Home » SBI Lending Rate: ಸಾಲದ ಮೇಲೆ ಬಡ್ಡಿದರ ಹೆಚ್ಚಳ ಮಾಡಿದ ಎಸ್‌ಬಿಐ!

SBI Lending Rate: ಸಾಲದ ಮೇಲೆ ಬಡ್ಡಿದರ ಹೆಚ್ಚಳ ಮಾಡಿದ ಎಸ್‌ಬಿಐ!

0 comments

SBI ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು (MCLR) 10 ಮೂಲಾಂಶದಷ್ಟು ಹೆಚ್ಚಳ ಮಾಡಿದೆ. ಇದರಿಂದ ಸಾಲದ ಮೇಲಿನ ಇಎಂಐ ಮೊತ್ತ ಹೆಚ್ಚಾಗಲಿದೆ. ಆರ್​ಬಿಐ ರೆಪೊ ದರ ಹೆಚ್ಚಳ ಮಾಡಿದ ಬೆನ್ನಲ್ಲೇ ಹಲವು ಬ್ಯಾಂಕ್ ಗಳು ಸಾಲದ ಬಡ್ಡಿದರ ಹೆಚ್ಚಳ ಮಾಡಿತ್ತು. ಸದ್ಯ ಎಸ್​​ಬಿಐ ಕೂಡ ಈ ಕ್ರಮ ಕೈಗೊಂಡಿದೆ. SBI ನ ಈ ನಿರ್ಧಾರದಿಂದ ವಾಹನ, ಗೃಹ ಸಾಲ ಪಡೆದವರಿಗೆ ಸಾಲದ ಹೊರೆ ಇನ್ನಷ್ಟು ಹೆಚ್ಚಾಗಲಿದೆ. ಇನ್ನು ಈ ಪರಿಷ್ಕೃತ ಬಡ್ಡಿ ದರ ಪೆ.15 ರಿಂದ (ಇಂದು) ಆರಂಭವಾಗುತ್ತದೆ.

ಒಂದು ದಿನದ MCLR ದರವನ್ನು 10 ಮೂಲಾಂಶ ಹೆಚ್ಚಳ ಮಾಡಿದ್ದು, ಶೇ 7.85ರಿಂದ ಶೇ 7.95ಕ್ಕೆ ನಿಗದಿಪಡಿಸಲಾಗಿದೆ. ಇನ್ನು ಒಂದು ತಿಂಗಳಿಗೆ MCLR ದರ ​​ಶೇ 8ರಿಂದ ಶೇ 8.10 ಆಗಿರುತ್ತದೆ. ಹಾಗೇ ಮೂರು ತಿಂಗಳಿಗೆ ಶೇ 8ರಿಂದ ಶೇ 8.10ಕ್ಕೆ ನಿಗದಿ ಮಾಡಲಾಗಿದೆ. ಆರು ತಿಂಗಳಿಗೆ ಶೇ 8.30ರಿಂದ ಶೇ 8.40, ಒಂದು ವರ್ಷಕ್ಕೆ ದರವನ್ನು ಶೇ 8.40ಯಿಂದ ಶೇ 8.50ಕ್ಕೆ ನಿಗದಿ ಮಾಡಿದ್ದು, ಎರಡು ವರ್ಷಗಳ MCLR ದರದ 10 ಮೂಲಾಂಶ ಹೆಚ್ಚಳ, ಶೇ 8.50ರಿಂದ ಶೇ 8.60 ಆಗಿದೆ. ಮೂರು ವರ್ಷದ ಎಂಸಿಎಲ್​ಆರ್​ ದರವನ್ನು ಶೇ 8.60ರಿಂದ ಶೇ 8.70ಕ್ಕೆ ಏರಿಕೆ ಮಾಡಲಾಗಿದೆ.

ಎಂಸಿಎಲ್​ಆರ್ ಹೆಚ್ಚಳದಿಂದ ಸಾಲ ಪಡೆದವರು ಮತ್ತು ಇಎಂಐ ಪಾವತಿಸುವವರ ಮೇಲೆ ಪರಿಣಾಮ ಬೀರಲಿದೆ. ಇವರು ಎಂಸಿಎಲ್​ಆರ್ ಹೆಚ್ಚಳದಿಂದ ಮುಂದಿನ ಅವಧಿಯಿಂದ ಹೆಚ್ಚು ಮೊತ್ತದ ಇಎಂಐ ಪಾವತಿಸಬೇಕಾಗುತ್ತದೆ. ಈ ಹಿಂದೆ ಆರ್​​ಬಿಐ ರೆಪೊ ದರ ಹೆಚ್ಚಿಸಿರುವ ಕಾರಣ ಬ್ಯಾಂಕ್ ಆಫ್ ಬರೋಡ, ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿವೆ. ಇದರಿಂದ ಈ ಎಲ್ಲಾ ಬ್ಯಾಂಕ್​ಗಳ ಗ್ರಾಹಕರಿಗೆ ಇಎಂಐ ದುಬಾರಿಯಾಗಲಿದೆ. ಸದ್ಯ SBI ಗ್ರಾಹಕರಿಗೂ ಇಎಂಐ ದುಬಾರಿಯಾಗಲಿದೆ.

You may also like

Leave a Comment