Home » SBI Salary Account: ಆನ್​ಲೈನ್​ನಲ್ಲೇ ಸಾಲರಿ ಅಕೌಂಟ್ ತೆರೆಯಬಹುದು | ಇಲ್ಲಿದೆ ಸಂಪೂರ್ಣ ಮಾಹಿತಿ

SBI Salary Account: ಆನ್​ಲೈನ್​ನಲ್ಲೇ ಸಾಲರಿ ಅಕೌಂಟ್ ತೆರೆಯಬಹುದು | ಇಲ್ಲಿದೆ ಸಂಪೂರ್ಣ ಮಾಹಿತಿ

0 comments

ಪ್ರಸ್ತುತ ವೇತನ ಪಡೆಯುವ ವರ್ಗಕ್ಕೆ ಲಭ್ಯವಿರುವ ಸ್ಯಾಲರಿ ಅಕೌಂಟ್ ವಿಶೇಷ ಉಳಿತಾಯ ಖಾತೆಯಾಗಿದೆ. ಈ ಖಾತೆಯು ವೇತನ ಪಡೆಯುವ ವರ್ಗಕ್ಕೆ ಹಲವಾರು ಪ್ರಯೋಜನಗಳನ್ನು ಸೇವೆಗಳನ್ನು ನೀಡುತ್ತದೆ.
ಸ್ಯಾಲರಿ ಖಾತೆಯು ಅತೀ ಸುರಕ್ಷಿತವಾಗಿರುತ್ತದೆ. ಹಾಗೆಯೇ ನೆಟ್‌ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಪ್ರಯೋಜನಗಳು ಕೂಡಾ ಈ ಖಾತೆಗೆ ಲಭ್ಯವಾಗುತ್ತದೆ. ನೀವು ಕೂಡಾ ಸ್ಯಾಲರಿ ಅಕೌಂಟ್ ಅನ್ನು ಮಾಡಿಸಬೇಕು ಎಂದಿದ್ದರೆ ಎಸ್‌ಬಿಐನಲ್ಲಿ ಹಲವಾರು ಸ್ಯಾಲರಿ ಅಕೌಂಟ್ ಆಯ್ಕೆಗಳಿವೆ.

ಸ್ಯಾಲರಿ ಅಕೌಂಟ್ ಶೂನ್ಯ ಠೇವಣಿಯ ಖಾತೆ ಎಂಬುದೂ ಇದಕ್ಕೆ ಬಹುಮುಖ್ಯ ಕಾರಣ. ಸರ್ಕಾರಿ ಸ್ವಾಮ್ಯದ ಸ್ಟೇಟ್​​ ಬ್ಯಾಂಕ್ ಆಫ್ ಇಂಡಿಯಾ ಸರ್ಕಾರಿ ನೌಕರರಿಗೆ, ಕಾರ್ಪೊರೇಟರ್​ಗಳಿಗೆ, ಖಾಸಗಿ ವಲಯದ ಉದ್ಯೋಗಿಗಳಿಗೆ ಅನೇಕ ಸೇವೆಗಳನ್ನು ನೀಡುತ್ತಿದೆ. ಆನ್​ಲೈನ್ ಮೂಲಕವೇ ಸಾಲರಿ ಅಕೌಂಟ್​ ತೆರೆಯುವ ಸುಲಭ ಆಯ್ಕೆಯನ್ನೂ ಗ್ರಾಹಕರಿಗೆ ನೀಡಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಉಳಿತಾಯ ಖಾತೆಯನ್ನು ಸ್ಯಾಲರಿ ಅಕೌಂಟ್ ಆಗಿ ಪರಿವರ್ತಿಸಲೂ ಅವಕಾಶವಿದೆ.

ಸದ್ಯ ​ ಯಾವೆಲ್ಲ ರೀತಿಯ ಸ್ಯಾಲರಿ ಅಕೌಂಟ್ ಇದೆ ಎಂದು ಈ ಕೆಳಗೆ ಪಟ್ಟಿ ಮಾಡಲಾಗಿದೆ.

  • ಕೇಂದ್ರ ಸರ್ಕಾರದ ವೇತನ ಪ್ಯಾಕೇಜ್ (ಸಿಜಿಎಸ್​ಪಿ)
  • ರಾಜ್ಯ ಸರ್ಕಾರದ ವೇತನ ಪ್ಯಾಕೇಜ್ (ಎಸ್​ಜಿಎಸ್​ಪಿ)
  • ರೈಲ್ವೆ ವೇತನ ಪ್ಯಾಕೇಜ್ (ಆರ್​ಎಸ್​ಪಿ)
  • ರಕ್ಷಣಾ ವೇತನ ಪ್ಯಾಕೇಜ್ (ಡಿಎಸ್​​ಪಿ)
  • ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ವೇತನ ಪ್ಯಾಕೇಜ್ (ಸಿಎಪಿಎಸ್​ಪಿ)
  • ಪೊಲೀಸ್ ವೇತನ ಪ್ಯಾಕೇಜ್ (ಪಿಎಸ್​ಪಿ)
  • ಭಾರತೀಯ ಕರಾವಳಿ ರಕ್ಷಣಾ ಪಡೆ ವೇತನ ಪ್ಯಾಕೇಜ್ (ಐಸಿಗಿಎಸ್​ಪಿ)
  • ಕಾರ್ಪೊರೇಟ್ ಸಾಲರಿ ಪ್ಯಾಕೇಜ್ (ಸಿಎಸ್​ಪಿ)
  • ಸ್ಟಾರ್ಟಪ್ ಸಾಲರಿ ಪ್ಯಾಕೇಜ್ (ಎಸ್​​ಯುಎಸ್​ಪಿ)

