Home » SBI: ನಿಮ್ಮ ಖಾತೆಯಿಂದ 295 ರೂ. ಕಡಿತವಾಗಿದೆಯೇ? ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

SBI: ನಿಮ್ಮ ಖಾತೆಯಿಂದ 295 ರೂ. ಕಡಿತವಾಗಿದೆಯೇ? ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

0 comments

SBI: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI. ಇದು ಜನರಿಗೆ ಹಲವು ರೀತಿಯಲ್ಲಿ ಸೇವೆಗಳನ್ನು ಒದಗಿಸುತ್ತಿದೆ. ವಿಭಿನ್ನ ಪ್ರಕಾರದ ಉಳಿತಾಯ ಖಾತೆಯನ್ನೂ ನೀಡುತ್ತದೆ. ಗ್ರಾಹಕರು ತಮ್ಮ ಹಣಕಾಸಿನ ಅಗತ್ಯಗಳಿಗೆ ಸೂಕ್ತವಾದ ಉಳಿತಾಯ ಖಾತೆಯನ್ನು ಆಯ್ಕೆ ಮಾಡಲು ಇದು ಸಹಾಯ ಮಾಡುತ್ತದೆ.

ದೇಶದಾದ್ಯಂತ ಕೋಟ್ಯಾಂತರ ಜನರಿಗೆ ಸೇವೆಯನ್ನು ಒದಗಿಸುವ ಈ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಬ್ಯಾಂಕ್ ನ ನಿಮ್ಮ ಖಾತೆಯಿಂದ 295 ರೂ. ಕಡಿತವಾಗಿದೆಯೇ? ಯಾಕೆ ಕಡಿತವಾಗಿರಬಹುದು ಎಂದು ಯೋಚಿಸಿದ್ದೀರಾ? ಕಾರಣ ಇಲ್ಲಿದೆ.

ನಿಮ್ಮ ಖಾತೆಯಿಂದ ಹಣ ಕಡಿತವಾಗಲು ಕಾರಣವೇನೆಂದರೆ, ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್ (NACH) ಕಾರಣದಿಂದಾಗಿ ನಿಮ್ಮ ಖಾತೆಯಿಂದ ಹಣ ಕಡಿತವಾಗಿದೆ. ಖಾತೆಯಿಂದ ಇಎಂಐನ ಆಟೋ ಪಾವತಿಗಾಗಿ ನಾಚ್ ಬಳಸಲಾಗುತ್ತದೆ. ನೀವು ಇಎಂಐ(EMI) ಮೂಲಕ ಸಾಲ ಪಡೆಯುವಾಗ, ಖರೀದಿ ಮಾಡುವಾಗ ನಿಮ್ಮ ಖಾತೆಯಿಂದ ಹಣವನ್ನು ಕಡಿತ ಮಾಡಲಾಗುತ್ತದೆ. ನಿಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತ ಇರಲಿ ಎಂಬ ಕಾರಣಕ್ಕೆ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ.

ಇಎಂಐ/ಮ್ಯಾಂಡೇಟ್ ಡೆಬಿಟ್ ಆಗದೆ ನೇರವಾಗಿ ಡೆಬಿಟ್ ಆದರೆ, ನಿಮ್ಮ ಖಾತೆಗೆ 295 ರೂಪಾಯಿ ದಂಡವನ್ನು ಹಾಕಲಾಗುತ್ತದೆ.
ಬ್ಯಾಂಕ್ ತಿಂಗಳ ಆಧಾರದಲ್ಲಿ ದಂಡವನ್ನು ನಿಗದಿ ಮಾಡದೇ ಇದ್ದರೆ,
ಕೆಲವು ತಿಂಗಳವರೆಗೆ ದಂಡ ಸಂಗ್ರಹಿಸುತ್ತದೆ. ಬಳಿಕ ಪೂರ್ಣ
ಡೆಬಿಟ್ ಮಾಡುತ್ತದೆ. ಖಾತೆಯಲ್ಲಿ ಹೆಚ್ಚಿನ ಹಣ(money) ಇಲ್ಲದಿದ್ದರೆ ಬ್ಯಾಂಕ್(bank) ರೂ 250 ದಂಡವನ್ನು ವಿಧಿಸುತ್ತದೆ. ಈ ಪೆನಾಲ್ಟಿಯು ಶೇಕಡ 18ರಷ್ಟು ಜಿಎಸ್‌ಟಿ(GST) ನೀಡುತ್ತದೆ. ಹಾಗಾಗಿ, 250 ರೂ.ಯಲ್ಲಿ 45 ರೂ. ಶೇಕಡ 18ರಷ್ಟು ಜಿಎಸ್‌ಟಿ ಆಗಿರುತ್ತದೆ. ಇವೆರಡೂ ಸೇರಿ 295 ಆಗಿರುತ್ತದೆ. ಈ ರೀತಿ ನಿಮ್ಮ ಖಾತೆಯಿಂದ ಮೊತ್ತ ಖಡಿತವಾಗುತ್ತದೆ. ಎಷ್ಟೋ ಜನರು ಏಕೆ ಹಣ ಕಡಿತವಾಗಿದೆ ಎಂದು ಚಿಂತೆಗೀಡಾಗಿರುತ್ತಾರೆ. ಕಾರಣ ಇಲ್ಲಿದೆ ತಿಳಿದುಕೊಳ್ಳಿರಿ.

You may also like

Leave a Comment