವಿಸಲಾಗಿದೆ. ಹತ್ತು ದಿನಗಳ ಕೆಳಗೆ 30 ರೂಪಾಯಿ ಬೆಲೆ ಇದ್ದ ಈರುಳ್ಳಿ, ಕಳೆದ ವಾರ ಆಗುವಾಗ ಹೆಚ್ಚು ಕಮ್ಮಿ ಡಬಲ್ ಆಗಿತ್ತು. ಅಂದ್ರೆ ಒಂದು ಕೆಜಿ ಈರುಳ್ಳಿಗೆ 50-60 ತನಕ ಏರಿಕೆ ಆಗಿತ್ತು. ಈಗ 80 ರಿಂದ 90 ರೂಪಾಯಿಗೆ ಬೆಲೆಯೇರಿಕೆ ಆಗಿದೆ. ಈರುಳ್ಳಿಗೆ ಯಾವಾಗಲೂ ಎಲ್ಲೆಲ್ಲೂ ಬೇಡಿಕೆ ಹೆಚ್ಚಿರುವುದರಿಂದ ಬರುವ ವಾರ ಕೂಡಾ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ. ಇದು ಕರ್ನಾಟಕದ ಮಾತಾಯಿತು.

ಇನ್ನು ದೇಶದ ಇತರೆಡೆ ಕೂಡಾ ಪರಿಸ್ಥಿತಿ ಭಿನ್ನವಾಗಿಲ್ಲ. ಮುಂಬೈನಲ್ಲಿ ರೂಪಾಯಿ 80 ತಲುಪಿದೆ. ದೇಶದ ಎಲ್ಲಾ ಭಾಗಗಳಲ್ಲೂ ಈರುಳ್ಳಿ ಬೆಳೆಯ ಏರಿಕೆ ನಿರಂತರವಾಗಿ ಸಾಗುತ್ತಲೇ ಇದೆ. ಪೂರೈಕೆಯಲ್ಲಿ ಉಂಟಾದ ಕೊರತೆಯಿಂದ ಈ ಏರಿಕೆ ಕಂಡುಬಂದಿದ್ದು, ಇನ್ನು ಹದಿನೈದು ದಿನಗಳಲ್ಲಿ ಹೊಸ ಬೆಳೆ ಮಾರ್ಕೆಟ್ ಗೆ ಬರುವುದು ಕಷ್ಟ ಎನ್ನಲಾಗುತ್ತಿದೆ. ಹಾಗಾಗಿ, ಗ್ರಾಹಕರ ಕಣ್ಣೀರು ತರಿಸಲು ಈರುಳ್ಳಿ ತಯಾರಾಗುತ್ತಿದೆ. ಎರಡು ತಿಂಗಳ ಕೆಳಗೆ ಈರುಳ್ಳಿ ಮಾರ್ಕೆಟ್ ನಲ್ಲಿ ಉಂಟಾದ ಹಾಹಾಕಾರ ಮಾದರಿಯ ಕೊರತೆ ಮತ್ತು ಬೇಡಿಕೆ ಮತ್ತೊಮ್ಮೆ ಆಗುತ್ತಾ ಅನ್ನೋ ಭಯ ಆವರಿಸಿದೆ.

You may also like

Leave a Comment