Home » Portable AC : ಈ ಪೋರ್ಟೇಬಲ್‌ ಎಸಿ ಜೊತೆ ನಿಮಗೆ ವಿದ್ಯುತ್‌ ಬಿಲ್‌ ಕಡಿಮೆ ಜೊತೆಗೆ ಕೂಲ್‌ ಕೂಲ್‌ ಆನಂದ ಅನುಭವಿಸುವಿರಿ!

Portable AC : ಈ ಪೋರ್ಟೇಬಲ್‌ ಎಸಿ ಜೊತೆ ನಿಮಗೆ ವಿದ್ಯುತ್‌ ಬಿಲ್‌ ಕಡಿಮೆ ಜೊತೆಗೆ ಕೂಲ್‌ ಕೂಲ್‌ ಆನಂದ ಅನುಭವಿಸುವಿರಿ!

1 comment
Portable AC

Portable AC : ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ಜನರು ದಿನನಿತ್ಯ ಚಟುವಟಿಕೆಯಲ್ಲಿ ತೊಡಗಲು ಬಹಳ ಸಮಸ್ಯೆ ಆಗಿದೆ. ಬೇಸಿಗೆ ಕಾಲದಲ್ಲಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಫ್ಯಾನ್, ಕೂಲರ್, ಎಸಿಯಂತಹ ಸಾಧನಗಳು ಅತ್ಯಾವಶ್ಯಕ. ಅದರಲ್ಲೂ, ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ಎಸಿ ಮತ್ತು ಕೂಲರ್‌ನಂತಹ ಸಾಧನಗಳು ತುಂಬಾ ಅನಿವಾರ್ಯ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.

ಆದ್ದರಿಂದ ನಿಮ್ಮ ಮನೆಯನ್ನು ತಂಪಾಗಿರಿಸಲು ಪರಿಪೂರ್ಣವಾಗಿರುವ, ಕಡಿಮೆ ಬಜೆಟ್ ನಲ್ಲಿ ನೀವೂ ಕೂಡ ಎಸಿ ಖರೀದಿಸಲು ಯೋಚಿಸುತ್ತಿದ್ದರೆ, ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಮಿತ ವಿದ್ಯುತ್ ಬಳಸುವ ಈ ಪೋರ್ಟಬಲ್ ಎಸಿ (Portable AC)ನಿಮಗೆ ಪರಿಚಯಿಸಲಾಗಿದೆ.

ಪೋರ್ಟಬಲ್ ಎಸಿ ವಿಶೇಷತೆಗಳು:
ಈ ಪೋರ್ಟಬಲ್ ಎಸಿ ಮನೆಯನ್ನು ಕ್ಷಣ ಮಾತ್ರದಲ್ಲಿ ತಂಪಾಗಿಸುತ್ತದೆ. ಇದು ಮಿತ ವಿದ್ಯುತ್ ಬಳಸುವುದರಿಂದ ವಿದ್ಯುತ್ ಬಿಲ್ ಹೆಚ್ಚಾಗುವ ಟೆನ್ಷನ್ ಇರುವುದಿಲ್ಲ.ಇದನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸುಲಭವಾಗಿ ಸಾಗಿಸಬಹುದು.

ಮುಖ್ಯವಾಗಿ ಈ ಮಿನಿ ಪೋರ್ಟಬಲ್ ಎಸಿ 500 ಮಿಲಿ ವಾಟರ್ ಟ್ಯಾಂಕ್‌ನೊಂದಿಗೆ ಬರುತ್ತದೆ. ಈ ಟ್ಯಾಂಕ್ ಅನ್ನು ಒಮ್ಮೆ ಪೂರ್ತಿಯಾಗಿ ತುಂಬಿದರೆ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ತಂಪಾದ ಹವಾ ಪಡೆಯಬಹುದು.

ಈ ಪೋರ್ಟಬಲ್ ಎಸಿ ಪ್ರಸಿದ್ಧ ಈ-ಕಾಮರ್ಸ್ ವೆಬ್ಸೈಟ್ ಅಮೆಜಾನ್‌ನಲ್ಲಿ 74% ರಿಯಾಯಿತಿಯೊಂದಿಗೆ ಲಭ್ಯವಿದೆ. ಅಂದರೆ 18,738 ರೂಪಾಯಿಗಳ ಪೋರ್ಟಬಲ್ ಎಸಿಯನ್ನು ಕೇವಲ 4,810 ರೂ.ಗಳಿಗೆ ನಿಮ್ಮದಾಗಿಸಬಹುದಾಗಿದೆ.

You may also like

Leave a Comment