Home » ವಿಡಿಯೋ ಕಾಲ್ ಮೂಲಕವೂ ಬ್ಯಾಂಕ್ ಖಾತೆ ತೆರೆಯಬಹುದು | ಹೇಗೆ ? ಇಲ್ಲಿದೆ ನೋಡಿ ಮಾಹಿತಿ

ವಿಡಿಯೋ ಕಾಲ್ ಮೂಲಕವೂ ಬ್ಯಾಂಕ್ ಖಾತೆ ತೆರೆಯಬಹುದು | ಹೇಗೆ ? ಇಲ್ಲಿದೆ ನೋಡಿ ಮಾಹಿತಿ

0 comments

ಇಂದು ಬ್ಯಾಂಕ್ ಖಾತೆ ತೆರೆಯಬೇಕು ಅಂದ್ರೆ ಅದಕ್ಕೆ ಕೆವೈಸಿ ಅಗತ್ಯವಾಗಿದೆ. ಗ್ರಾಹಕ ನೀಡಿರುವ ಮಾಹಿತಿಗಳು ಸರಿಯಾಗಿವೆಯೇ ಎಂಬದನ್ನು ಪರಿಶೀಲಿಸಿ, ದೃಢೀಕರಿಸಲು ಕೆವೈಸಿ ಬ್ಯಾಂಕಿಗೆ ಸಹಾಯ ಮಾಡುತ್ತದೆ. ಈ ಹಿಂದೆ ಕೆವೈಸಿ ಪೂರ್ಣಗೊಳಿಸಲು ಗ್ರಾಹಕರು ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕು ಎಂಬ ನಿಯಮ ಇತ್ತು. ಆದರೆ, ಇತ್ತೀಚೆಗಷ್ಟೇ RBI ಕೆವೈಸಿ ಮಾಡಲು ಗ್ರಾಹಕರು ಬ್ಯಾಂಕ್ ಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದೆ. ಹಾಗೇ ಬ್ಯಾಂಕ್ ಗಳು ಸೇರಿದಂತೆ ನಿಯಂತ್ರಿತ ಸಂಸ್ಥೆಗಳಿಗೆ ಕೆವೈಸಿ ಪರಿಶೀಲನೆಯನ್ನು ವಿಡಿಯೋ ಚಾಟ್ ಮೂಲಕ ಪೂರ್ಣಗೊಳಿಸಲು ಅವಕಾಶ ಕಲ್ಪಿಸಿದೆ.

ವಿಡಿಯೋ ಕೆವೈಸಿ ಸೌಲಭ್ಯವನ್ನು ಕೋಟಕ್ ಮಹೀಂದ್ರ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹಾಗೂ ಯೆಸ್ ಬ್ಯಾಂಕ್ ಗಳು ನೀಡುತ್ತವೆ. ಈ ಸೌಲಭ್ಯದಿಂದ ಗ್ರಾಹಕರು ಮನೆಯಲ್ಲೇ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ವಿಡಿಯೋ ಕೆವೈಸಿ ಹೇಗೆ ಸಾಧ್ಯ? ಪ್ರಕ್ರಿಯೆ ಏನು? ಎಂಬುದನ್ನು ನೋಡೋಣ.

ವಿಡಿಯೋ ಕೆವೈಸಿ :

  • ಮೊದಲು ನೀವು ಖಾತೆ ತೆರೆಯಲು ಬಯಸುವ ಬ್ಯಾಂಕ್ ನ ವೆಬ್ ಸೈಟ್ ಗೆ ಭೇಟಿ ನೀಡಬೇಕು.
  • ನಂತರ ವಿಡಿಯೋ ಕಾಲ್ ಸಮಯ ನಿಗದಿಪಡಿಸಬೇಕು.
  • ವಿಡಿಯೋ ಕಾಲ್ ಗೆ ಸೇರ್ಪಡೆಗೊಳ್ಳುವ ಲಿಂಕ್ ಜೊತೆಗೆ ನಿಮಗೆ ಅಟೋಮ್ಯಾಟಿಕ್ ಇ-ಮೇಲ್ ಅಥವಾ ಮೆಸೇಜ್ ಬರುತ್ತದೆ.
  • ನಂತರ ನಿಗದಿತ ಸಮಯಕ್ಕೆ ಬ್ಯಾಂಕ್ ಸಿಬ್ಬಂದಿಗಳೊಂದಿಗೆ ವಿಡಿಯೋ ಕಾಲ್ ಗೆ ಸೇರ್ಪಡೆಗೊಳ್ಳಿ.
  • ಬ್ಯಾಂಕ್ ಸಿಬ್ಬಂದಿಗೆ ವಿಡಿಯೋ ಕರೆ ಮೂಲಕ ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು.
  • ಅಧಿಕೃತ ಅರ್ಹ ದಾಖಲೆಗಳೊಂದಿಗೆ OSV ಚೆಕ್ ಮಾಡಿ.
  • ಗ್ರಾಹಕರ ಗೂಗಲ್ ಮ್ಯಾಪ್ಸ್ ಹಾಗೂ ಜಿಯೋ ಟ್ಯಾಗಿಂಗ್ ಸಹಾಯದಿಂದ ವಿಳಾಸ ದೃಢೀಕರಣ, ರಿಯಲ್ ಟೈಮ್ ಇಮೇಜ್ ಕ್ಯಾಪ್ಚರ್, ಇರ್ಯಾಟಿಕ್ ಬಾಡಿಲಿ ಮೋಷನ್ಸ್ ಸೇರಿದಂತೆ ಇತರ ಪರಿಶೀಲನೆಗಳು ಆಗುತ್ತವೆ.
  • ನಂತರ ದಾಖಲೆ ಹಾಗೂ ವ್ಯಾಲಿಡೇಷನ್ ಜೊತೆಗೆ ಫೇಸ್ ಮ್ಯಾಚ್ ಮಾಡಲಾಗುತ್ತದೆ.
  • ಪರಿಶೀಲನೆ ಬಳಿಕ ಬ್ಯಾಂಕ್ ಸಿಬ್ಬಂದಿ ನಿಮ್ಮ ಕೆವೈಸಿ ಅರ್ಜಿಯನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು.
  • ಅಡಿಟರ್ ಮಾಹಿತಿಗಳನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಪೂರ್ಣಗೊಳಿಸುತ್ತಾರೆ.
  • ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಗ್ರಾಹಕರಿಗೆ ಅಧಿಸೂಚನೆ ಬರುತ್ತದೆ.

ಕೆವೈಸಿಗೆ ಬೇಕಾಗುವ ದಾಖಲೆಗಳು ?

• ಪಾನ್ ಕಾರ್ಡ್(PAN Card)
• ಆಧಾರ್ ಕಾರ್ಡ್ (Aadhaar Card)
• ಮತದಾರರ ಚೀಟಿ(Voter’s Identity Card)
• ಡ್ರೈವಿಂಗ್ ಲೈಸೆನ್ಸ್ (Driving Licence)
• ನರೇಗಾ ಉದ್ಯೋಗ ಚೀಟಿ
• ಪಾಸ್ ಪೋರ್ಟ್( Passport)
ನೀವು ಇವುಗಳಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಗುರುತು ಹಾಗೂ ವಿಳಾಸ ದೃಢೀಕರಣಕ್ಕೆ ಬ್ಯಾಂಕ್ ಗೆ ನೀಡಬೇಕು.

You may also like

Leave a Comment