Home » 20ರೂ.ರಿಚಾರ್ಜ್ ಅಮಾನ್ಯ: ಗ್ರಾಹಕನಿಗೆ ಮರುಪಾವತಿಗೆ ಏ‌ರ್‌ಟೆಲ್ ಗೆ ಆಯೋಗ ಆದೇಶ

20ರೂ.ರಿಚಾರ್ಜ್ ಅಮಾನ್ಯ: ಗ್ರಾಹಕನಿಗೆ ಮರುಪಾವತಿಗೆ ಏ‌ರ್‌ಟೆಲ್ ಗೆ ಆಯೋಗ ಆದೇಶ

by Praveen Chennavara
0 comments

20 ರೂ.ರೀಚಾರ್ಜ್ ಮಾಡಿದರೂ ರಿಚಾರ್ಜ್ ಅಮಾನ್ಯವಾಗಿದೆ ಎಂದು ಸಂದೇಶ ರವಾನಿಸಿ, ಹೊರಹೋಗುವ ಮತ್ತು ಒಳಬರುವ ಕರೆಗಳನ್ನು ನಿಲ್ಲಿಸಿದ್ದ ಭಾರ್ತಿ ಏರ್‌ಟೆಲ್ ಲಿಮಿಟೆಡ್ 20 ರೂಪಾಯಿಯನ್ನು ಗ್ರಾಹಕನಿಗೆ ಮರುಪಾವತಿ ಮಾಡುವಂತೆ ಮತ್ತು ಹಾನಿ, ದಾವೆ ವೆಚ್ಚವಾಗಿ ರೂ.500ನ್ನು ನೀಡುವಂತೆ ಗ್ರಾಹಕರ ವ್ಯಾಜ್ಯಗಳ ಪರಿಹಾರದ ಆಯೋಗ ಆದೇಶಿಸಿದೆ.

ನಿವೃತ್ತ ಚಾರ್ಟಡ್ ಅಕೌಂಟೆಂಟ್ ಆಗಿರುವ ಷರೀಫ್ ದೊಡ್ಡಕಾನಳ್ಳಿ ಎಂಬವರು ಆಗಸ್ಟ್ 7ರಂದು 20 ರೂಪಾಯಿ ಅನ್ ಲೈನ್‌ನಲ್ಲಿ ರಿಚಾರ್ಜ್ ಮಾಡಿದ್ದರು, ರಿಚಾರ್ಜ್ ಮಾಡಿದ್ದಕ್ಕೆ ಮೆಸೇಜ್ ಕೂಡಾ ಬಂದಿತ್ತು.

ಟಾಕ್ ಟೈಮ್ 14.95 ರೂಪಾಯಿ ಆಗಿತ್ತು. ಆದರೆ ಆ ದಿನ ಒಳಬರುವ ಮತ್ತು ಹೊರಹೋಗುವ ಕರೆಗಳನ್ನು ನಿಲ್ಲಿಸಲಾಯಿತು, ರೀಚಾರ್ಜ್ ಅಮಾನ್ಯವಾಗಿದೆ ಎಂದು ಸಂದೇಶ ಬಂದಿತ್ತು.ಹಣ ಕಳೆದುಕೊಂಡ ಪರೀಫ್ ಅವರು ಆನ್‌ಲೈನ್ ಕಾನೂನು ವೇದಿಕೆಯನ್ನು ಸಂಪರ್ಕಿಸಿದರು.

ನವೆಂಬರ್ 2021ರಲ್ಲಿ ಅತ್ಯಲ್ಪ ಶುಲ್ಕದೊಂದಿಗೆ ದೂರು ದಾಖಲಿಸಿದ್ದರು.ಬೆಂಗಳೂರು ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು, 20 ರೂಪಾಯಿ ಮರುಪಾವತಿ ಮಾಡುವಂತೆ ಏರ್‌ಟೆಲ್‌ಗೆ ನಿರ್ದೇಶನ ನೀಡಿದ್ದು ಮಾತ್ರವಲ್ಲದೆ ಷರೀಫ್‌ಗೆ ಹಾನಿ ಮತ್ತು ದಾವೆ ವೆಚ್ಚವಾಗಿ ತಲಾ 500 ರೂಪಾಯಿ ಪಾವತಿಸಲು ಆದೇಶಿಸಿದೆ.

You may also like

Leave a Comment