ಸ್ಯಾಲರಿ ಅಕೌಂಟ್‌ನಿಂದ ದೊರೆಯುವ ಪ್ರಯೋಜನ:

  • ಉದ್ಯೋಗಿಯ ವೇತನ ಪಾವತಿಗಾಗಿ ಇರುವ ಖಾತೆಯಾಗಿದೆ.
  • ಸ್ಯಾಲರಿ ಅಕೌಂಟ್‌ನಲ್ಲಿ ಯಾವುದೇ ಮಾಸಿಕ ಸರಾಸರಿ ಮೊತ್ತ ಶುಲ್ಕವಿಲ್ಲ.
  • ಜಿರೋ ಬ್ಯಾಲೆನ್ಸ್ ಖಾತೆ ಇದಾಗಿದೆ.
  • ಆಟೋ ಸ್ವೀಪ್ ಸೇವೆಯಿದೆ. ಅಂದರೆ ಮೊತ್ತ ಸಮಯಕ್ಕೆ ಸರಿಯಾಗಿ ಇಎಂಐ, ಮೊದಲಾದವುಗಳಿಗೆ ಕಡಿತವಾಗುವ ವ್ಯವಸ್ಥೆಯಿದೆ.
  • ವಿಶೇಷ ಪ್ರಯೋಜನಗಳೊಂದಿಗೆ ಉಚಿತ ಡೆಬಿಟ್ ಕಾರ್ಡ್
  • ಎಸ್‌ಬಿಐ ಮತ್ತು ಇತರೆ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಅನಿಯಮಿತ ವಹಿವಾಟು
  • ಡಿಮ್ಯಾಂಡ್ ಡ್ರಾಫ್ಟ್ ಇಶುಯೆನ್ಸ್ ಶುಲ್ಕ ಮನ್ನಾ
  • ಮಲ್ಟಿ ಸಿಟಿ ಚೆಕ್ ಶುಲ್ಕ ಮನ್ನಾ
  • ವೈಯಕ್ತಿಕ ಅಪಘಾತಕ್ಕೆ ಕವರೇಜ್
  • ಸ್ಪರ್ಧಾತ್ಮಕ ಬಡ್ಡಿದರದಲ್ಲಿ ವೈಯಕ್ತಿಕ ಸಾಲ, ಕಾರು ಸಾಲ, ಗೃಹ ಸಾಲ
  • ಅರ್ಹತೆಗೆ ಅನುಗುಣವಾಗಿ ಓವರ್‌ಡ್ರಾಫ್ಟ್ ವ್ಯವಸ್ಥೆ
  • ಅರ್ಹತೆಗೆ ಅನುಗುಣವಾಗಿ ವಾರ್ಷಿಕ ಲಾಕರ್ ಬಾಡಿಗೆ ಶುಲ್ಕ ವಿನಾಯಿತಿ

ಸ್ಯಾಲರಿ ಅಕೌಂಟ್‌ ತೆರೆಯಲು ಬೇಕಾಗುವ ದಾಖಲೆಗಳು:

  • ಪಾಸ್‌ಪೋರ್ಡ್ ಗಾತ್ರದ ಪೋಟೋಗ್ರಾಫ್
  • ವಿಳಾಸ ಮತ್ತು ಗುರುತು ಪುರಾವೆ
  • ಉದ್ಯೋಗ ಮಾಡುತ್ತಿರುವುದನ್ನು ಖಾತರಿಪಡಿಸುವ ಪುರಾವೆ
  • ಇತ್ತೀಚಿನ ಸ್ಯಾಲರಿ ಸ್ಪಿಪ್

ಆನ್​ಲೈನ್ ಮೂಲಕ ಎಸ್​ಬಿಐ ಸಾಲರಿ ಅಕೌಂಟ್ ತೆರೆಯುವ ಕ್ರಮಗಳು :
ಹಂತ 1: ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: Request a Call Back ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿ.
ಹಂತ 3: ಎಲ್ಲ ಮಾಹಿತಿಯನ್ನು ಸರಿಯಾಗಿ ನಮೂದಿಸಲಾಗಿದೆಯೇ ಎಂದು ಪರಿಶೀಲಿಸಿ
ಹಂತ 4: ಪರಿಶೀಲನೆ ಮಾಡಿದ ಬಳಿಕ ಫಾರ್ಮ್ ಅನ್ನು ಸಬ್‌ಮಿಟ್ ಮಾಡಿ (submit ಕ್ಲಿಕ್ ಮಾಡಿ)
ಹಂತ 5: ಬ್ಯಾಂಕ್‌ನ ಪ್ರತಿನಿಧಿಗಳು ನಿಮ್ಮನ್ನು ಸಂಪರ್ಕ ಮಾಡುತ್ತಾರೆ
ಹಂತ 6: ಮುಂದಿನ ಪ್ರಕ್ರಿಯೆಗಳ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಅದನ್ನು ಪಾಲಿಸಿದರೆ ಪ್ರಕ್ರಿಯೆ ಪೂರ್ಣವಾಗಲಿದೆ.

ಇದರ ಹೊರತು ನಿಮ್ಮ ಉಳಿತಾಯ ಖಾತೆಯನ್ನು ನೀವು ಸ್ಯಾಲರಿ ಅಕೌಂಟ್ ಆಗಿ ಬದಲಾವಣೆ ಮಾಡಿಕೊಳ್ಳಬಹುದು. ಅಥವಾ ನೀವು ಬ್ಯಾಂಕ್‌ಗೆ ಹೋಗಿ ಸ್ಯಾಲರಿ ಅಕೌಂಟ್ ಅನ್ನು ತೆರೆಯಬಹುದಾಗಿದೆ.

You may also like

Leave a Comment