Home » Post Office : ಅಂಚೆ ಕಚೇರಿಯಲ್ಲಿ ಹಣ ಹೂಡಿಕೆ ಮಾಡುವವರಿಗೆ ಇಲ್ಲಿದೆ ಭರ್ಜರಿ ಸಿಹಿ ಸುದ್ದಿ!

Post Office : ಅಂಚೆ ಕಚೇರಿಯಲ್ಲಿ ಹಣ ಹೂಡಿಕೆ ಮಾಡುವವರಿಗೆ ಇಲ್ಲಿದೆ ಭರ್ಜರಿ ಸಿಹಿ ಸುದ್ದಿ!

1 comment
Post Office saving schemes

Post Office saving schemes :ದೇಶದ ಯಾವುದೇ ಊರಿಗೆ ಹೋದರೂ ಅಂಚೆ ಕಚೇರಿಯು(post office) ನಮಗೆ ಕಾಣಸಿಗುತ್ತದೆ.ಇದರಲ್ಲಿ ಜನರು ಹಣವನ್ನು ಸುರಕ್ಷಿತವಾಗಿ (safe)ಇಡಲು ಉತ್ತಮವಾದ ಆಯ್ಕೆಯಾಗಿದೆ. ಈ ಅಂಚೆ ಕಚೇರಿಯಲ್ಲಿ ಜನರಿಗೆ ಹಣದ ಹೂಡಿಕೆಗೆ(investment) ಯಾವುದೇ ಮಿತಿ ಇಲ್ಲ.

ಜನರ ಹಿತದೃಷ್ಟಿಗಾಗಿ ಸರ್ಕಾರ ನಡೆಸುವ ದೊಡ್ಡಮಟ್ಟದ ಉಳಿತಾಯ(Post Office saving schemes) ಖಾತೆ(account) ಎನ್ನಬಹುದು. ಈ ಯೋಜನೆಯಲ್ಲಿ ಜನರು ಐದು ವರ್ಷಗಳ ಕಾಲ ಹಣದ ಹೂಡಿಕೆಯನ್ನು ಮಾಡಬಹುದು. ಪೋಸ್ಟ್ ಆಫೀಸ್ ನ ಯಾವುದೇ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದಲ್ಲಿ ಜನರು ಹಣವನ್ನು(money) ಉಳಿತಾಯ ಮಾಡಬಹುದು ಹಾಗೂ ಒಂದಕ್ಕಿಂತ ಹೆಚ್ಚು ಖಾತೆಯನ್ನು ತೆರೆಯಬಹುದು. ಉಳಿತಾಯ ಖಾತೆಯಲ್ಲಿ ಹಣವನ್ನು ಕಳೆದುಕೊಳ್ಳುವ ಯಾವುದೇ ಭಯ ಭೀತಿ ಇರುವುದಿಲ್ಲ.

ಅಂಚೆ ಕಚೇರಿಯಲ್ಲಿ ಹಣವನ್ನು ಹೂಡಿಕೆ ಮಾಡುವುದು ಹೆಚ್ಚಿನ ರೀತಿಯ ಬಡ್ಡಿಯ(intrest) ಯೋಜನೆಯಾಗಿದೆ. 1.5 ಲಕ್ಷದವರೆಗೆ ತೆರಿಗೆ (Tax)ವಿನಾಯಿತಿಯನ್ನು ಜನರು ಇದರಿಂದ ಪಡೆದುಕೊಳ್ಳಬಹುದು. ಅಂಚೆ ಕಚೇರಿಯಲ್ಲಿ ಜನರು ತನ್ನ ಉಳಿತಾಯ ಖಾತೆಯಲ್ಲಿ ಹಣವನ್ನು ಹೂಡಿಕೆ ಮಾಡಿದ ಮೇಲೆ ಮುಕ್ತಾಯದ ನಂತರ ಠೇವಣಿ ಹಣವನ್ನು ಮತ್ತು ಬಡ್ಡಿಯನ್ನು ಸೇರಿಸುವ ಮೂಲಕ ಹಣವನ್ನು ಹಿಂತಿರುಗಿಸಲಾಗುತ್ತದೆ.

ಈ ಉಳಿತಾಯ ಯೋಜನೆಯಲ್ಲಿ ಜನರು 5 ಲಕ್ಷದವರೆಗೂ ಠೇವಣಿ(deposit) ಮಾಡಿದರೆ ನಂತರ ಐದು ವರ್ಷಗಳ ಮುಕ್ತಾಯದ ಮೇಲೆ 7 ಲಕ್ಷ ರೂಪಾಯಿಗಳನ್ನು ಪಡೆಯಬಹುದು. ಈ ಉಳಿತಾಯ ಖಾತೆಯಲ್ಲಿ 5 ಲಕ್ಷದ ಉಳಿತಾಯದ ಮೇಲೆ 2, 01,276 ಬಡ್ಡಿಯನ್ನು ಜನರು ಪಡೆಯಬಹುದು. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ತೆರೆಯುವ ಸೌಲಭ್ಯ ಇದ್ದರೆ ಈ ಯೋಜನೆಯನ್ನು ತೆರೆಯಬಹುದು.

ಉಳಿತಾಯ ಖಾತೆಯನ್ನು ಯಾರೆಲ್ಲ ತೆರೆಯಬಹುದು?

10 ವರ್ಷದಿಂದ ಮೇಲ್ಪಟ್ಟ ಮಗು(child) ತನ್ನ ಹೆಸರಿನಲ್ಲೇ ಈ ಉಳಿತಾಯ(savings) ಖಾತೆ ಯೋಜನೆಯನ್ನು ತೆರೆಯಬಹುದು. ಆದರೆ 10 ವರ್ಷದ ಒಳಗಿನ ಮಗುವಿನ ಉಳಿತಾಯ ಖಾತೆಯನ್ನು ಅವರ ಪೋಷಕರು (parents)ತೆರೆಯಬಹುದು. ಖಾತೆ( account) ತೆರೆದ ಐದು ವರ್ಷಗಳವರೆಗೂ ಹಣವನ್ನು ಹಿಂಪಡೆಯಲು ಎಂದಿಗೂ ಸಾಧ್ಯವಿಲ್ಲ.ಇದರಲ್ಲಿ ಕುಟುಂಬದ ಯಾವುದೇ ಸದಸ್ಯರನ್ನು ಕೂಡ ನಾಮಿನಿ (nomine) ಮಾಡಬಹುದು ಮತ್ತು ಯಾವುದೇ ರೀತಿಯ ಮೊತ್ತವನ್ನು(money) ಹೂಡಿಕೆ ಮಾಡಬಹುದು ಈ ಯೋಜನೆಯಲ್ಲಿ ಒಂದುವರೆ ಲಕ್ಷದವರೆಗೆ ತೆರಿಗೆ ವಿನಾಯಿತಿ ಕೂಡ ಲಭ್ಯವಿದೆ.

You may also like

Leave a Comment