PF Amount: ಪಿಎಫ್ ಖಾತೆದಾರರಿಗೆ (PF)ಮುಖ್ಯ ಮಾಹಿತಿಯೊಂದು ಹೊರ ಬಿದ್ದಿದೆ. ನಿಮ್ಮ ಕೆಲಸದ ನಡುವೆ ಕೂಡ ಪಿಎಫ್ ಹಣವನ್ನು ಸರಳ ಹಾಗೂ ಸುಲಲಿತವಾಗಿ 72 ಗಂಟೆಯಲ್ಲೇ ಪಡೆದುಕೊಳ್ಳಬಹುದು.
ಅರೇ, ಇದು ಹೇಗೆ ಎಂದು ಯೋಚಿಸುವ ಮಂದಿಗೆ ಉತ್ತರ ಇಲ್ಲಿದೆ ನೋಡಿ. ನೀವು ಒಂದು ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಕೇವಲ 72 ಗಂಟೆಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಆಗುವ ಹಾಗೆ ಮಾಡಿಕೊಳ್ಳಬಹುದು. ನೀವು ತ್ವರಿತ ಹಣವನ್ನು ಇಚ್ಚಿಸಿದರೆ ಕೆಲಸದ ನಡುವೆ, ‘ಕೋವಿಡ್ ಅಡ್ವಾನ್ಸ್’ ಆಯ್ಕೆಯನ್ನು ಬಳಕೆ ಮಾಡುವ ಮೂಲಕ ಪಿಎಫ್ ಹಣವು(PF Amount)ಸುಮಾರು 72 ಗಂಟೆಗಳ ಒಳಗೆ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ.
ಹಾಗಿದ್ರೆ, ‘ಕೋವಿಡ್ ಅಡ್ವಾನ್ಸ್’ ಮೂಲಕ ಪಿಎಫ್ ಹಣವನ್ನು ಹಿಂಪಡೆಯುವುದು ಹೇಗೆ ಅಂತೀರಾ?
# ಇದಕ್ಕಾಗಿ ನೀವು ಮೊದಲು ಇಪಿಎಫ್ಒನ ಅಧಿಕೃತ ಪೋರ್ಟಲ್ unifiedportal- mem.epfindia.gov.in/memberinterface ಗೆ ಭೇಟಿ ನೀಡಬೇಕು.
# ಆ ಬಳಿಕ, ಯುಎಎನ್ ಸಂಖ್ಯೆ, ಪಾಸ್ವರ್ಡ್ ಮತ್ತು ಕ್ಯಾಪ್ಟಾ ಕೋಡ್ ಅನ್ನು ಇಲ್ಲಿ ನಮೂದಿಸಿಕೊಂಡು ಲಾಗಿನ್ ಆಗಬೇಕು.
# ಪೋರ್ಟಲ್ ಗೆ ಹೋದ ಬಳಿಕ, ‘ಆನ್ ಲೈನ್ ಸೇವೆಗಳು ಆಯ್ಕೆಯನ್ನು ಕ್ಲಿಕ್ ಮಾಡಿಕೊಂಡು ಕೆಳಗೆ ಬಂದು ಕ್ರೈಮ್(Claim)ಆಯ್ಕೆಯನ್ನು ಕ್ಲಿಕ್ಕಿಸಿ.
# ಇದರ ನಂತರ, ನಿಮ್ಮ ಬ್ಯಾಂಕ್ ಖಾತೆಯ ಖಾತೆ ಸಂಖ್ಯೆಯನ್ನು ನಮೂದಿಸಿಕೊಂಡು ಪರಿಶೀಲಿಸಬೇಕು.
# ಪಿಎಫ್ ಮುಂಗಡ ಫಾರ್ಮ್ ಮೇಲೆ ಕ್ಲಿಕ್ ಮಾಡಿಕೊಂಡು ಹಣವನ್ನು ಹಿಂಪಡೆಯಲು ಕಾರಣವೇನು ಮತ್ತು ಎಷ್ಟು ಹಣ ಬೇಕು ಎಂಬುದನ್ನು ಭರ್ತಿ ಮಾಡಿ.
# ನಂತರ, ಚೆಕ್ ಅಥವಾ ಪಾಸ್ಟುಕ್ಷ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್ಲೋಡ್ ಮಾಡಬೇಕು.
# ಆ ಬಳಿಕ, ಆಧಾರ್ ಕಾರ್ಡ್ ಲಿಂಕ್ ಮಾಡಿದ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ.
# OTP ಯನ್ನ ನಮೂದಿಸಿ ಮತ್ತು ಸಲ್ಲಿಸಿ.
ಎಲ್ಲ ಪ್ರಕ್ರಿಯೆ ಸರಿಯಾದರೆ ಸುಮಾರು 72 ಗಂಟೆಗಳ ಒಳಗೆ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ
ಇದನ್ನೂ ಓದಿ: Viral News: 50 ರಾಜ್ಯದಲ್ಲಿ 100 ಹುಡುಗಿಯರ ಜೊತೆ ಡೇಟಿಂಗ್ ಮಾಡಿದ ಭೂಪ !! ಆದ್ರೂ ಇವ್ನಿಗೆ ಇನ್ನೂ ‘ಅದು’ ಸಿಕ್ಕಿಲ್ವಂತೆ !!
